ನವದೆಹಲಿ:ಕರೊನಾ ವೈರಸ್​ಗೆ ಗುಜರಾತ್ ತತ್ತರಿಸಿದೆ. ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ದಿಲ್ಲಿಯನ್ನು ಬುಧವಾರ ಹಿಂದಿಕ್ಕಿದೆ. ಅಹಮದಾಬಾದ್ ನಗರವೊಂದರಲ್ಲೇ 1434 ಸೋಂಕಿತರು ಪತ್ತೆಯಾಗಿದ್ದಾರೆ. ಹಳೇ ಅಹಮದಾಬಾದ್​ಭಾಗದಲ್ಲಿ ಸೋಂಕಿತರು ದೊಡ್ಡ ಪ್ರಮಾಣದಲ್ಲಿದ್ದು, ಬಹುಪಾಲು ಮಂದಿಗೆ ದೆಹಲಿಯ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡ ಪರಿಣಾಮ ಸೋಂಕು ತಗುಲಿದೆ. ಕಾಂಗ್ರೆಸ್ ಶಾಸಕ ಇಮ್ರಾನ್ ಖೇಡಾವಾಲ, ಕಾರ್ಪೆ ರೇಟರ್ ಬದ್ರುದ್ದಿನ್ ಶೇಖ್ ಹಾಗೂ ಆತನ ಪತ್ನಿಗೂ ವೈರಸ್ ಸೋಂಕಿರುವುದು ಖಚಿತ ಆಗಿರುವುದರಿಂದ ಜನಪ್ರತಿನಿಧಿಗಳು ಮನೆಯಿಂದ ಹೊರಬರಬಾರದು ಎಂದು ಸರ್ಕಾರ ನಿರ್ದೇಶನ ನೀಡಿದೆ. ಎಲ್ಲಕ್ಕಿಂತ ಮೇಲಾಗಿ ವೈರಸ್ ಸೋಂಕು ಪತ್ತೆಯಾಗುವ ಮುನ್ನ ಕಾಂಗ್ರೆಸ್ ಶಾಸಕ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಭೇಟಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ಸಿಎಂ ರೂಪಾನಿ ಅವರೂ ಮನೆಯಲ್ಲೇ ಉಳಿದುಕೊಂಡಿದ್ದು, ಅಲ್ಲಿಂದಲೇ ಅಧಿಕಾರಿಗಳಿಗೆ ಹಾಗೂ ಹಿರಿಯ ಸಚಿವರಿಗೆ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ. ಮನೆಯಿಂದ ವಿಡಿಯೋ ಸಂವಾದದ ಮೂಲಕವೇ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ತಮ್ಮ ಮನೆಗೆ ಯಾರೂ ಬರಕೂಡದು ಎಂದೂ ಆದೇಶ ನೀಡಿದ್ದಾರೆ.
ಶಾಸಕ ಇಮ್ರಾನ್ ಭೇಟಿ ಮಾಡಿದ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅವರೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದ ಐವರು ವ್ಯಕ್ತಿಗಳಿಗೂ ಸೋಂಕು ಹಬ್ಬಿದ್ದು, ಕುಟುಂಬಸ್ಥರಿಗೂ ವೈರಾಣು ಹರಡಿದೆ. ಅಹಮದಾಬಾದ್​ನಲ್ಲಿ 92 ಲಕ್ಷ ಜನಸಂಖ್ಯೆ ಇದ್ದು, ಮೇ 3ರ ಬಳಿಕವೂ ಲಾಕ್​ಡೌನ್ ಮುಂದುವರಿಯುವುದು ಬಹುತೇಕ ನಿಶ್ಚಿತ ಎನ್ನಲಾಗಿದೆ. ಬುಧವಾರದ ವೇಳೆಗೆ ಒಟ್ಟು 2272 ವೈರಸ್ ಸೋಂಕಿತರು ಪತ್ತೆಯಾಗಿದ್ದು, 144 ಮಂದಿ ಗುಣಮುಖರಾಗಿದ್ದಾರೆ. ಆದರೆ, 95 ಮಂದಿ ಕೋವಿಡ್​ಗೆ ಮೃತಪಟ್ಟಿರುವುದು ರಾಜ್ಯ ಸರ್ಕಾರದ ಚಿಂತೆಗೆ ಕಾರಣವಾಗಿದೆ. ಹೆಚ್ಚು ಕಡಿಮೆ ಗುಜರಾತ್​ನಷ್ಟೇ ಸೋಂಕಿತರು ದೆಹಲಿಯಲ್ಲಿದ್ದರೂ, ಸಾವಿನ ಸಂಖ್ಯೆ 47 ಮಾತ್ರ.
ಹಾಗಾದರೆ ಗುಜರಾತ್​ನಲ್ಲಿ ಸಾವಿನ ಪ್ರಮಾಣ ಅಧಿಕವಾಗಿರುವುದು ಏಕೆ ಎಂಬ ಪ್ರಶ್ನೆ ಅನೇಕರನ್ನು ಕಾಡಿದೆ. 95 ಮೃತರಲ್ಲಿ 61 ಮಂದಿ ಅಹಮದಾಬಾದ್​ಗೆ ಸೇರಿದವರಾಗಿದ್ದು, 17 ಮಂದಿ ಸೂರತ್, 8 ಮಂದಿ ವಡೋದರ ಮೂಲದವರು. ಈವರೆಗೆ 38,059 ಮಂದಿಗೆ ಕರೊನಾ ಪರೀಕ್ಷೆ ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 2,500 ಮಂದಿ ಪರೀಕ್ಷೆಗೊಳ ಪಟ್ಟಿದ್ದಾರೆ. ಸೌದಿ ಅರೇಬಿಯಾಕ್ಕೆ ತೆರಳಿದ್ದ ರಾಜಕೋಟ್​ನ ವ್ಯಕ್ತಿಗೆ ಕರೊನಾ ಸೋಂಕಿರುವುದು ಮಾ.19ರಂದು ದೃಢಪಟ್ಟಿತ್ತು. ಅದು ರಾಜ್ಯದ ಮೊದಲ ಕರೊನಾ ಕೇಸು.

ಸರ್ಕಾರಿ ನೌಕರರಿಗೆ ಇಲ್ಲಿದೆ ಸಿಹಿ ಸುದ್ದಿ: ಏಪ್ರಿಲ್ ತಿಂಗಳ ಸಂಬಳಕ್ಕೆ ಯಾವುದೇ ಸಮಸ್ಯೆ ಇಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
