ಮಹಾರಾಷ್ಟ್ರ:ಸರ್ಕಾರ ಹಾಗೂ ರೈತರ ನಡುವೆ ಆಗಾಗ್ಗೇ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ವಿವಿಧ ಸಂದರ್ಭಗಳಲ್ಲಿ ಬೇಡಿಕೆಗಳನ್ನು ಈಡೇರಿಸಲು ಪ್ರತಿಭಟನೆ ಮಾಡಲಾಗುತ್ತದೆ. ಈ ವೇಳೆ ಸರ್ಕಾರದ ಗಮನ ಬೇಗ ಸೆಳೆಯಳು ವಿಭಿನ್ನ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗುತ್ತಾರೆ. ಇದೀಗ ಇಲ್ಲೊಬ್ಬರು ರೈತರು ತನ್ನ ದೇಹವನ್ನು ಮಣ್ಣಿನಲ್ಲಿ ಹೂತು ಪ್ರತಿಭಟನೆ ನಡೆಸಿ ಸುದ್ದಿಯಾಗಿದ್ದಾರೆ.
ಮೂರು ವರ್ಷಗಳ ಹಿಂದೆ ಕಲ್ಯಾಣ ಯೋಜನೆಯಡಿ ಮಂಜೂರು ಮಾಡಿದ್ದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕಾಗದ ಪತ್ರವನ್ನು ನೀಡದಿರುವುದನ್ನು ವಿರೋಧಿಸಿ ರೈತರೊಬ್ಬರು ಮಣ್ಣಿನಲ್ಲಿ ತನ್ನ ದೇಹದ ಕುತ್ತಿಗೆ ಭಾಗದವರೆಗೂ ಹೂತುಕೊಂಡು ಪ್ರತಿಭಟನೆ ನಡೆಸಿರುವ ಘಟನೆ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ. 2019ರಲ್ಲಿ ಕರ್ಮವೀರ್ ದಾದಾಸಾಹೇಬ್ ಗಾಯಕ್ವಾಡ್ ಸಬ್ಲಿಕರಣ್ ಸ್ವಾಭಿಮಾನ್ ಯೋಜನೆಯಡಿ ಸುನಿಲ್ ಜಾಧವ್ ಎಂಬುವವರಿಗೆ 2 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು. ಆದರೆ ಮಂಜೂರಾದ ಭೂಮಿಯ ಕಾಗದ ಪತ್ರಗಳು ಮಾತ್ರ ಇನ್ನೂ ಸುನಿಲ್ ಜಾಧವ್ ಕೈಗೆ ಸೇರಿಲ್ಲ.
ಎರಡು ವರ್ಷ ಕಳೆದರೂ ಮಂಜೂರಾದ ಭೂಮಿಯ ಕಾಗದ ಪತ್ರ ಸಿಕ್ಕಿಲ್ಲ ಎಂದು ರೈತ ಸುನಿಲ್ ಜಾಧವ್ ಸಿಟ್ಟಾಗಿದ್ದಾರೆ. ಇದರಿಂದ ಮಂಜೂರಾದ ಭೂಮಿಯಲ್ಲೇ ಸಮಾಧಿಯಾಗಲು ನಿರ್ಧರಿಸಿದ್ದು, ಪ್ರತಿಭಟನೆ ನಡೆಸಿದ್ದಾರೆ. ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅನಿಲ್ ಜಾಧವ್ ಹೇಳಿಕೊಂಡಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 10 =
Remember me
