ನವದೆಹಲಿ:ಭಾರತದಲ್ಲಿ ಕರೊನಾ ವಿಕೋಪಕ್ಕೆ ತಿರುಗುತ್ತಿದ್ದು, ಪ್ರತಿದಿನ ದಾಖಲೆ ಮಟ್ಟದಲ್ಲಿ ಹೊಸ ಪ್ರಕರಣಗಳು ವರದಿಯಾಗು ತ್ತಿವೆ. ಆದಾಗ್ಯೂ ಜಾಗತಿಕವಾಗಿ ಕರೊನಾ ಪೀಡಿತ ದೇಶಗಳ ರ್ಯಾಂಕಿಂಗ್​ನಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಶುಕ್ರವಾರ 31 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 24 ತಾಸಿನಲ್ಲಿ 658 ಮಂದಿ ಮರಣಿಸಿದ್ದಾರೆ.
ಗುರುವಾರ ಒಂದೇ ದಿನ 35 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಇದು ಈವರೆಗೆ ಒಂದೇ ದಿನದ ಅತಿ ಹೆಚ್ಚು ಪ್ರಕರಣಗಳಾಗಿವೆ. ಗುರುವಾರ 680 ಮಂದಿ ಸಾವನ್ನಪ್ಪಿದ್ದರು. ಈವರೆಗೆ 6.45 ಲಕ್ಷ ರೋಗಿಗಳು ಗುಣಮುಖ ರಾಗಿದ್ದು, ಇನ್ನೂ 3.47 ಲಕ್ಷ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಕಳೆದ 24 ತಾಸಿನಲ್ಲಿ 12 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿದ್ದು, ದೇಶದ ಒಟ್ಟು ಸೋಂಕಿತರ ಸಂಖ್ಯೆ 10.36 ಲಕ್ಷಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 26,267ಕ್ಕೂ ಹೆಚ್ಚಾಗಿದೆ.
ಜಾಗತಿಕ ರ್ಯಾಂಕಿಂಗ್​ನಲ್ಲಿ 106ನೇ ಸ್ಥಾನ:
ಜಗತ್ತಿನ ಸುಮಾರು 180ಕ್ಕೂ ಹೆಚ್ಚು ದೇಶಗಳು ಮಹಾಮಾರಿ ಕರೊನಾ ದಾಳಿಗೆ ಸಿಲುಕಿವೆ. ಈ ಎಲ್ಲ ದೇಶಗಳಲ್ಲಿನ ಸೋಂಕು ಪ್ರಕರಣಗಳ ದತ್ತಾಂಶಗಳ ಆಧಾರದ ಮೇಲೆ ರ‍್ಯಾಂಕಿಂಗ್ ನೀಡಲಾಗಿದ್ದು, ಭಾರತ 106ನೇ ಸ್ಥಾನದಲ್ಲಿದೆ. ಅಂದರೆ ಪ್ರತಿ 10 ಲಕ್ಷ ಮಂದಿಯಲ್ಲಿ ಎಷ್ಟು ಜನರು ಕರೊನಾ ಸೋಂಕಿಗೆ ಒಳಗಾಗಿ
ದ್ದಾರೆ ಎಂಬ ಆಧಾರದ ಮೇಲೆ ಈ ರ‍್ಯಾಂಕಿಂಗ್ ನೀಡಲಾಗಿದ್ದು, ಇದನ್ನು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಟ್ವಿಟರ್ ಖಾತೆ ಯಲ್ಲಿ ಹಂಚಿಕೊಂಡಿದೆ. ಭಾರತದಲ್ಲಿ ಪ್ರತಿ 10 ಲಕ್ಷ ಮಂದಿಯಲ್ಲಿ 658 ಜನರಿಗೆ ಸೋಂಕು ತಗುಲಿದೆ. ಅಮೆರಿಕ ಮತ್ತು ಯುರೋಪ್ ದೇಶಗಳಿಗೆ ಹೋಲಿಸಿದರೆ ಭಾರತದ ಸೋಂಕಿತರ ಪ್ರಮಾಣ ಬಹಳಷ್ಟು ಕಡಿಮೆ ಇದೆ. ರಷ್ಯಾ ಮತ್ತು ಅಮೆರಿಕದಲ್ಲಿ ಪ್ರತಿ 10 ಲಕ್ಷ ಮಂದಿಗೆ ಕ್ರಮವಾಗಿ ಭಾರತಕ್ಕಿಂತ 8 ಮತ್ತು 16 ಪಟ್ಟು ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಸ್ಪೇನ್​ನಲ್ಲಿ ಪ್ರತಿ 10 ಲಕ್ಷ ಮಂದಿಯಲ್ಲಿ 5,438 ಜನರಿಗೆ ಸೋಂಕು ತಗುಲಿದ್ದು, ಜರ್ಮನಿಯಲ್ಲಿ 2,406, ಬ್ರಿಟನ್​ನಲ್ಲಿ 4,372, ಅಮೆರಿಕದಲ್ಲಿ 10.731 ಹಾಗೂ ರಷ್ಯಾದಲ್ಲಿ 5,071 ಜನರಿಗೆ ಸೋಂಕು ತಗುಲಿದೆ.
ತಿರುಪತಿ ದರ್ಶನ ಸ್ಥಗಿತ ಇಲ್ಲ
ತಿರುಮಲ ತಿರುಪತಿ ದೇವಸ್ಥಾನದ ಬಾಗಿಲು ಮುಚ್ಚುವುದಿಲ್ಲ, ಭಕ್ತರಿಗೆ ದರ್ಶನ ಅವಕಾಶ ಇರುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ಟಿಟಿಡಿ ಸ್ಪಷ್ಟ ಪಡಿಸಿದೆ. ಅರ್ಚಕರು ಹಾಗೂ ಸಿಬ್ಬಂದಿಯಲ್ಲಿ ಹಲವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದಾಗಿ ದರ್ಶನ ಸ್ಥಗಿತದ ಬಗ್ಗೆ ಗೊಂದಲ ಉಂಟಾಗಿದ್ದ ಹಿನ್ನೆಲೆ ಈ ಸ್ಪಷ್ಟನೆ ನೀಡಿದೆ. ಭಕ್ತರಿಗೆ ಕರೊನಾ ಸೋಂಕು ತಗುಲಿರುವ ಯಾವ ಪ್ರಕರಣಗಳೂ ವರದಿಯಾಗಿಲ್ಲ. ಅರ್ಚಕರು ಸೇರಿ 140 ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿದೆ. ಈ ಅರ್ಚಕರು ಮತ್ತು ಸಿಬ್ಬಂದಿಯನ್ನು ಸೇವೆಗೆ ನಿಯೋಜನೆ ಮಾಡಿಲ್ಲ ಎಂದು ಟಿಟಿಡಿ ಹೇಳಿದೆ.
್ಝಾರತ್ ಬಯೋಟೆಕ್​ನ ಕರೊನಾ ಲಸಿಕೆ ಕೋವಾಕ್ಸಿನ್​ನ ಮಾನವನ ಮೇಲಿನ ಕ್ಲಿನಿಕಲ್ ಪ್ರಯೋಗವನ್ನು ಹರಿಯಾಣದ ರೋಹ್ಟಕ್​ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ಪ್ರಾರಂಭಿಸಲಾಗಿದೆ.
ಕರೊನಾ ಸೋಂಕಿತರ ಪ್ರತಿಭಟನೆ
ಅಸ್ಸಾಂನ ಕಾಮರೂಪ ಜಿಲ್ಲೆಯ ಕರೊನಾ ಸೋಂಕಿತರ ಆರೈಕೆ ಕೇಂದ್ರದಲ್ಲಿದ್ದ ನೂರಾರು ರೋಗಿಗಳು ಸರಿಯಾದ ಆಹಾರ ಮತ್ತು ನೀರು ಒದಗಿಸಲಾಗುತ್ತಿಲ್ಲ ಎಂದು ಆರೋಪಿಸಿ ಕೇಂದ್ರದಿಂದ ಪರಾರಿಯಾಗಿ ರಾಷ್ಟ್ರೀಯ ಹೆದ್ದಾರಿ 31ನ್ನು ಗುರುವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕೈಲಾಶ್ ಕಾರ್ತಿಕ ಮತ್ತು ಪೊಲೀಸರು ಸ್ಥಳಕ್ಕೆ ಬಂದು, ವ್ಯವಸ್ಥೆ ಸುಧಾರಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನಾನಿರತ ರೋಗಿಗಳು ಕರೊನಾ ಅರೈಕೆ ಕೇಂದ್ರಕ್ಕೆ ಮರಳಿದರು ಎಂದು ತಿಳಿದುಬಂದಿದೆ.
ದೇಶಾದ್ಯಂತ 31.60 ಲಕ್ಷ ಮಂದಿ ಕ್ವಾರಂಟೈನ್
ದೇಶಾದ್ಯಂತ 31.6 ಲಕ್ಷ ಮಂದಿ ಕ್ವಾರಂಟೈನ್​ನಲ್ಲಿದ್ದಾರೆ ಎಂದು ತಿಳಿದುಬಂದಿದೆ. ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 11 ಲಕ್ಷಕ್ಕೂ ಅಧಿಕ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಮಹಾರಾಷ್ಟ್ರದಲ್ಲಿ 7.27 ಲಕ್ಷ, ಗುಜರಾತ್​ನಲ್ಲಿ 3.25 ಲಕ್ಷ ಮತ್ತು ಒಡಿಶಾದಲ್ಲಿ 2.40 ಲಕ್ಷ, ಹರಿಯಾಣದಲ್ಲಿ 49,907 , ತಮಿಳುನಾಡಿನಲ್ಲಿ 46,969, ಛತ್ತೀಸಗಢದಲ್ಲಿ 41,0621, ಪಂಜಾಬ್​ನಲ್ಲಿ 25,307, ಜಾರ್ಖಂಡ್​ನಲ್ಲಿ 24,497, ಕರ್ನಾಟಕದಲ್ಲಿ 17,858, ದೆಹಲಿಯಲ್ಲಿ 14,596 ಮತ್ತು ಅಸ್ಸಾಂನಲ್ಲಿ 8,799 ಜನರು ಜನರು ಕ್ವಾರಂಟೈನ್​ನಲ್ಲಿದ್ದಾರೆ.
20 ಲಕ್ಷ ಕೇಸ್
ಬ್ರೆಜಿಲ್​ನಲ್ಲಿ ಕರೊನಾ ಮಹಾ ಮಾರಿ ತಾಂಡವ ಮುಂದುವರೆ ಯುತ್ತಲೇ ಇದ್ದು, ಪ್ರತಿದಿನ ಸರಾಸರಿ 1 ಸಾವಿರ ಮಂದಿ ಕರೊನಾಗೆ ಬಲಿಯಾಗುತ್ತಿದ್ದಾರೆ. ಜತೆಗೆ ಅಲ್ಲಿನ ಸೋಂಕಿತರ ಸಂಖ್ಯೆ 20 ಲಕ್ಷಕ್ಕೂ ಅಧಿಕವಾಗಿದೆ. ಈವರೆಗೆ ಒಟ್ಟು 76 ಸಾವಿರಕ್ಕೂ ಅಧಿಕ ಮಂದಿ ಕರೊನಾದಿಂದಾಗಿ ಸಾವನ್ನಪ್ಪಿದ್ದಾರೆ.
ಹೆಚ್ಚು ಪರೀಕ್ಷೆ
ಅಮೆರಿಕದ ನಂತರ ಭಾರತದಲ್ಲಿ ಅತಿ ಹೆಚ್ಚು ಕರೊನಾ ಮಾದರಿಗಳನ್ನು (ಸ್ಯಾಂಪಲ್) ಪರೀಕ್ಷೆ ಮಾಡಲಾಗಿದೆ. ಅಮೆರಿಕದಲ್ಲಿ ಈವರೆಗೆ 4.20 ಕೋಟಿ ಮಾದರಿಗಳನ್ನು ಪರೀಕ್ಷಿಸ ಲಾಗಿದ್ದು, ಭಾರತದಲ್ಲಿ 1.20 ಕೋಟಿಗೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ.
ಡ್ರೋನ್​ ಪ್ರತಾಪ್​ ನಮ್ಮನ್ನೆಲ್ಲ ನಂಬಿಸಿ ಮೋಸ ಮಾಡಿದ್ದಾನೆ; ಮಂಡ್ಯ-ಬೆಂಗಳೂರಿನಲ್ಲಿ ದೂರು ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + one =
Remember me
