ನವದೆಹಲಿ:ಸಗಟು ಹಣದುಬ್ಬರವು (ಹೋಲ್​ಸೇಲ್​ ಇನ್​ಫ್ಲೇಶನ್​) ಏಪ್ರಿಲ್‌ನಲ್ಲಿ ಸತತ ಎರಡನೇ ತಿಂಗಳಿಗೆ 1.26 ಪ್ರತಿಶತಕ್ಕೆ ಏರಿದೆ. ಇಂಧನ ಮತ್ತು ವಿದ್ಯುತ್ ಜತೆಗೆ ಆಹಾರ ಪದಾರ್ಥಗಳು, ವಿಶೇಷವಾಗಿ ತರಕಾರಿಗಳ ಬೆಲೆ ಏರಿಕೆಯ ಕಾರಣದಿಂದಾಗಿ ಸಗಟು ಹಣದುಬ್ಬರವು ಹೆಚ್ಚಳವಾಗಿದೆ.
ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು 2023ರ ಏಪ್ರಿಲ್‌ನಲ್ಲಿ ಶೇಕಡಾ 0.79 ರಷ್ಟಿತ್ತು. 2024ರ ಮಾರ್ಚ್​ನಲ್ಲಿ ಇದು ಶೇಕಡಾ 0.53 ರಷ್ಟಿತ್ತು.
“ಏಪ್ರಿಲ್ 2024 ರಲ್ಲಿ ಹಣದುಬ್ಬರದ ಧನಾತ್ಮಕ ದರವು ಪ್ರಾಥಮಿಕವಾಗಿ ಆಹಾರ ಪದಾರ್ಥಗಳು, ವಿದ್ಯುತ್, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ಉತ್ಪನ್ನಗಳ ತಯಾರಿಕೆ, ಇತರ ವಸ್ತುಗಳ ಉತ್ಪಾದನೆ ಬೆಲೆಗಳ ಹೆಚ್ಚಳದಿಂದ ಆಗಿದೆ” ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಮಾಹಿತಿಯ ಪ್ರಕಾರ, ಆಹಾರ ಪದಾರ್ಥಗಳ ಹಣದುಬ್ಬರವು ಮಾರ್ಚ್‌ನಲ್ಲಿ 6.88% ನಿಂದ ಏಪ್ರಿಲ್‌ನಲ್ಲಿ 7.74% ಗೆ ಏರಿದೆ. ತರಕಾರಿಗಳ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇಕಡಾ 23.60 ರಷ್ಟಿದ್ದು, ಅದರ ಹಿಂದಿನ ತಿಂಗಳಲ್ಲಿ ಶೇಕಡಾ 19.52 ರಷ್ಟಿತ್ತು.
ಇಂಧನ ಮತ್ತು ವಿದ್ಯುತ್ ವಲಯದಲ್ಲಿ, ಹಣದುಬ್ಬರವು ಏಪ್ರಿಲ್‌ನಲ್ಲಿ ಶೇಕಡಾ 1.38 ರಷ್ಟು ಆಗಿದೆ. ಇದು ಹಿಂದಿನ ಮಾರ್ಚ್‌ನಲ್ಲಿ (-) 0.77% ರಷ್ಟು ಇತ್ತು (ಅಂದರೆ, ಬೆಲೆ ಇಳಿಕೆಯಾಗಿತ್ತು).
ಏಪ್ರಿಲ್ ಡಬ್ಲ್ಯುಪಿಐ ಏರಿಕೆಯು ತಿಂಗಳ ಚಿಲ್ಲರೆ ಹಣದುಬ್ಬರದ ದತ್ತಾಂಶಕ್ಕೆ ವ್ಯತಿರಿಕ್ತವಾಗಿದೆ. ವಿತ್ತೀಯ ನೀತಿಯನ್ನು ರೂಪಿಸುವಾಗ ಭಾರತೀಯ ರಿಸರ್ವ್​ ಬ್ಯಾಂಕ್​ (RBI) ಪ್ರಮುಖವಾಗಿ ಚಿಲ್ಲರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ 11 ತಿಂಗಳ ಕನಿಷ್ಠ ಮಟ್ಟವಾದ ಶೇಕಡಾ 4.83 ಕ್ಕೆ ಇಳಿದಿದೆ.
ಆರ್‌ಬಿಐ ಕಳೆದ ತಿಂಗಳು ಸತತ ಏಳನೇ ಬಾರಿಗೆ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸಿದ್ದು, ಆಹಾರ ಹಣದುಬ್ಬರ ಕುರಿತ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಿರುವುದಾಗಿ ಹೇಳಿದೆ.
ವಾಹನ, ಲೋಹ ಷೇರುಗಳ ಖರೀದಿ ಭರಾಟೆ: ಷೇರು ಪೇಟೆಯಲ್ಲಿ ಸತತ 3ನೇ ದಿನ ಗುಟುರು ಹಾಕಿದ ಗೂಳಿ
ಮೊಬೈಲ್​ಫೋನ್​ ಬಳಕೆದಾರರ ಜೇಬಿಗೆ ಕತ್ತರಿ: ಶೀಘ್ರದಲ್ಲಿಯೇ ಸೆಲ್​ಫೋನ್​ ಬಿಲ್​ 25% ಏರಿಕೆ ಖಾತರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 13 =
Remember me
