ನವದೆಹಲಿ:ಹೊಸದಾಗಿ ಮುದ್ರಣವಾಗುವ ನೋಟುಗಳಲ್ಲಿ ಲಕ್ಷ್ಮೀ ದೇವತೆ ಮತ್ತು ಭಗವಾನ್​ ಗಣಪತಿಯ ಫೋಟೋಗಳನ್ನು ಸೇರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಅವರು ಪ್ರಧಾನಿ ನರೇಂದ್ರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ್​ ಕೇಜ್ರಿವಾಲ್​, ಹೊಸ ನೋಟುಗಳಲ್ಲಿ ಒಂದು ಕಡೆ ಮಹಾತ್ಮ ಗಾಂಧಿ ಫೋಟೋ ಸಹ ಇರಲಿ ಮತ್ತು ಇನ್ನೊಂದು ಕಡೆ ಗಣೇಶ ಹಾಗೂ ಲಕ್ಷ್ಮೀಯ ಫೋಟೋ ಸಹ ಇರಲಿ ಎಂದು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ.
ನೋಟುಗಳ ಮೇಲೆ ಈ ಎರಡು ಹಿಂದು ದೇವರುಗಳ ಫೋಟೋ ಹಾಕುವುದರಿಂದ ದೇಶದ ಏಳಿಗೆಗೆ ನೆರವಾಗಲಿದೆ ಮತ್ತು ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು ಎಂದು ಅರವಿಂದ್​ ಕೇಜ್ರಿವಾಲ್​ ಅಭಿಪ್ರಾಯಪಟ್ಟಿದ್ದಾರೆ.
ಸಾಕಷ್ಟು ಶ್ರಮ ಅಥವಾ ಪ್ರಯತ್ನಗಳನ್ನು ಮಾಡಿದರೂ ಕೆಲವೊಮ್ಮೆ ದೇವರ ಆಶೀರ್ವಾದ ಇಲ್ಲದಿದ್ದರೆ, ನಮ್ಮ ಶ್ರಮವೆಲ್ಲ ವ್ಯರ್ಥವಾಗುತ್ತವೆ. ಹೀಗಾಗಿ ಹೊಸದಾಗಿ ಮುದ್ರಣವಾಗುವ ನೋಟುಗಳಲ್ಲಿ ಗಣೇಶ ಮತ್ತು ಲಕ್ಷ್ಮೀ ಫೋಟೋಗಳನ್ನು ಮುದ್ರಿಸುವಂತೆ ನಾನು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಕೇಜ್ರಿವಾಲ್​ ಹೇಳಿದ್ದಾರೆ.(ಏಜೆನ್ಸೀಸ್​)
ಬಂಡೇ ಮಠದ ಬಸವಲಿಂಗ ಶ್ರೀ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಮಹಿಳೆ ಜತೆಗಿನ ವಿಡಿಯೋ ಕಾಲ್!​

ಎಐಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ: ಅಭಿನಂದನೆ ಸಲ್ಲಿಸಿದ ಸೋನಿಯಾ ಗಾಂಧಿ

ಹಂಪಿಯಲ್ಲಿ ಕಳೆದುಕೊಂಡಿದ್ದ 2 ದುಬಾರಿ ಐಫೋನ್​ಗಳನ್ನು ಯುವತಿಯರಿಬ್ಬರಿಗೆ ಮರಳಿಸಿದ ಪ್ರವಾಸಿ ಮಿತ್ರರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 2 =
Remember me
