ಡೆಹ್ರಾಡೂನ್:ಗುಡ್ಡಗಾಡು ರಾಜ್ಯವಾದ ಉತ್ತರಾಖಂಡದಲ್ಲಿ ಕಳೆದ ಒಂದು ವಾರದಿಂದ ಮುಂಗಾರು ಅಬ್ಬರಿಸುತ್ತಿದ್ದು, ಬುಧವಾರ ಭಾರಿ ಮಳೆಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಚಾರ್​ಧಾಮ ಯಾತ್ರಾರ್ಥಿಗಳೂ ಸೇರಿದಂತೆ ಹಿಮಾಲಯದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ತೆರಳುವ ಯಾತ್ರಿಗಳು ತೊಂದರೆ ಅನುಭವಿಸುವಂತಾಗಿದೆ.
ಇದನ್ನೂ ಓದಿ:ಉತ್ತರ ಕನ್ನಡದಲ್ಲಿ ಮಳೆ ಆರ್ಭಟ! ರಾಜ್ಯದ ಐದು ಜಿಲ್ಲೆಗಳಿಗೆ ಆರೆಂಜ್ ಆಲರ್ಟ್​ ಘೋಷಣೆ
ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದ ಪ್ರಮುಖ ನದಿಗಳಾದ ಅಲಕನಂದಾ, ಮಂದಾಕಿನಿ ಮತ್ತು ಭಾಗೀರಥಿ ನದಿಗಳು ಈಗಾಗಲೇ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗಂಗಾ ಮತ್ತು ಸರಯೂ ನದಿಗಳು ಅಪಾಯದ ಮಟ್ಟ ತಲುಪುತ್ತಿವೆ. ಗೋಮತಿ, ಕಾಳಿ, ಗೌರಿ, ಶಾರದಾ ನದಿಗಳಲ್ಲೂ ನೀರಿನ ಮಟ್ಟ ಕ್ರಮೇಣ ಹೆಚ್ಚುತ್ತಿದೆ.
ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸುಮಾರು 100 ರಸ್ತೆಗಳನ್ನು ಬಂದ್​ ಮಾಡಲಾಗಿದೆ. ಅಲಕಾನಂದ ನದಿ ಉಕ್ಕಿ ಹರಿಯುತ್ತಿದ್ದರಿಂದ ರುದ್ರಪ್ರಯಾಗದಲ್ಲಿ ನದಿಯ ಪಕ್ಕ ಸ್ಥಾಪಿಸಲಾಗಿರುವ 10 ಅಡಿ ಎತ್ತರದ ಶಿವನ ವಿಗ್ರಹ ಮುಳುಗಿದೆ.
ಉತ್ತರಾಖಂಡದ ಹವಾಮಾನ ಇಲಾಖೆಯು ಚಂಪಾವತ್, ಅಲ್ಮೋರಾ, ಫಿಥೋರ್‌ಗಢ, ಉಧಮ್‌ಸಿಂಗ್ ನಗರ ಮತ್ತು ಕುಮಾವೂನ್ ಜಿಲ್ಲೆಗಳ ಹಲವು ಭಾಗಗಳಲ್ಲಿ ಮುಂದಿನ ವಾರ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಸಿದೆ.
ಭಾರಿ ಮಳೆಯಿಂದಾಗಿ ಡೆಹ್ರಾಡೂನ್, ಪೌರಿ, ತೆಹ್ರಿ ಮತ್ತು ಹರಿದ್ವಾರದಲ್ಲೂ ಆರೆಂಜ್ ಅಲರ್ಟ್ ನೀಡಲಾಗಿದೆ.
ಅಲ್ಮೋರಾದ ಚೌಕುಟಿಯಾದಲ್ಲಿ ಜೂ.3 ಮತ್ತು ಜೂ.4ರಂದು 72.5 ಮಿಮೀ ಮಳೆಯಾಗಿದೆ. ಡೆಹ್ರಾಡೂನ್‌ನಲ್ಲಿನ 105 ಮಿಮೀ ಭಾರಿ ಮಳೆಯಾಗಿದ್ದು, ರಾಜಧಾನಿಯ ಬಹುತೇಕ ರಸ್ತೆಗಳು ಜಲಾವೃತವಾಗಿವೆ. ನೈನಿತಾಲ್ ಮತ್ತು ಮಸ್ಸೂರಿಗಳಲ್ಲಿ ಕ್ರಮವಾಗಿ 149.5 ಮಿಮೀ ಮತ್ತು 114 ಮಿಮೀ ಅತಿ ಹೆಚ್ಚು ಮಳೆಯಾಗಿದೆ.
ಭೂಕುಸಿತದಿಂದಾಗಿ ಪಿಥೋರಗಢ್‌ನಲ್ಲಿ 21 ರಸ್ತೆಗಳನ್ನು ನಿರ್ಬಂಧಿಸಲಾಗಿದೆ. ಚಮೋಲಿಯ ಲಂಬಗಡ ಬಳಿಯ ಪಾಗಲ್ ನಾಲಾ ಮತ್ತು ಉತ್ತರಕಾಶಿಯ ದಾಬರ್ಕೋಟ್ ಬಳಿ ಬದರಿನಾಥ್ ಮತ್ತು ಯಮುನೋತ್ರಿ ಹೆದ್ದಾರಿಗಳನ್ನು ಮುಚ್ಚಲಾಗಿದೆ.
ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ಮತ್ತು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‌ಒ) ನಿರ್ಬಂಧಿಸಲಾದ ಹೆದ್ದಾರಿಗಳನ್ನು ಪುನಃ ತೆರೆಯಲು ಕೆಲಸ ಮಾಡುತ್ತಿದೆ. ಮಂಗಳವಾರದಿಂದ ನಿರಂತರ ಮಳೆಯಾಗುತ್ತಿರುವ ಬಾಗೇಶ್ವರದಲ್ಲಿ ಪರಿಸ್ಥಿತಿ ಬೀಕರವಾಗಿದ್ದು, 24 ರಸ್ತೆಗಳನ್ನು ಮುಚ್ಚಲಾಗಿದೆ.
ಶಾಲೆಗಳಿಗೆ ರಜೆ:ನೈನಿತಾಲ್ ಜಿಲ್ಲೆಯಲ್ಲಿ ಗುಡುಗು, ಮಿಂಚು ಮತ್ತು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪರಿಣಾಮವಾಗಿ ಜಿಲ್ಲಾಧಿಕಾರಿ 1 ರಿಂದ 12 ನೇ ತರಗತಿವರೆಗಿನ ಎಲ್ಲಾ ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳನ್ನು ಶುಕ್ರವಾರ ಕಡ್ಡಾಯವಾಗಿ ಮುಚ್ಚಬೇಕು ಎಂದು ಆದೇಶಿಸಿದ್ದಾರೆ.
ಮಳೆ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕೂಡಲೇ ತಗ್ಗು ಪ್ರದೇಶಗಳನ್ನು ತೆರವು ಮಾಡುವಂತೆ ಜನತೆಗೆ ಆದೇಶಿಸಿದರು. ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ನದಿ ತೀರದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಆದೇಶ ನೀಡಲಾಗಿದೆ.
ವಾಯು ಮಾಲಿನ್ಯ: ದೆಹಲಿಗೆ ಮಾತ್ರವಲ್ಲ, ಬೆಂಗಳೂರಿಗೂ ಎಚ್ಚರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 7 =
Remember me
