ನವದೆಹಲಿ:ಇಡೀ ಜಗತ್ತನ್ನು ನಡುಗಿಸಿರುವ ಕರೊನಾ ವೈರಸ್ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಗಗನಮುಖಿಯಾಗಿದೆ. ಕೆಲವೇ ತಿಂಗಳ ಹಿಂದೆ ಎದುರಾಗಿದ್ದ ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳಿಂದ ಸುಲಭವಾಗಿ ಪಾರಾಗಲು ಇದು ಅವರಿಗೆ ನೆರವಾಗುವ ಎಲ್ಲ ಸಾಧ್ಯತೆಯಿದೆ ಎಂದು ಎರಡು ಸಮೀಕ್ಷೆಗಳು ಹೇಳಿವೆ.
ಮೋದಿ ಜನಪ್ರಿಯತೆ ಕಳೆದ ಜನವರಿ 7ಕ್ಕೆ ಶೇ. 76 ಇತ್ತು. ಏಪ್ರಿಲ್ 21ರಂದು ಶೇ. 83ಕ್ಕೆ ಏರಿದೆ ಎಂದು ಅಮೆರಿಕ ಮೂಲದ ‘ಮಾರ್ನಿಂಗ್ ಕನ್ಸಲ್ಟ್’ ಎಂಬ ಸಮೀಕ್ಷೆ ಹಾಗೂ ಸಂಶೋಧನಾ ಸಂಸ್ಥೆ ಹೇಳಿದೆ. ‘ಐಎಎನ್​ಎಸ್-ಸಿವೋಟರ್ ಕೋವಿಡ್-19 ಟ್ರಾ್ಯಕರ್’ ನಡೆಸಿದ ಇನ್ನೊಂದು ಸಮೀಕ್ಷೆ ಕೂಡ, ಮಾರ್ಚ್ 25ರಂದು ಶೇ. 76.8 ಇದ್ದ ಮೋದಿ ಜನಪ್ರಿಯತೆ ಏಪ್ರಿಲ್ 21ಕ್ಕೆ ಶೇಕಡಾ 93.5ಕ್ಕೆ ಏರಿದೆ ಎಂಬುದನ್ನು ತೋರಿಸಿದೆ.
ಕರೊನಾ ಸೋಂಕು ಏರಿಕೆಯಾಗುತ್ತಿದ್ದ ಮಾರ್ಚ್ ಆರಂಭದಲ್ಲಿ, ದೇಶದ ಆರ್ಥಿಕತೆ ದಶಕದಲ್ಲೇ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿತ್ತು, ಬ್ಯಾಂಕ್​ಗಳು ದೊಡ್ಡ ಮಟ್ಟದ ವೈಫಲ್ಯದ ಕೂಪಕ್ಕೆ ಬಿದ್ದಿದ್ದವು, ನವದೆಹಲಿಯ ರಸ್ತೆಗಳಲ್ಲಿ ಹಿಂಸಾಚಾರ ನಡೆಯುತಿದ್ದವು, ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಪ್ರತಿಭಟನೆಗಳ ಅಲೆ ತಿಂಗಳುಗಟ್ಟಲೆ ಮುಂದುವರಿದಿದ್ದವು. ಇಂಥ ಸನ್ನಿವೇಶದಲ್ಲಿ ಮೋದಿ ದೇಶದ ಆಡಳಿತವನ್ನು ಸರಿದಾರಿಯಲ್ಲಿ ನಡೆಸುವ ಸವಾಲು ಎದುರಿಸುತ್ತಿದ್ದರು.
ಈಗ ಈ ಎಲ್ಲ ವಿಷಯಗಳು ಹಿನ್ನೆಲೆಗೆ ಸರಿದಂತೆ ಕಾಣುತ್ತದೆ. ಮೋದಿ ದೇಶದ ಕರೊನಾ ವಿರೋಧಿ ಹೋರಾಟದ ಮುಂಚೂಣಿಯಲ್ಲಿ ಹಾಗೂ ಕೇಂದ್ರ ಸ್ಥಾನದಲ್ಲಿರುವುದೇ ಇದಕ್ಕೆ ಕಾರಣ. ಬಹಳ ಬೇಡಿಕೆಯಲ್ಲಿದ್ದ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಸಹಿತ ಇತರ ದೇಶಗಳಿಗೆ ವೈದ್ಯಕೀಯ ನೆರವು ಒದಗಿಸಿದ್ದರಿಂದ ಜಾಗತಿಕ ನಾಯಕರಾಗಿ ಅವರ ವ್ಯಕ್ತಿತ್ವಕ್ಕೆ ಇನ್ನಷ್ಟು ಕಳೆ ಬಂದಿದೆ. ರಾಷ್ಟ್ರವ್ಯಾಪಿ ಲಾಕ್​ಡೌನ್ ನಡುವೆ ಬೀದಿ ಹೋರಾಟಗಳು ಕರಗಿಹೋಗಿವೆ. ಪ್ರತಿಪಕ್ಷಗಳು ಕೂಡ ವೈರಾಣು ವಿರುದ್ಧದ ಹೋರಾಟದಲ್ಲಿ ಗಮನ ಕೇಂದ್ರೀಕರಿಸುತ್ತಿರುವುದರಿಂದ ಸರ್ಕಾರದ ಆರ್ಥಿಕ ನಿರ್ವಹಣೆ ರೀತಿಯ ವಿರುದ್ಧ ಎದ್ದಿದ್ದ ವ್ಯಾಪಕ ಟೀಕೆಗಳು ಕೂಡ ದುರ್ಬಲವಾಗಿವೆ ಎಂದು ಈ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ.
ದೊಡ್ಡ ಸವಾಲು…
ಜಗತ್ತಿನ ಅತಿ ದೊಡ್ಡ ಲಾಕ್​ಡೌನ್​ನಿಂದಾಗಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡಿದ್ದಾರೆ. ಸಣ್ಣ ಪುಟ್ಟ ವ್ಯಾಪಾರಗಳು ನೆಲಕಚ್ಚಿವೆ. ಈ ಹಿನ್ನೆಲೆಯಲ್ಲಿ ಭಾರತದ ಅತಿ ಜನಪ್ರಿಯ ನಾಯಕ ಎಂಬ ಪಟ್ಟ ಉಳಿಸಿಕೊಳ್ಳುವುದು ಮೋದಿಯವರ ಮುಂದಿರುವ ದೊಡ್ಡ ಸವಾಲು. 130 ಕೋಟಿ ಜನಸಂಖ್ಯೆಯ ಬೃಹತ್ ದೇಶದಲ್ಲಿ ಇದುವರೆಗೆ ಕರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆ ನಿಯಂತ್ರಣದಲ್ಲಿರುವುದರಿಂದ ಮೋದಿಗೆ ಶಹಬ್ಬಾಸ್​ಗಿರಿ ಸಿಕ್ಕಿದೆ.
ಕೋವಿಡ್ ಬಿಕ್ಕಟ್ಟು ಬಳಕೆ
ಭಾರತದಲ್ಲಿ ರಾಜಕೀಯ ಸದ್ಯಕ್ಕೆ ಚಲನರಹಿತವಾಗಿದೆ ಇದರಿಂದ ಉಂಟಾಗಿರುವ ಶೂನ್ಯ ವಾತಾವರಣದಲ್ಲಿ ಮೋದಿಯವರ ನಾಯಕತ್ವ ಇನ್ನಷ್ಟು ಎದ್ದು ಕಾಣುತ್ತದೆ. ಅತಿದೊಡ್ಡ ರಾಜಕೀಯ ಸಂಘಟನೆಯ ನಾಯಕರಾಗಿ ಹಾಗೂ ಸರ್ಕಾರಿ ಯಂತ್ರದ ಸಂಪೂರ್ಣ ಬೆಂಬಲ ಹೊಂದಿರುವುದರಿಂದ ಕೋವಿಡ್ ಬಿಕ್ಕಟ್ಟು ಸಹಜವಾಗಿ ಅವರ ನೆರವಿಗೆ ಬಂದಿದೆ. ದೇಶದ ಆರ್ಥಿಕ ಪರಿಸ್ಥಿತಿಗೆ ವೈರಸ್ ಹೊಣೆ ಎಂದು ಹೇಳುವ ಮೂಲಕವೂ ಅವರು ನಾಯಕತ್ವ ಗುಣವನ್ನು ಸಾಧಿಸಲಿದ್ದಾರೆ ಎಂದು ಜಾಗತಿಕ ಶಾಂತಿಗಾಗಿ ಕಾರ್ಯನಿರ್ವಹಿಸುವ ಕಾರ್ನೆಜ್ ಎಂಡೋಮೆಂಟ್​ನ ದಕ್ಷಿಣ ಏಷ್ಯಾ ಕಾರ್ಯಕ್ರಮದ ನಿರ್ದೇಶಕ ಹಾಗೂ ಹಿರಿಯ ಫೆಲೊ ಮಿಲನ್ ವೈಷ್ಣವ್ ಹೇಳಿದ್ದಾರೆ.
ವೈರಸ್ ನಂತರ ಪರೀಕ್ಷೆ!
ಕೋವಿಡ್-19 ವಿರುದ್ಧದ ಹೋರಾಟವು ಪ್ರತಿಪಕ್ಷಗಳ ಬಾಯಿ ಮುಚ್ಚಿಸಿರಬಹುದು ಮತ್ತು ಮೋದಿ ಮುಂದಿದ್ದ ಹಲವು ಸವಾಲುಗಳು ಹಿಂದೆ ಸರಿದಿರಬಹುದು. ಆದರೆ ಮುಂದಿನ ಹಾದಿಯೇನು ಸುಲಭವಲ್ಲ. ವೈರಸ್ ಭೀತಿ ಕೊನೆಯಾಗುವುದನ್ನು ಎದುರು ನೋಡು ತ್ತಿದ್ದೇವೆ. ಭಯದ ತೆರೆ ಸರಿದ ಮೇಲೆ ಪ್ರಧಾನಿಗೆ ನಿಜವಾದ ಪರೀಕ್ಷೆ ಎದುರಾಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಉತ್ತರವೇ ಮಾನದಂಡ…
ಲಾಕ್​ಡೌನ್ ಅಂತ್ಯಗೊಂಡ ಮೇಲೆ ದೇಶದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ಕಾರ್ಯತಂತ್ರ ಕುರಿತು ಪ್ರಶ್ನೆಗೆ ಪ್ರಧಾನಿ ಖಂಡಿತಕ್ಕೂ ಉತ್ತರಿಸಬೇಕಾಗುತ್ತದೆ. ಮೋದಿ ಪ್ರತಿಕ್ರಿಯೆಯೇ ಪ್ರಸ್ತುತ ನಾಯಕತ್ವದ ಯಶಸ್ಸು ಅಳೆಯುವ ಮಾನದಂಡವಾಗುತ್ತದೆ ಎನ್ನುವುದು ಕೆಲವು ಆರ್ಥಿಕ ತಜ್ಞರ ಅಭಿಪ್ರಾಯ.
ಕರೊನಾ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಮೋದಿ ಮುಂಚೂಣಿ ನಾಯಕ.
ವಿವಿಧ ದೇಶಗಳಿಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಹಾಗೂ ವೈದ್ಯಕೀಯ ನೆರವು ನೀಡಿದ್ದರಿಂದ ಜಾಗತಿಕ ಮಟ್ಟದಲ್ಲಿ ಭಾರಿ ಪ್ರಶಂಸೆ.
ಮಹಾರಾಷ್ಟ್ರ ಸರ್ಕಾರ ಉಳಿಸ್ತಾರಾ ಮೋದಿ? ಉದ್ಧವ್​ ಠಾಕ್ರೆ ನಾಮ ನಿರ್ದೇಶನಕ್ಕೆ ಅಸ್ತು ನೀಡದ ರಾಜ್ಯಪಾಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 2 =
Remember me
