ನವದೆಹಲಿ:ಖಾದ್ಯ ತೈಲದ ಆಮದನ್ನು ತಗ್ಗಿಸಲು ಸ್ವಾತಂತ್ರೊ್ಯೕತ್ಸವದ ದಿನ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ‘ಖಾದ್ಯ ತೈಲ- ಆಯಿಲ್ ಪ್ಲಾಮ್ ರಾಷ್ಟ್ರೀಯ ಮಿಷನ್’ (ಎನ್​ಎಂಇಒ-ಒಪಿ)ಗೆ ಮುಂದಿನ ಐದು ವರ್ಷದವರೆಗೆ 11,040 ಕೋಟಿ ರೂಪಾಯಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.
ಎನ್​ಎಂಇಒ-ಒಪಿ ಯೋಜನೆಯಿಂದ ವಿಶೇಷವಾಗಿ ಈಶಾನ್ಯ ರಾಜ್ಯಗಳಿಗೆ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಕ್ಕೆ ಅನುಕೂಲ ಆಗಲಿದೆ. ಎಣ್ಣೆಕಾಳುಗಳನ್ನು ಬೆಳೆಯುವ ಪ್ರದೇಶ ಹಿಗ್ಗಲಿದೆ. ತಾಳೆ ಎಣ್ಣೆ ಉತ್ಪಾದನೆ ಹೆಚ್ಚಲಿದೆ. ತನ್ಮೂಲಕ ಖಾದ್ಯ ತೈಲಕ್ಕಾಗಿ ವಿದೇಶಗಳ ಮೇಲಿನ ಅವಲಂಬನೆ ತಗ್ಗಲಿದೆ ಎಂದು ಪ್ರಧಾನಿ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಸಭೆ ನಂತರ ವಾರ್ತಾ ಸಚಿವ ಅನುರಾಗ್ ಠಾಕೂರ್ ಮಾಧ್ಯಮಗಳಿಗೆ ವಿವರಿಸಿದರು.
ಈ ಯೋಜನೆಯಿಂದ ರೈತರ ಉತ್ಪನ್ನಕ್ಕೆ ಖಚಿತ ಬೆಲೆ ದೊರೆಯಲಿದೆ. ಎನ್​ಎಂಇಒ-ಒಪಿ ಅಡಿಯಲ್ಲಿ 15 ಹೆಕ್ಟೇರ್​ನಲ್ಲಿ ಬಿತ್ತನೆ ಕಾರ್ಯ ನಡೆಸಲು 1 ಕೋಟಿ ರೂ. ನೆರವು ದೊರೆಯಲಿದೆ. ಎಣ್ಣೆಕಾಳು ಬೆಳೆಗಾರರಿಗೆ ವಿವಿಧ ಯೋಜನೆಯಡಿಯಲ್ಲಿ ಪ್ರತಿ ಹೆಕ್ಟೇರ್​ಗೆ ನೀಡುತ್ತಿದ್ದ 12 ಸಾವಿರ ರೂ. ಸಹಾಯಧನವನ್ನು 29 ಸಾವಿರ ರೂ.ಗೆ ಏರಿಸಲಾಗಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದರು.
ಸಂಪುಟದ ಇತರ ನಿರ್ಣಯ# ಈಶಾನ್ಯ ರಾಜ್ಯಗಳ ಕೃಷಿ ಆಧಾರಿತ ಮಾರುಕಟ್ಟೆ ನಿಗಮದ (ಎನ್​ಇಆರ್​ಎಎಂಎಸಿ) ಪುನಶ್ಚೇತಕ್ಕೆ 77.45 ಕೋಟಿ ರೂ. ಅನುದಾನ.
# ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಸ್ವಿಜರ್ಲೆಂಡ್​ನ ಎಫ್​ಐಎನ್​ಡಿಪ್ರಯೋಗಾಲಯದ ಮಧ್ಯೆ ಸಂಶೋಧನಾ ಒಪ್ಪಂದಕ್ಕೆ ಸಮ್ಮತಿ.
# ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾಲಯ ಮತ್ತು ಅಮೆರಿಕದ ಫ್ಲಾರಿಡಾ ಅಂತಾರಾಷ್ಟ್ರೀಯ ವಿವಿ ಮಧ್ಯೆಯ ಒಡಂಬಡಿಕೆಗೆ ಒಪ್ಪಿಗೆ.

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 − two =
Remember me
