ನವದೆಹಲಿ: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದು ದಿನ ಮುಂಚಿತವಾಗಿ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದ್ದು, ದೇಶಾದ್ಯಂತ ಅದ್ಭುತ ಸ್ಪಂದನೆ ವ್ಯಕ್ತವಾಗಿದೆ. ಪ್ರಧಾನಿ ಮೋದಿ ಕೂಡ ಖುದ್ದು ಕಸ ಗುಡಿಸಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ಕುಸ್ತಿಪಟು ಅಂಕಿತ್ ಬೈಯನ್ ಪುರಿಯಾ ಜತೆ ಇಂದು ಸ್ವಚ್ಛತಾ ಅಭಿಯಾನದಲ್ಲಿ ಕೈಜೋಡಿಸಿ ಪ್ರಧಾನಿ ಮೋದಿ, ಅವರೊಂದಿಗೆ ಮುಕ್ತವಾಗಿ ಮಾತನಾಡುತ್ತ ಒಂದಷ್ಟು ಅನಿಸಿಕೆಗಳನ್ನು ಹಂಚಿಕೊಂಡರು. ಈ ವೇಳೆ ಅವರ ಬದುಕಿನ ಕುರಿತ ಎರಡು ಆಸಕ್ತಿಕರ ಸಂಗತಿ ಕೂಡ ಹೊರಬಿತ್ತು.
ನಾನು ಜಾಸ್ತಿ ವ್ಯಾಯಾಮ ಮಾಡುವುದಿಲ್ಲ ಎಂದ ಮೋದಿ, ಜೀವನದಲ್ಲಿ ದೈನಂದಿನ ಶಿಸ್ತು ಅತಿಮುಖ್ಯವಾಗಿದ್ದು, ನಾನು ಅದನ್ನು ಪಾಲಿಸುತ್ತೇನೆ ಎಂದು ಹೇಳಿದರು. ಆದರೆ ಎರಡು ವಿಚಾರದಲ್ಲಿ ನಾನು ಇನ್ನೂ ಶಿಸ್ತು ರೂಢಿಸಿಕೊಳ್ಳಬೇಕಾಗಿ ಎಂಬುದಾಗಿ ಅವರು ಹೇಳಿದರು.
ಇದನ್ನೂ ಓದಿ:Swachh Bharat Mission: ದೇಶದೆಲ್ಲೆಡೆ ಪ್ರಧಾನಿ ಮೋದಿಯಿಂದ ಸ್ವಚ್ಛತಾ ಅಭಿಯಾನ
ಎರಡು ವಿಷಯದಲ್ಲಿ ನಾನು ಇನ್ನೂ ಶಿಸ್ತು ರೂಢಿಸಿಕೊಳ್ಳಲು ಆಗಿಲ್ಲ. ಅದು ಒಂದು ನಿದ್ರೆ ಹಾಗೂ ಇನ್ನೊಂದು ಊಟ. ಅಂದರೆ ನನಗೆ ಸರಿಯಾದ ಸಮಯಕ್ಕೆ ಊಟ ಮಾಡುವಂಥ ಶಿಸ್ತು ರೂಢಿಸಿಕೊಳ್ಳಬೇಕಾಗಿದೆ. ಮತ್ತೊಂದು ನನಗೆ ಹೆಚ್ಚಿನ ನಿದ್ರೆ ಬೇಕಾಗಿದೆ, ಆದರೆ ಅದರಲ್ಲೂ ಶಿಸ್ತು ಮೂಡಿಲ್ಲ ಎಂದರು.
ಕಾರು ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವು; ವಾಹನ ಚಲಾಯಿಸುತ್ತಿದ್ದ ಚಿತ್ರನಟ ನಾಗಭೂಷಣ್ ಮದ್ಯಪಾನ ಮಾಡಿದ್ದರಾ?

ಲಕ್ಷುರಿ ಕಾರಲ್ಲಿ ಬಂದು ಸೊಪ್ಪು ಮಾರಿದ ರೈತ!; ಮಾರ್ಕೆಟ್​ಗೆ ಬರ್ತಿದ್ದಂತೆ ಪಂಚೆ ಬಿಚ್ಚಿ ವ್ಯಾಪಾರಕ್ಕಿಳಿದ ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
