ಆಗ್ರಾ:ಮದುವೆ ಸಮಾರಂಭಗಳಲ್ಲಿ ಯಾವ್ಯಾವುದೋ ಕಾರಣಕ್ಕೆ ಕುಟುಂಬಗಳ ನಡುವೆ ಜಗಳಗಳು ನಡೆಯುವುದನ್ನು ನೀವು ಆಗಾಗ್ಗೆ ಕೇಳಿರಬಹುದು. ಆದರೆ ಇಲ್ಲಿ ನಡೆದ ಸಮಾರಂಭವೊಂದರಲ್ಲಿ ರಸಗುಲ್ಲಾ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಈ ಪ್ರಕರಣ ಉತ್ತರಪ್ರದೇಶದ ಆಗ್ರಾದಲ್ಲಿ ಬೆಳಕಿಗೆ ಬಂದಿದೆ. ಆಗ್ರಾದ ಶಂಸಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ (ನವೆಂಬರ್ 20) ತಡರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ರಸಗುಲ್ಲಾ ಕುರಿತು ಎರಡು ಕಡೆಯವರ ನಡುವೆ ಘರ್ಷಣೆ ಸಂಭವಿಸಿದೆ. ಗಲಾಟೆ ಹೆಚ್ಚಾದಾಗ ಕೋಲುಗಳನ್ನು ಬಳಸಲಾಯಿತು. ಇದರಲ್ಲಿ ಮಹಿಳೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಂಸಾಬಾದ್ ಪಟ್ಟಣದ ನಯಾಬನ್ಸ್ ರಸ್ತೆಯಲ್ಲಿರುವ ಸಂತೋಷಿ ಮಾತಾ ದೇವಸ್ಥಾನದ ಬಳಿ ವಿವಾಹ ಸಮಾರಂಭದಲ್ಲಿ ಔತಣಕೂಟ ನಡೆಯುತ್ತಿದ್ದು, ಈ ವೇಳೆ ರಸಗುಲ್ಲಾ ತಿನ್ನುವ ವಿಚಾರವಾಗಿ ಎರಡು ಕಡೆಯವರ ನಡುವೆ ವಾಗ್ವಾದ ನಡೆದು ಅದು ಘರ್ಷಣೆಗೆ ತಿರುಗಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಅನಿಲ್ ಶರ್ಮಾ ತಿಳಿಸಿದ್ದಾರೆ.
ಪೊಲೀಸರು ಎಲ್ಲಾ ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಎತ್ಮಾದ್‌ಪುರದಲ್ಲಿ ಮದುವೆಯಲ್ಲಿ ಸಿಹಿತಿಂಡಿಗಳ ಕೊರತೆಯ ಬಗ್ಗೆ ಜಗಳವಾಗಿತ್ತು. ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದರು.
दिनांक 19.11.2023 की रात्रि में थाना शमशाबाद क्षेत्रांतर्गत शादी में रसगुल्ले को लेकर दो पक्षों में मारपीट के प्रकरण में स्थानीय पुलिस द्वारा घायलों का मेडिकल/उपचार कराया गया है एवं तहरीर प्राप्त होने पर आवश्यक विधिक कार्यवाही की जाएगी। उक्त संबंध में ACP फतेहाबाद की बाइट।pic.twitter.com/puW5F7yjAG
— POLICE COMMISSIONERATE AGRA (@agrapolice)November 20, 2023

ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ಮೊದಲ ವಿಡಿಯೋ ಬಿಡುಗಡೆ; ವಾಕಿಟಾಕಿ ಮೂಲಕ ಹುರಿದುಂಬಿಸುತ್ತಿರುವ ರಕ್ಷಣಾ ತಂಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 1 =
Remember me
