ಕಾನ್ಪುರ:ಬಿತೂರ್​ ಗ್ರಾಮದಲ್ಲಿ ಸಹಚರರೊಂದಿಗೆ ಎಮಟು ಪೊಲೀಸರನ್ನು ಕೊಂದು ತಲೆಮರೆಸಿಕೊಂಡಿರುವ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಹೇಳಿಕೆ ಇರುವ ವಿಡಿಯೋವೊಂದು ಬಹಿರಂಗಗೊಂಡಿದೆ.
ಬಿಜೆಪಿ ಸಾಸಕರು ತನಗೆ ಸಹಾಯ ಮಾಡಿರುವುದಾಗಿ ದುಬೆ ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. ರಾಜಕೀಯ ವಲಯದಲ್ಲಿ ಇದು ಸಂಚಲನವನ್ನೇ ಸೃಷ್ಟಿಸಿದೆ.ತನ್ನ ಮನೆ ಮೇಲೆ ದಾಳಿ ನಡೆಯಲಿದೆ ಎಂದು ಪೊಲೀಸರು ನೀಡಿದ ಮಾಹಿತಿಯನ್ನೇ ಆಧರಿಸಿ ಅವರನ್ನೇ ಸಾಮೂಹಿಕವಾಗಿ ಕೊಂದ ವಿಕಾಸ್​ ದುಬೆ ಘಟನೆ ನಡೆದು ನಾಲ್ಕು ದಿನಗಳಾರೂ ಪೊಲೀಸರ ಕೈಗೆ ಸಿಕ್ಕಿಲ್ಲ.
ಇದನ್ನೂ ಓದಿ;ವಿಕಾಸ್​ ದುಬೆಯದ್ದು ಮನೆಯಲ್ಲ, ಮದ್ದುಗುಂಡಿನ ಕಾರ್ಖಾನೆ; ಇಡೀ ಪ್ರದೇಶ ಸ್ಫೋಟಕ್ಕೆ ಸಂಚು
ವಿಶೇಷ ಪೊಲೀಸ್​ ಪಡೆಯ ವಿಚಾರಣೆ ವೇಳೆ ತನಗೆ ಬಿಜೆಪಿ ಶಾಸಕ ಸಖ್ಯವಿದೆ. ಪೊಲೀಸ್​ ತನಿಖೆಯಿಂದ ತಪ್ಪಿಸಿಕೊಳ್ಳಲು ಅವರೇ ನೆರವಾಗಿದ್ದಾಗಿ ವಿಕಾಸ್​ ದುಬೆ ಹೇಳಿದ್ದಾನೆ. ಇದು 2017ರಲ್ಲಿ ವಿಚಾರಣೆ ವೇಳೆ ಪೊಲೀಸರು ಚಿತ್ರೀಕರಿಸಿದ ವಿಡಿಯೋ ಆಗಿದ್ದು, ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.
ಬಿಜೆಪಿ ಶಾಸಕರಾದ ಅಭಿಜಿತ್​ ಸಂಗಾ, ಭಗವತಿ ಸಾಗರ್​ ಹೆಸರು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ. 2017ರಲ್ಲಿ ತನಗೆ ಸಹಾಯ ಮಾಡಿದ್ದಾಗಿ ದುಬೆ ತಿಳಿಸಿದ್ದಾನೆ. ಭಿತೂರ್​ ನನ್ನ ವಿಧಾನಸಭಾ ಕ್ಷೇತ್ರದಲ್ಲಿದ್ದು, ಅಲ್ಲಿಯ ಜನರು ಸಹಾಯ ಕೋರಿ ನನ್ನ ಬಳಿಗೆ ಬರುತ್ತಾರೆ. ಆದರೆ, ವಿಕಾಸ್​ ದುಬೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಒತ್ತಾಯಿಸಿದ್ದಾಗಿ ಅಭಿಜಿತ್​ ಸಂಗಾ ಹೇಳಿದ್ದಾರೆ.
ಇದನ್ನೂ ಓದಿ;ಎದುರು ಬಂದವರ ಧರ್ಮ ಕೇಳಿ ಕೊಂದರು; ಶವಗಳನ್ನು ಚರಂಡಿಗೆಸೆದರು; ಪ್ರತ್ಯಕ್ಷದರ್ಶಿಗಳಿಂದ ಪೈಶಾಚಿಕತೆ ಅನಾವರಣ
ಭಿಲ್ಲೌರ್​ ಕ್ಷೇತ್ರದ ಶಾಸಕ ಭಗವತಿ ಸಾಗರ್​ ಕೂಡ ವಿಕಾಸ್​ ದುಬೆ ಜತೆ ನಂಟಿರುವುದನ್ನು ನಿರಾಕರಿಸಿದ್ದಾರೆ. ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಯತ್ನ ನಡೆದಿದ್ದು, ವಿಡಿಯೋ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಈ ನಡುವೆ, ವಿಕಾಸ್​ ದುಬೆ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನದ ಮೊತ್ತವನ್ನು 2.5 ಲಕ್ಷ ರೂ.ಗೆ ಏರಿಸಲಾಗಿದೆ.
ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 17 =
Remember me
