ನವದೆಹಲಿ:ದೇಶದ ಜಲಾಶಯಗಳ ನೀರಿನ ಮಟ್ಟವು ಕಳೆದ ವರ್ಷದ ಇದೇ ಸಮಯಕ್ಕೆ ಹೋಲಿಸಿದರೆ ಶೇ. 126ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ತಿಳಿಸಿದೆ. ಕಳೆದ 10 ವರ್ಷಗಳ ಸರಾಸರಿಗೆ ಹೋಲಿಸಿದರೆ ಇದು ಶೇ. 119ರಷ್ಟು ಹೆಚ್ಚು ಎಂದು ಅದು ಹೇಳಿದೆ. ಆ. 29ರಂದು ದಾಖಲಾದ ಅಂಕಿಅಂಶಗಳ ಪ್ರಕಾರ, ದೇಶದ ಎಲ್ಲ ಜಲಾಶಯಗಳಲ್ಲಿ 144.33 ಶತಕೋಟಿ ಕ್ಯೂಬಿಕ್ ಮೀಟರ್ (ಬಿಸಿಎಂ) ನೀರಿದೆ. ಇದು ಅವುಗಳ ಒಟ್ಟು ಸಾಮರ್ಥ್ಯದ ಶೇ. 80ರಷ್ಟಾಗಿದೆ. 20 ಹೈಡ್ರೋಎಲೆಕ್ಟ್ರಿಕ್ ಯೋಜನೆಗಳೂ ಸೇರಿದಂತೆ ಒಟ್ಟು 155 ಜಲಾಶಯಗಳ ಮಾಹಿತಿ ಇದಾಗಿದ್ದು, ಇವು ಒಟ್ಟು 180.852 ಬಿಸಿಎಂ ನೀರು ಸಂಗ್ರಹ ಸಾಮರ್ಥ್ಯ ಹೊಂದಿವೆ. ಇದು ದೇಶದ ಒಟ್ಟಾರೆ ಜಲಸಂಗ್ರಹ ಸಾಮರ್ಥ್ಯದ ಶೇ. 70ರಷ್ಟಾಗಿದೆ.
ಉತ್ತರಭಾಗದಲ್ಲಿ ಕುಸಿತ:ದೇಶಾದ್ಯಂತ ಸ್ಥಿತಿ ಉತ್ತಮ ವಾಗಿದ್ದರೂ, ಹಿಮಾಚಲಪ್ರದೇಶ, ಪಂಜಾಬ್, ರಾಜಸ್ಥಾನ ಒಳಗೊಂಡಂತೆ ಉತ್ತರ ಭಾಗದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದೆ. ಅಲ್ಲಿನ 11 ಜಲಾಶಯಗಳಲ್ಲಿ 11.8 ಬಿಸಿಎಂ ನೀರಿದ್ದು, ಇದು ಒಟ್ಟಾರೆ ಸಾಮರ್ಥ್ಯದ ಶೇ. 60ರಷ್ಟಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ. 83ರಷ್ಟು ನೀರಿತ್ತು.
ಪೂರ್ವದಲ್ಲಿ ಏರಿಕೆ:ಅಸ್ಸಾಂ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ತ್ರಿಪುರ, ನಾಗಾಲ್ಯಾಂಡ್, ಬಿಹಾರ ಸೇರಿದಂತೆ ಪೂರ್ವದ ರಾಜ್ಯಗಳ 25 ಜಲಾಶಯ ಗಳಲ್ಲಿ 13.6 ಬಿಸಿಎಂ ನೀರಿದ್ದು, ಇದು ಅವುಗಳ ಒಟ್ಟು ಸಾಮರ್ಥ್ಯದ ಶೇ. 66 ಭಾಗವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಅಲ್ಲಿ ಶೇ. 61ರಷ್ಟು ನೀರಿತ್ತು.
ಪಶ್ಚಿಮದಲ್ಲೂ ಉತ್ತಮ:ಗುಜರಾತ್, ಮಹಾರಾಷ್ಟ್ರ, ಗೋವಾ ಒಳಗೊಂಡ ಪಶ್ಚಿಮ ಭಾಗದ 50 ಡ್ಯಾಮ್ಳಲ್ಲಿ 33.5 ಬಿಸಿಎಂ ನೀರಿದ್ದು, ಇದು ಅವುಗಳ ಸಾಮರ್ಥ್ಯದ ಶೇ. 90ರಷ್ಟಾಗಿದೆ. ಕಳೆದ ವರ್ಷ ಶೇ. 71ರಷ್ಟು ನೀರಿತ್ತು.
ಮಧ್ಯಭಾಗದಲ್ಲಿ ಹೆಚ್ಚಳ:ಉತ್ತರಪ್ರದೇಶ, ಉತ್ತರಾ ಖಂಡ, ಮಧ್ಯಪ್ರದೇಶ, ಛತ್ತೀಸ್​ಗಢವನ್ನು ಒಳಗೊಂಡಿ ರುವ ಕೇಂದ್ರ ಭಾಗದ 26 ಜಲಾಶಯ ಗಳಲ್ಲಿ 40 ಬಿಸಿಎಂ ನೀರಿದ್ದು, ಇದು ಅವುಗಳ ಒಟ್ಟು ಸಾಮರ್ಥ್ಯದ ಶೇ. 84ರಷ್ಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅಲ್ಲಿ ಶೇ. 73ರಷ್ಟು ನೀರಿತ್ತು.
ದಕ್ಷಿಣದಲ್ಲಿ ತೃಪ್ತಿಕರ ಜಲಸಂಗ್ರಹ:ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯಗಳನ್ನು ಒಳಗೊಂಡಿರುವ ದಕ್ಷಿಣ ಭಾಗದ 43 ಜಲಾಶಯಗಳಲ್ಲಿ 44.7 ಬಿಸಿಎಂನಷ್ಟು ನೀರಿದೆ. ಇದು ಅವುಗಳ ಒಟ್ಟು ಸಾಮರ್ಥ್ಯ ಶೇ. 82ರಷ್ಟಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇಲ್ಲಿ ಶೇ. 49ರಷ್ಟು ಮಾತ್ರ ನೀರಿತ್ತು. ಇವುಗಳ 10 ವರ್ಷದ ಸರಾಸರಿ ಸಂಗ್ರಹ ಪ್ರಮಾಣ ಶೇ. 63 ಎಂದು ಸಿಡಬ್ಲ್ಯುಸಿ ತಿಳಿಸಿದೆ.
ನೀರಿನ ಹರಿವು ಉತ್ತಮ:ಗಂಗಾ, ಮಹಾನದಿ, ನರ್ಮದಾ, ಗೋದಾವರಿ ಸೇರಿದಂತೆ ವಿವಿಧ ನದಿಕಣಿವೆಗಳಲ್ಲಿ ಈ ಹಿಂದಿನ ವರ್ಷಗಳಿಗಿಂತ ಈ ಬಾರಿ ನೀರಿನ ಹರಿವು ಉತ್ತಮವಾಗಿದೆ. ಇಂಡಸ್ ಮತ್ತು ಪೂರ್ವಾಭಿಮುಖವಾಗಿ ಹರಿಯುವ ಪೆನ್ನಾರ್ ಹಾಗೂ ಕನ್ಯಾಕುಮಾರಿ ನಡುವಿನ ನದಿ ಕಣಿವೆಗಳಲ್ಲಿ ನೀರಿನ ಹರಿವು ಇಳಿಮುಖವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
