ನವದೆಹಲಿ:ಭಾರತವು ಮುಂದಿನ 25 ವರ್ಷಗಳವರೆಗೆ ಶೇ. 7ರಿಂದ 7.5ರಷ್ಟು ನಿರಂತರ ಬೆಳವಣಿಗೆಯನ್ನು ಸಾಧಿಸಲು ಯಶಸ್ವಿಯಾದರೆ 2047ರ ವೇಳೆಗೆ ಮೇಲ್ಮಧ್ಯಮ ಆದಾಯದ ದೇಶವಾಗಲಿದೆ ಎಂದು ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿ (ಇಎಸಿ -ಪಿಎಂ) ಮಂಗಳವಾರ ಹೇಳಿದೆ.
ಭಾರತದ ಸ್ಪರ್ಧಾತ್ಮಕ ಮಾರ್ಗಸೂಚಿ 100 ಬಿಡುಗಡೆ ಮಾತನಾಡಿದ ಇಎಸಿ-ಪಿಎಂ ಅಧ್ಯಕ್ಷ ಬಿಬೆಕ್​ ಡೆಬ್ರಾಯ್​, ಈ ಬೆಳವಣಿಗೆ ದರದಿಂದ 2047ರ ವೇಳೆಗೆ ಭಾರತವು 1,593 ಲಕ್ಷ ಕೋಟಿ ರೂ.ಗಳ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ. ಪ್ರಸ್ತುತ ಭಾರತವು 214 ಲಕ್ಷ ಕೋಟಿ ರೂ.ಗಳ ಜಿಡಿಪಿ ಹೊಂದಿರುವ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದ್ದು, ಅಭಿವೃದ್ಧೀಶಿಲ ರಾಷ್ಟ್ರವೆಂದು ವರ್ಗೀಕರಿಸಲಾಗಿದೆ.
ತುಲನಾತ್ಮಕವಾಗಿ ಶೇ.7ರಿಂದ 7.5 ಬೆಳವಣಿಗೆ ದರ ಕಾಯ್ದುಕೊಂಡರೆ ದೇಶದ ವಾರ್ಷಿಕ ತಲಾ ಆದಾಯವು ಸುಮಾರು 7,96,166 ರೂ. ಇರಲಿದೆ ಎಂದು ಡೆಬ್ರಾಯ್​ ಹೇಳಿದ್ದಾರೆ.
2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಮಹತ್ವಾಕಾಂೆಯ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಅಂದರೆ ಭಾರತವು ಮಧ್ಯಮ ಆದಾಯದ ವರ್ಗದಲ್ಲಿರುತ್ತದೆ. ಹೆಚ್ಚಿನ ಆದಾಯದ ವರ್ಗವಲ್ಲ. ಅಂದರೆ ಭಾರತೀಯ ಸಮಾಜದ ಸ್ವರೂಪವು ಸಂಪೂರ್ಣವಾಗಿ ರೂಪಾಂತರಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ವಿಶ್ವಬ್ಯಾಂಕ್​ ವ್ಯಾಖ್ಯಾನದ ಪ್ರಕಾರ, 9,55,565.40 ರೂ.ಗಿಂತ ಹೆಚ್ಚು ತಲಾವಾರು ವಾರ್ಷಿಕ ಆದಾಯ ಹೊಂದಿರುವ ದೇಶವನ್ನು ಹೆಚ್ಚಿನ ಆದಾಯದ ರಾಷ್ಟ್ರವೆಂದು ಪರಿಗಣಿಸಲಾಗುತ್ತದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ, ಭಾರತದ ಆರ್ಥಿಕತೆಯು 2022-23ರಲ್ಲಿ ಶೇ. 7.4ರಷ್ಟು ವಿಸ್ತರಿಸುವ ಮುನ್ಸೂಚನೆ ನೀಡಿದೆ. ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ.
ಸ್ಪರ್ಧಾತ್ಮಕತೆಯ ಮಾರ್ಗಸೂಚಿಯನ್ನು ಇಎಸಿ-ಪಿಎಂ, ಡಾ. ಅಮಿತ್​ ಕಪೂರ್​ ನೇತೃತ್ವದ ದಿ ಇನ್​ಸ್ಟಿಟ್ಯೂಟ್​ ಾರ್​ ಕಾಂಪಿಟೇಟಿವ್​ನೆಸ್​, ಹಾರ್ವರ್ಡ್​ ಬಿಸ್ನೆಸ್​ ಸ್ಕೂಲ್​ನ ಮೈಕೆಲ್​ ಇ-ಪೋರ್ಟರ್​ ಮತ್ತು ಡಾ. ಕ್ರಿಶ್ಚಿಯನ್​ ಕೆಟೆಲ್ಸ್​ ಸಹಯೋಗದಲ್ಲಿ ರೂಪಿಸಲಾಗಿದೆ.
ಮಾರ್ಗಸೂಚಿಯ ಉದ್ದೇಶಮಾರ್ಗಸೂಚಿಯು ದೇಶದ ಸಾಮಾಜಿಕ ಪ್ರಗತಿ ಮತ್ತು ಹಂಚಿಕೆಯ ಸಮೃದ್ಧಿಯಲ್ಲಿ ಹುದುಗಿರುವ ಸುಸ್ಥಿರತೆ ಮತ್ತು ಸ್ಥಿತಿ ಸ್ಥಾಪಕತ್ವದ ದಿಕ್ಕಿನಲ್ಲಿ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಚಾಲನೆ ಮಾಡಲು ನೀತಿ ಗುರಿಗಳು, ತತ್ವಗಳು ಮತ್ತು ವಿಧಾನಗಳನ್ನು ಪ್ರಸ್ತಾಪಿಸುತ್ತದೆ. ಭಾರತದ ಪ್ರಸ್ತುತ ಆರ್ಥಿಕ ಸ್ಥಿತಿ, ಯಾವ ಕ್ರಮಗಳಿಗೆ ಆದ್ಯತೆ ನೀಡಬೇಕು ಮತ್ತು ಆ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೇಗೆ ಸಂಟಿತಗೊಳ್ಳಬೇಕು ಎಂಬುದನ್ನು ತಿಳಿಸುತ್ತದೆ.
ಅಭಿವೃದ್ಧಿ ಹೊಂದಿದ ದೇಶದ ವ್ಯಾಖ್ಯಾನ ಹೇಗೆ ?ಉನ್ನತ ಮಟ್ಟದ ಆರ್ಥಿಕ ಬೆಳವಣಿಗೆ, ಸಾಮಾನ್ಯ ಜೀವನ ಮಟ್ಟ ಮತ್ತು ಹೆಚ್ಚಿನ ತಲಾ ಆದಾಯ ಹೊಂದಿರುವ, ಶಿಕ್ಷಣ, ಸಾಕ್ಷರತೆ ಮತ್ತು ಆರೋಗ್ಯವನ್ನು ಒಳಗೊಂಡಿರುವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ (ಎಚ್​ಡಿಐ) ಉತ್ತಮವಾಗಿ ಕಾರ್ಯನಿರ್ವಹಿಸಿರುವ ದೇಶವನ್ನು ಅಭಿವೃದ್ಧಿ ಹೊಂದಿದ್ದ ರಾಷ್ಟ್ರವನ್ನಾಗಿ ವ್ಯಾಖ್ಯಾನಿಸಲಾಗುತ್ತದೆ. ಭಾರತವನ್ನು ಸ್ವತಂತ್ರಗೊಂಡ ಸಂದರ್ಭದಲ್ಲಿ ತೃತೀಯ ದೇಶವೆಂದು ವರ್ಗೀಕರಿಸಲಾಗಿತ್ತು. ಆದರೆ ಕಳೆದ 7 ದಶಕಗಳಲ್ಲಿ ದೇಶದ ಜಿಡಿಪಿಯು 2.70 ಲಕ್ಷ ಕೋಟಿ ರೂ.ಗಳಿಂದ 150 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:18 + one =
Remember me
