ನವದೆಹಲಿ:ಹಿಟ್​ ಆ್ಯಂಡ್​ ರನ್​ ಅಪಘಾತಗಳಲ್ಲಿ ಸಾವು ಮತ್ತು ಗಂಭೀರ ಗಾಯಗಳಾದ ಸಂದರ್ಭದಲ್ಲಿ ಪರಿಹಾರದ ಮೊತ್ತವನ್ನು ವಾರ್ಷಿಕವಾಗಿ ಹೆಚ್ಚಿಸಬಹುದೇ ಎಂದು ಪರಿಗಣಿಸಲು ಸುಪ್ರೀಂಕೋರ್ಟ್​ ಕೇಂದ್ರಕ್ಕೆ ನಿರ್ದೇಶಿಸಿದೆ. ಎಂಟು ವಾರಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಾಲಯ ಈ ವಿಷಯವನ್ನು ಹೆಚ್ಚಿನ ಪರಿಗಣನೆಗಾಗಿ ಏ.22ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಜಸ್ಟಿಸ್​ ಅಭಯ್​ ಎಸ್​ ಓಕಾ ಮತ್ತು ಪಂಕಜ್​ ಮಿಥಾಲ್​ ಅವರಿದ್ದ ಪೀಠವು, ಹಿಟ್​ ಆ್ಯಂಡ್​ ರನ್​ ಅಪಘಾತದ ಪ್ರಕರಣ ಎಂದು ಪೊಲೀಸರು ನಿರ್ಧರಿಸಿದರೆ, ಅವರು ಯೋಜನೆಯ ಲಭ್ಯತೆ ಬಗ್ಗೆ ಸಂತ್ರಸ್ತರಿಗೆ ಅಥವಾ ಅವರ ಕಾನೂನು ಪ್ರತಿನಿಧಿಗಳಿಗೆ ತಿಳಿಸಬೇಕು ಎಂದಿದೆ. ಕಾಲಾನಂತರದಲ್ಲಿ ಹಣದ ಮೌಲ್ಯ ಕಡಿಮೆ ಆಗುತ್ತದೆ. ಪರಿಹಾರ ಮೊತ್ತ ವಾರ್ಷಿಕವಾಗಿ ಹೆಚ್ಚಿಸಬಹುದೇ ಎಂದು ಪರಿಗಣಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದಾಗಿ ಪೀಠ ಹೇಳಿದೆ.
ಪ್ರಸ್ತುತ ಮೋಟಾರು ವಾಹನ ಕಾಯ್ದೆಯು ಸಂತ್ರಸ್ತರಿಗೆ ಸಾವಿನ ಸಂದರ್ಭದಲ್ಲಿ 2 ಲ ರೂ. ಮತ್ತು ಹಿಟ್​ ಆ್ಯಂಡ್​ ರನ್​ ಅಪಘಾತಗಳ ಸಂದರ್ಭದಲ್ಲಿ ಉಂಟಾದ ಗಾಯಗಳಿಗೆ 50,000 ರೂ. ಪರಿಹಾರ ಪಡೆಯಲು ಅನುಮತಿಸುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
