ನವದೆಹಲಿ:ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಕಾರ್ಯತಂತ್ರಕ್ಕೆ ಪರಿಣಾಮಕಾರಿ ತಿರುಗೇಟು ನೀಡುವ ಸಲುವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಹೆಚ್ಚುವರಿ ಮಿಲಿಟರಿ ಪಡೆಗಳನ್ನು ನಿಯೋಜಿಸಲು ಭಾರತ ಚಿಂತನೆ ನಡೆಸಿದೆ.
ಲಡಾಖ್​ನಲ್ಲಿ ಚೀನಾ ಕ್ಯಾತೆ ಕಾರಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಬಲ ಹೆಚ್ಚಳ ಹಾಗೂ ಸೇನಾ ಮೂಲಸೌಕರ್ಯ ಅಭಿವೃದ್ಧಿಗೆ ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆಗಳನ್ನು ಈಗ ವೇಗಗೊಳಿಸುವ ಅಗತ್ಯ ಇದೆ ಎಂದು ರಕ್ಷಣಾ ಸಚಿವಾಲಯ ಅಭಿಪ್ರಾಯಪಟ್ಟಿದೆ. 2001ರಲ್ಲಿ ಮೊದಲ ಬಾರಿ ಅಂಡಮಾನ್ ನಿಕೋಬಾರ್ ಕಮಾಂಡ್ (ಎಎನ್​ಸಿ)ನ್ನು ಭಾರತ ನೇಮಿಸಿತ್ತು. ಇಂದಿಗೂ ಅಲ್ಲಿ ಅದೊಂದೆ ಕಮಾಂಡ್ ಕಾರ್ಯನಿರ್ವಹಿಸುತ್ತಿದೆ. ಭೂ, ಸಮುದ್ರ ಮತ್ತು ವಾಯು ಮಾರ್ಗದ ಭದ್ರತೆಯನ್ನೂ ಈ ಕಮಾಂಡ್ ನೋಡಿಕೊಳ್ಳುತ್ತಿದೆ. ಹೀಗಾಗಿ ಅಲ್ಲಿನ ಅನೇಕ ಸೇನಾ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಯೋಜನೆಗಳು ಬಹುಕಾಲದಿಂದಲೂ ನನೆಗುದಿಗೆ ಬಿದ್ದಿವೆ. ಅನೇಕ ಯೋಜನೆಗಳ ಕಾಮಗಾರಿ ಪ್ರಾರಂಭಕ್ಕೆ ಪರಿಸರ ಇಲಾಖೆಯೂ ವಿಳಂಬವಾಗುತ್ತಿದೆ.
ಇದು ಚೀನಾದ ಕಚ್ಚಾತೈಲ ಆಮದು ಹಾಗೂ ಇನ್ನಿತರ ಸರಕು ವ್ಯಾಪಾರಕ್ಕೆ ನಿರ್ಣಾಯಕ ಮಾರ್ಗವಾಗಿದ್ದು, ಮಲಾಕಾ ಜಲಸಂಧಿಯ ಮೂಲಕ ಹಡಗುಗಳು ಸಂಚಾರ ನಡೆಸುತ್ತವೆ. ಹೀಗಾಗಿ ಎಎನ್​ಸಿ ವೃದ್ಧಿಸಲು ಕೆಲ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಉತ್ತರ ಅಂಡಮಾನ್​ನ ಶಿಬ್​ಪುರದ ನೌಕಾ ವಿಮಾನ ನಿಲ್ದಾಣ, ಐಎನ್​ಎಸ್ ಕೊಹಸ್ಸಾದಲ್ಲಿ ರನ್​ವೇ ವಿಸ್ತರಣೆಗೆ ಭೂ ಹಂಚಿಕೆ ಮತ್ತು ಸಂಬಂಧಪಟ್ಟ ಅನುಮತಿಗಳು ಈಗ ಪೂರ್ಣಗೊಂಡಿವೆ. ದೊಡ್ಡ ವಿಮಾನಗಳ ಕಾರ್ಯಾಚರಣೆಗಾಗಿ ಐಎನ್​ಎಸ್ ಕೊಹಸ್ಸಾ ಮತ್ತು ಐಎನ್​ಎಸ್ ಬಾಜ್ ಎರಡರಲ್ಲೂ ರನ್​ವೇಗಳನ್ನು 10,000 ಅಡಿಗಳಷ್ಟು ವಿಸ್ತರಿಸುವ ಯೋಜನೆ ಇದೆ. ಕಳೆದ 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಚುರುಕುಗೊಳಿಸಲಾಗುತ್ತಿದ್ದು, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಹೆಚ್ಚುವರಿ ಯುದ್ಧನೌಕೆಗಳು, ವಿಮಾನಗಳು, ಕ್ಷಿಪಣಿ, ಸೇನಾಪಡೆಗಳನ್ನು ನೆಲೆಗೊಳಿಸಲು ಸಹಾಯವಾಗುವಂತಹ ಮೂಲಸೌಕರ್ಯ ನಿರ್ವಿುಸಲಾಗುತ್ತಿದೆ. ಇದಕ್ಕೆ 5,650 ಕೋಟಿ ರೂ. ವೆಚ್ಚವಾಗಲಿದೆ. 2027ರ ವೇಳೆಗೆ ದ್ವೀಪಗಳಲ್ಲಿ ಕ್ಷಿಪಣಿ ವ್ಯವಸ್ಥೆ, ಎಮ್ -17 ವಿ5 ಹೆಲಿಕಾಪ್ಟರ್​ಗಳು, ಹೆಚ್ಚುವರಿ ವಿಮಾನಗಳು, ಸಾರಿಗೆ ವಿಮಾನಗಳು ಮತ್ತು ಡಾರ್ನಿಯರ್ -228 ಕಡಲ ಗಸ್ತು ವಿಮಾನಗಳನ್ನು ನಿಯೋಜಿಸುವ ಗುರಿ ಹೊಂದಲಾಗಿದೆ. ಜತಗೆ ಅಲ್ಲಿ ಯುದ್ಧ ವಿಮಾನಗಳನ್ನೂ ಶಾಶ್ವತವಾಗಿ ನಿಯೋಜಿಸಲು ಭಾರತ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಚೀನಾ ವಿರುದ್ಧ ಅನಿವಾಸಿ ಭಾರತೀಯರ ಪ್ರತಿಭಟನೆ
ಚೀನಾ ಮೇಲೆ ಆರ್ಥಿಕ ಬಹಿಷ್ಕಾರ ಹೇರಬೇಕು ಹಾಗೂ ಅವರ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಆಗ್ರಹಿಸಿ ನೂರಾರು ಭಾರತೀಯ ಅಮೆರಿಕನ್ನರು ನ್ಯೂಯಾರ್ಕ್​ನ ಟೈಮ್್ಸ ಸ್ಕೆ್ವೕರ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ರಾಜ್ಯಗಳಲ್ಲಿ ವಾಸಿಸುವ ಭಾರತ ಮೂಲದವರು ಫೆಡರೇಷನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (ಎಫ್​ಐಎ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದು, ಟಿಬೆಟ್ ಮತ್ತು ತೈವಾನ್ ಮೂಲದವರೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಬಾಯ್ಕಾಟ್ ಚೀನಾ ಬ್ಯಾನರ್​ಗಳನ್ನು ಹಿಡಿದಿದ್ದ ನೂರಾರು ಜನರು, ಇಂದಿನ ಭಾರತ 1962ರ ಭಾರತಕ್ಕಿಂತ ಭಿನ್ನವಾಗಿದೆ. ಚೀನಾದ ಆಕ್ರಮಣಶೀಲತೆ ಮತ್ತು ಅದರ ಅಂತಾರಾಷ್ಟ್ರೀಯ ಬೆದರಿಸುವಿಕೆಯನ್ನು ನಾವು ಸಹಿಸುವುದಿಲ್ಲ. ಚೀನಾದ ದುರಹಂಕಾರಕ್ಕೆ ನಾವು ಸೂಕ್ತ ಉತ್ತರ ನೀಡುತ್ತೇವೆ. ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಘೊಷಣೆಗಳನ್ನು ಕೂಗಿದರು.
ಚೀನಾ ಸಮುದ್ರಕ್ಕೆ ಅಮೆರಿಕದ ಹಡಗುಗಳು
ಚೀನಾ ಸಮರಾಭ್ಯಾಸ ನಡೆಸುತ್ತಿರುವ ನಡುವೆಯೇ ಅಮೆರಿಕ ತನ್ನ ಎರಡು ಅಣುಶಕ್ತಿ ಚಾಲಿತ ವಿಮಾನವಾಹಕ ಯುದ್ಧನೌಕೆಗಳನ್ನು ದಕ್ಷಿಣ ಚೀನಾ ಸಮುದ್ರಕ್ಕೆ ಕಳುಹಿಸಿದೆ. ಗಡಿ ವಿಚಾರವಾಗಿ ಭಾರತ ಸೇರಿ ನೆರೆ ದೇಶಗಳೊಂದಿಗೆ ಸಂಘರ್ಷಕ್ಕಿಳಿದಿರುವ ಚೀನಾಕ್ಕೆ ಎಚ್ಚರಿಕೆ ನೀಡುವುದು ಅಮೆರಿಕದ ಉದ್ದೇಶ ಎನ್ನಲಾಗಿದೆ. ಯುಎಸ್​ಎಸ್ ನಿಮಿಟ್ಜ್ ಮತ್ತು ಯುಎಸ್​ಎಸ್ ರೊನಾಲ್ಡ್ ರೀಗನ್ ಯುದ್ಧನೌಕೆಗಳು ಈಗಾಗಲೇ ಚೀನಾ ಸಮುದ್ರದೆಡೆಗೆ ತೆರಳಿವೆ. ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ನಾವು ಬದ್ಧರಾಗಿದ್ದೇವೆ ಎಂದು ನಮ್ಮ ಪಾಲುದಾರರು ಮತ್ತು ಮಿತ್ರರಾಷ್ಟ್ರಗಳಿಗೆ ನಿಸ್ಸಂದಿಗ್ಧವಾದ ಸಂಕೇತವನ್ನು ತೋರಿಸುವುದು ಇದರ ಉದ್ದೇಶ ಎಂದು ಅಮೆರಿಕ ಹೇಳಿದೆ. ಆದರೆ ಅಮೆರಿಕ ವಿರುದ್ಧವೇ ಹರಿಹಾಯ್ದಿರುವ ಚೀನಾ, ಹೆಚ್ಚುತ್ತಿರುವ ಉದ್ವಿಗ್ನತೆಗೆ ಅಮೆರಿಕವೇ ಕಾರಣ ಎಂದು ಆರೋಪಿಸಿದೆ.
ಚೀನಾ-ಭಾರತ ಜತೆ ರಷ್ಯಾ ನಿಕಟ ಸಂಪರ್ಕ
ಜಮ್ಮು-ಕಾಶ್ಮೀರದ ಲಡಾಖ್​ನ ಎಲ್​ಎಸಿ ಬಳಿಯಲ್ಲಿ ಉಂಟಾಗಿರುವ ಉದ್ವಿಗ್ನ ಸ್ಥಿತಿ ಕುರಿತು ಭಾರತ ಮತ್ತು ಚೀನಾ ಜತೆ ರಷ್ಯಾ ದ್ವಿಪಕ್ಷೀಯವಾಗಿ ನಿಕಟ ಸಂಪರ್ಕದಲ್ಲಿದ್ದು, ಪರಿಸ್ಥಿತಿ ತಿಳಿಗೊಳಿಸಲು ನಡೆಸಲಾಗುತ್ತಿರುವ ಪ್ರಯತ್ನಗಳನ್ನು ಸ್ವಾಗತಿಸಿದೆ. ನಾವು ನಮ್ಮ ಎಲ್ಲ ಪಾಲುದಾರರೊಂದಿಗೆ ನಿಯಮಿತ ಸಂವಾದವನ್ನು ನಿರ್ವಹಿಸುತ್ತಿದ್ದೇವೆ. ಎಲ್​ಎಸಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಭಾರತ ಈಗಾಗಲೇ ರಷ್ಯಾಕ್ಕೆ ಮಾಹಿತಿ ನೀಡಿದೆ. ರಷ್ಯಾದ ಉಪ ವಿದೇಶಾಂಗ ಸಚಿವ ಇಗೊರ್ ಮೊರ್ಗಲೋವ್ ಮತ್ತು ರಷ್ಯಾದ ಭಾರತದ ರಾಯಭಾರಿ ಬಾಲಾ ವೆಂಕಟೇಶ್ ವರ್ವ ಅವರು ಮಾಸ್ಕೋದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಕಳೆದ ಜುಲೈ 2ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ದೂರವಾಣಿ ಮೂಲಕ ಮಾತನಾಡಿದ್ದರು.
ಬಿಹಾರ್​ ಸಿಎಂಗೆ ಕರೊನಾ ಭೀತಿ; ಮುಖ್ಯಮಂತ್ರಿಯ ನಾಲ್ವರು ಕಾರ್ಯದರ್ಶಿಗಳಲ್ಲಿ ಸೋಂಕು ದೃಢ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + eight =
Remember me
