ಚೆನ್ನೈ:ಬಹುತೇಕರು ದೇವರು ಹಾಗೂ ಅಮಾನುಷ ಶಕ್ತಿಗಳ ಅಸ್ತಿತ್ವವನ್ನು ಬಲವಾಗಿ ನಂಬುತ್ತಾರೆ. ಆದರೆ, ಕೆಲವರು ಇದನ್ನು ಫ್ಯಾಂಟಸಿ ಎಂದು ತಳ್ಳಿಹಾಕುತ್ತಾರೆ. ವಿಜ್ಞಾನವು ತುಂಬಾ ಅಭಿವೃದ್ಧಿ ಹೊಂದುತ್ತಿರುವ ಸಮಯದಲ್ಲಿ, ಇದೆಲ್ಲ ಕೇವಲ ಅಸಂಬದ್ಧತೆ ಎಂದು ಮಾತನಾಡಿಕೊಳ್ಳುತ್ತಾರೆ. ಆದರೆ, ಕೆಲವು ವಿಚಿತ್ರ ಘಟನೆಗಳನ್ನು ನೋಡಿದಾಗ ಯಾವುದೋ ಅಗೋಚರ ಶಕ್ತಿ ಇದೆ ಎಂದು ಭಾಸವಾಗುತ್ತದೆ. ಇದು ಖಂಡಿತ ದೇವರ ಪವಾಡ ಎಂದು ನಂಬುವವರೇ ಹೆಚ್ಚು. ಇತ್ತೀಚಿಗೆ ಇಂತಹದೊಂದು ಅದ್ಭುತ ಘಟನೆ ಬೆಳಕಿಗೆ ಬಂದಿದೆ. ಇದನ್ನು ನೋಡಿ ಅಲ್ಲಿದ್ದವರೆಲ್ಲ ಇದು ಖಂಡಿತಾ ಪರಮಾತ್ಮನ ಲೀಲೆ ಎನ್ನುತ್ತಿದ್ದಾರೆ.
ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪವಾಡ ಸದೃಶ ಘಟನೆ ನಡೆದಿದೆ. ದೇವಾಲಯದ ಗರ್ಭಗುಡಿಯಲ್ಲಿ ನವಿಲು ಕಾಣಿಸಿಕೊಂಡಿದೆ. ಈ ಸುಂದರ ದೃಶ್ಯವನ್ನು ಕಂಡು ಭಕ್ತರು ಪುಳಕಿತರಾದರು. ಏಕೆಂದರೆ, ನವಿಲು, ಸುಬ್ರಹ್ಮಣ್ಯ ಸ್ವಾಮಿ ವಾಹನ ಎಂದು ಪುರಾಣದಲ್ಲಿ ಉಲ್ಲೇಖವಾಗಿದೆ. ಹೀಗಾಗಿ ನವಿಲು ಸುಬ್ರಹ್ಮಣ್ಯ ಸ್ವಾಮಿಯನ್ನು ಹುಡುಕಿಕೊಂಡು ಇಲ್ಲಿಗೆ ಬಂದಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಘಟನೆ ಕಳೆದ ವಾರ ನಡೆದಿದೆ. ಈ ವಿಸ್ಮಯಕಾರಿ ದೃಶ್ಯ ಕಂಡು ಜನ ಬೆರಗಾಗಿದ್ದಾರೆ. ಇದೆಲ್ಲ ಆ ದೇವರ ಮಹಿಮೆ ಎನ್ನುತ್ತಾರೆ ಭಕ್ತರು. ನೂರಾರು ಭಕ್ತರ ಸಮ್ಮುಖದಲ್ಲಿ ನವಿಲು ಮಂದಿರ ಪ್ರವೇಶಿಸಿತು. ಸುಬ್ರಹ್ಮಣ್ಯ ಸ್ವಾಮಿಗೆ ಆರತಿ ಸಲ್ಲಿಸುವಾಗ ಗರ್ಭಗುಡಿಯ ಮುಂದೆ ನವಿಲು ಕೂಗಿತು. ಸುಬ್ರಹ್ಮಣ್ಯ ಸ್ವಾಮಿಯ ಮೂರ್ತಿಗೆ ಆರತಿ ಸಲ್ಲಿಸಿದ ನಂತರ ಅರ್ಚಕರು ನವಿಲಿಗೆ ಆರತಿ ಸಲ್ಲಿಸಿದರು. ಅಷ್ಟೊಂದು ಜನ ಸೇರಿದ್ದರೂ ನವಿಲು ಕದಲದೆ ನಿಂತಿತ್ತು. ಆರತಿಯನ್ನು ಅರ್ಪಿಸುವವರೆಗೂ ಅಲ್ಲಿಯೇ ನಿಂತಿತ್ತು ಎನ್ನುತ್ತಾರೆ ಸ್ಥಳೀಯರು.
ದೇವಸ್ಥಾನಕ್ಕೆ ಬಂದಿದ್ದ ಭಕ್ತರೆಲ್ಲರೂ ಈ ಅದ್ಭುತ ದೃಶ್ಯವನ್ನು ತಮ್ಮ ಮೊಬೈಲ್​ಗಳಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಹರಿದಾಡುತ್ತಿದೆ. ಈ ಕುರಿತು ಮಾತನಾಡಿದ ದೇವಸ್ಥಾನದ ಆಡಳಿತಾಧಿಕಾರಿಗಳು, ಈ ದೇವಸ್ಥಾನಕ್ಕೆ ನವಿಲುಗಳು ಆಗಾಗ ಬರುತ್ತವೆ. ಆದರೆ ಇದೇ ಮೊದಲ ಬಾರಿಗೆ ನವಿಲು ಗರ್ಭಗುಡಿಯೊಳಕ್ಕೆ ತೆರಳಿ ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ಸಲ್ಲಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಈ ರೀತಿ ಹಿಂದೆಂದು ನಡೆದಿಲ್ಲ. ಈ ಸುಂದರ ದೃಶ್ಯವನ್ನು ಕಂಡ ಭಕ್ತರು ತಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣ ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ವಿಡಿಯೋ ಕೃಪೆ:Mic Tv News

ಪ್ರೇಯಸಿ ಗರ್ಭಿಣಿಯಾಗಿದ್ದಾಗಲೇ ಬೇರೊಬ್ಬನ ಜತೆ ಸರಸ! ತನ್ನ ಮಗಳಿಗಾಗಿ ಈತನ ಹೋರಾಟವೇ ರೋಚಕ

ನಿಜ ಹೇಳುತ್ತಿದ್ದೇನೆ ಆ ದಿನ ನಾನು ತುಂಬಾ ಹೆದರಿದ್ದೆ! ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನವೇ ಕೊಹ್ಲಿ ಮಾತು ವೈರಲ್​

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × one =
Remember me
