ನವದೆಹಲಿ:ಪ್ರಸ್ತುತ 2023-24 ಹಣಕಾಸು ವರ್ಷದಲ್ಲಿ ದೇಶದಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆಯು ದಾಖಲೆಯ ಪ್ರಮಾಣದಲ್ಲಿ ಹೆಚ್ಚಾಗಲಿದ್ದು, 40.7 ರಿಂದ 41.8 ಕೋಟಿಗೆ ತಲುಪುವ ನಿರೀಕ್ಷೆ ಇದೆ. 2024-25ನೇ ಹಣಕಾಸು ವರ್ಷದಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆಯು 8-11 ಪ್ರತಿಶತದಷ್ಟು ಆರೋಗ್ಯಕರ ಬೆಳವಣಿಗೆಯನ್ನು ಸಾಧಿಸಬಹುದಾಗಿದೆ. ಇದೇ ಅವಧಿಯಲ್ಲಿ ಆಯ್ದ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಆದಾಯವು 15-17 ಪ್ರತಿಶತ ಏರಿಕೆಯಾಗಲಿದೆ.
ರೇಟಿಂಗ್ ಏಜೆನ್ಸಿ ಇಕ್ರಾ ಈ ಅಂದಾಜುಗಳನ್ನು ಗುರುವಾರ ಬಹಿಂಗಪಡಿಸಿದೆ.
ಮಾರ್ಚ್ 2024 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ (2023-24 ಹಣಕಾಸು ವರ್ಷ) ದೇಶದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆಯು ಕೋವಿಡ್ ಪೂರ್ವದ ಮಟ್ಟಕ್ಕಿಂತಲೂ ಶೇಕಡಾ 10 ರಷ್ಟು ಹೆಚ್ಚಾಗಿದೆ. 2023-24 ಹಣಕಾಸು ವರ್ಷದಲ್ಲಿ ಈ ಸಂಖ್ಯೆಯು 37.64 ಕೋಟಿ ತಲುಪಿದೆ. ಮಾರ್ಚ್ 2025 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ವಿಮಾನ ನಿಲ್ದಾಣ ನಿರ್ವಾಹಕರ ಆದಾಯವು ವಾರ್ಷಿಕ ಆಧಾರದ ಮೇಲೆ 15-17 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ಇತರ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತೀಯ ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆಯ ಚೇತರಿಕೆಯು ಅತ್ಯುತ್ತಮವಾಗಿದೆ. 2023ರ ಕ್ಯಾಲೆಂಡರ್​ ವರ್ಷದಲ್ಲಿ ಭಾರತವು ಜಾಗತಿಕ ಪ್ರಯಾಣಿಕರ ದಟ್ಟಣೆಯ 4.2 ಪ್ರತಿಶತವನ್ನು ಹೊಂದಿದೆ. 2019ರ ಕ್ಯಾಲೆಂಡರ್​ನಲ್ಲಿ ಇದು ಶೇಕಡಾ 3.8 ಇತ್ತು.
“ಕೋವಿಡ್​ ಪೂರ್ವದ ಮಟ್ಟಕ್ಕೆ ಹೋಲಿಸಿದರೆ, 2023 ರಲ್ಲಿ ಜಾಗತಿಕ ಪ್ರಯಾಣಿಕರ ದಟ್ಟಣೆಯು ಕೇವಲ 96 ಪ್ರತಿಶತದಷ್ಟು ಚೇತರಿಸಿಕೊಂಡಿದೆ. ಆದರೆ, ಬಲವಾದ ಆರ್ಥಿಕ ಬೆಳವಣಿಗೆ ಮತ್ತು ಹೊಸ ವಿಮಾನ ನಿಲ್ದಾಣ ಮಾರ್ಗಗಳ ಸೇರ್ಪಡೆಯಿಂದಾಗಿ ಭಾರತೀಯ ವಿಮಾನ ಪ್ರಯಾಣಿಕರ ದಟ್ಟಣೆಯು ಕೋವಿಡ್-ಪೂರ್ವ ಮಟ್ಟದ 106 ಪ್ರತಿಶತಕ್ಕೆ ಪುನಶ್ಚೇತನಗೊಂಡಿದೆ. ಭಾರತೀಯ ವಿಮಾನ ಪ್ರಯಾಣಿಕರ ದಟ್ಟಣೆಯು ಜಾಗತಿಕ ಪ್ರವೃತ್ತಿಯನ್ನು ಮೀರಿಸುವ ನಿರೀಕ್ಷೆಯಿದೆ” ಎಂದು ಇಕ್ರಾದ ಕಾರ್ಪೊರೇ ಟ್ ರೇಟಿಂಗ್‌ನ ಉಪಾಧ್ಯಕ್ಷ ಮತ್ತು ಸೆಕ್ಟರ್ ಮುಖ್ಯಸ್ಥ ವಿನಯ್ ಕುಮಾರ್ ಜಿ. ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + sixteen =
Remember me
