ಬೆಂಗಳೂರು:ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಕರೊನಾ ಸೋಂಕಿತರ ಸಂಖ್ಯೆಯ ಜತೆಗೆ ಸಾಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಗರದಲ್ಲಿ ಹೆಚ್ಚುತ್ತಿರುವ ಇನ್​ಫ್ಲುಯೆಂಜಾ ರೀತಿಯ ಜ್ವರ ಪ್ರಕರಣಗಳು ಇದಕ್ಕೆ ಕಾರಣವಾಗುತ್ತಿದೆ ಎಂಬ ಅನುಮಾನ ತೀವ್ರವಾಗಿದೆ.
ಜೂನ್​ 7ರಿಂದ 11ರ ನಡುವೆ ನಗರದಲ್ಲಿ 129 ಕೋವಿಡ್​-19 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 43 ಜನರಿಗೆ ಇನ್​ಫ್ಲುಯೆಂಜಾ ರೀತಿಯ ಜ್ವರ ಇತ್ತು ಎಂಬುದು ಖಚಿತಪಟ್ಟಿದೆ. ಇದೇ ವೇಳೆ ಜೂನ್​ 1ರಿಂದ 5ರ ನಡುವೆ ವರದಿಯಾಗಿದ್ದ 79 ಕರೊನಾ ಪ್ರಕರಣಗಳಲ್ಲಿ ಯಾರೊಬ್ಬರಿಗೂ ಇನ್​ಫ್ಲುಯೆಂಜಾ ರೀತಿಯ ಜ್ವರ ಇರಲಿಲ್ಲ ಎಂಬುದು ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ರಾಜಧಾನಿಗೆ ಮುಂಗಾರು ಕಾಲಿರಿಸಿದ್ದು, ಈ ವಾರ ಸಾಕಷ್ಟು ಮಳೆಯಾಗಿದೆ. ಬದಲಾಗುತ್ತಿರುವ ಋತುಮಾನದಿಂದಾಗಿ ಜ್ವರಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಇನ್​ಫ್ಲುಯೆಂಜಾ ರೀತಿಯ ಜ್ವರದಿಂದ ಬಳಲುತ್ತಿರುವವರನ್ನು ಕೋವಿಡ್​-19 ಪರೀಕ್ಷೆಗೂ ಒಳಪಡಿಸುತ್ತಿರುವುದರಿಂದ, ಆತಂಕಪಡುವ ಅವಶ್ಯಕತೆ ಇಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.
ಇದನ್ನೂ ಓದಿ:ಮಗ, ಸೊಸೆಯೊಂದಿಗೆ ಕೊಡಗಿನ ರೆಸಾರ್ಟ್‌ನಲ್ಲಿ ಎಚ್‌ಡಿಕೆ ವಾಸ್ತವ್ಯ
ಮಳೆಗಾಲದಲ್ಲಿ ತಾಪಮಾನ ಕಡಿಮೆಯಾಗುವುದರಿಂದ ಜನರಲ್ಲಿ ನೆಗಡಿ, ಕೆಮ್ಮು ಮತ್ತು ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯ. ಇಂಥವರ ಪೈಕಿ ಇನ್​ಫ್ಲುಯೆಂಜಾ ರೀತಿಯ ಜ್ವರ ಇದ್ದರೆ, ಅವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗಿರುತ್ತದೆ. ಹಾಗಾಗಿ ಅಂಥವರು ಕರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಬಿಬಿಎಂಪಿಯ ವಿಶೇಷ ಆಯುಕ್ತ (ಆರೋಗ್ಯ) ಡಾ. ರವಿ ಸೂಪುರ್​ ತಿಳಿಸಿದ್ದಾರೆ.
ಸದ್ಯ ನಗರದಲ್ಲಿ ಅನ್​ಲಾಕ್​ 1.0 ಜಾರಿಯಲ್ಲಿರುವುದರಿಂದ, ಜನರ ಓಡಾಟ ಹೆಚ್ಚಾಗಿದೆ. ಇದರಿಂದಾಗಿ ನೆಗಡಿ, ಕೆಮ್ಮು ಮತ್ತು ಜ್ವರದಿಂದ ಸೋಂಕಿತರಾಗುವುದು ಸಾಮಾನ್ಯ. ಹಾಗೆಂದು ಅನಗತ್ಯವಾಗಿ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಹೇಳುವ ಮೂಲಕ ಕೆಲ ವೈದ್ಯರು ಆತಂಕ ನಿವಾರಿಸಲು ಪ್ರಯತ್ನಿಸಿದ್ದಾರೆ.
ತಂದೆಯಿಲ್ಲದ ಹೆಣ್ಣು ಮಗುವಿನ ಸಂಪೂರ್ಣ ವಿದ್ಯಾಭ್ಯಾಸಕ್ಕೆ ನೆರವಾದ ಕಿಚ್ಚ ಸುದೀಪ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + fourteen =
Remember me
