ನವದೆಹಲಿ: ಮಹಿಳಾ ಅಧಿಕಾರಿಗಳು ಪುರುಷ ಅಧಿಕಾರಿಗಳಷ್ಟೆ ದಕ್ಷರಾಗಿ ಕಾರ್ಯನಿರ್ವಹಿಸಬಲ್ಲರು. ಹೀಗಾಗಿ ಲಿಂಗ ತಾರತಮ್ಯ ಮಾಡದೆ ನೌಕಾಪಡೆಯಲ್ಲೂ ಸ್ತ್ರೀಯರಿಗೆ ಕಾಯಂ ಕಮಿಷನ್ (ಪಿಸಿ) ರಚಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
3 ತಿಂಗಳಲ್ಲಿ ಈ ಆದೇಶ ಜಾರಿಯಾಗಿರಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ. ಭೂಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಾಯಂ ಕಮಿಷನ್ ರಚಿಸುವಂತೆ ಸೂಚಿಸಿದ ಒಂದು ತಿಂಗಳಿನ ನಂತರ ಈ ಮಹತ್ವದ ತೀರ್ಪನ್ನು ಸವೋಚ್ಚ ನ್ಯಾಯಾಲಯ ನೀಡಿದೆ.
2008ಕ್ಕೂ ಹಿಂದೆ ಕರ್ತವ್ಯಕ್ಕೆ ಸೇರಿರುವ ಮಹಿಳಾ ಅಧಿಕಾರಿಗಳನ್ನು ಕಾಯಂ ಕಮಿಷನ್​ಗೆ ಪರಿಗಣಿಸದಿರುವ ನೌಕಾಪಡೆಯ ನೀತಿಯನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ರದ್ದು ಮಾಡಿದೆ. ಕೆಲವು ಶ್ರೇಣಿ ಅಥವಾ ವಿಭಾಗದ ಮಹಿಳಾ ಅಧಿಕಾರಿಗಳನ್ನು ನಿರ್ಬಂಧಿಸುವ ಈ ನೀತಿಯು ನೌಕಾಪಡೆಯ ಸ್ತ್ರೀ ಉದ್ಯೋಗಿಗಳ ಭವಿಷ್ಯಕ್ಕೆ ಮಾರಕ ಎಂದು ಅಭಿಪ್ರಾಯಪಟ್ಟಿದೆ.
ನೌಕಾಪಡೆಯಲ್ಲಿ ಅಲ್ಪಕಾಲೀನ ಕಮಿಷನ್ (ಎಸ್​ಎಸ್​ಸಿ) ಅಡಿಯಲ್ಲಿ ಬರುವ ಶೈಕ್ಷಣಿಕ, ಕಾನೂನು, ಸಾಮಗ್ರಿ ಸಾಗಣೆ ವಿಭಾಗದ ಅಧಿಕಾರಿಗಳು ಕಾಯಂ ಕಮಿಷನ್​ಗೆ ಬರಲಿಚ್ಛಿಸಿದರೆ ಅಂತವರನ್ನು ಪರಿಗಣಿಸಬೇಕು. ಪುರುಷ ಅಧಿಕಾರಿಗಳಿಗೆ ಅನ್ವಯವಾಗುವ ನಿಯಮಗಳೇ ಇವರಿಗೂ ಅನ್ವಯವಾಗಬೇಕು ಎಂದು ನ್ಯಾಯಪೀಠ ಸೂಚಿಸಿದೆ.
ಮಹಿಳಾ ಅಧಿಕಾರಿಗಳಿಗೆ ಯುದ್ಧ ನೌಕೆಯಲ್ಲಿ ಕಾರ್ಯನಿರ್ವಹಿಸಲು ಯಾವುದೇ ಅಡ್ಡಿಯಿಲ್ಲ ಎಂದು ಸರ್ಕಾರ ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಹಿಳೆಯರಿಗೆ ಯಾವ ನಿರ್ಬಂಧವೂ ಇಲ್ಲ ಎಂದ ಮೇಲೆ ಅಧಿಕಾರಗಳನ್ನು ಪುರುಷ ಮತ್ತು ಸ್ತ್ರೀ ಎಂದು ಏಕೆ ತಾರತಮ್ಯ ಮಾಡಬೇಕು. ಮಹಿಳೆಯರಿಗಾಗಿಯೇ ಕಾಯಂ ಕಮಿಷನ್ ರಚನೆ ಮಾಡದಿದ್ದರೆ ಅದು ಗಂಭೀರ ನ್ಯಾಯಲೋಪವಾಗುತ್ತದೆ ಎಂದು ಹೇಳಿತು.
ಸೇನಾಪಡೆಯಲ್ಲಿ ವನಿತೆಯರು
ವಾಯುಪಡೆಯಲ್ಲಿ ಈಗಾಗಲೇ ಮಹಿಳೆಯರು ಯುದ್ಧ ವಿಮಾನ ಚಲಾಯಿಸುತ್ತಿದ್ದಾರೆೆ. ವಿಂಗ್ ಕಮಾಂಡರ್ ಎಸ್. ಧಾಮಿ ಕಳೆದ ಆಗಸ್ಟ್​ನಲ್ಲಿ ಫ್ಲೈಟ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸಿದ ಮೊದಲ ಅಧಿಕಾರಿಯಾಗಿದ್ದಾರೆ. ಸಬ್-ಲೆಫ್ಟಿನೆಂಟ್ ಶಿವಾಂಗಿ ನೌಕಾ ಪಡೆಯಲ್ಲಿ ಪೈಲಟ್ ಆಗಿರುವ ಮೊದಲ ಮಹಿಳಾ ಅಧಿಕಾರಿ. ಕಳೆದ ಡಿಸೆಂಬರ್ 2ರಂದು ಕೊಚ್ಚಿಯಲ್ಲಿ ಡಾರ್ನಿಯರ್ ಕಣ್ಗಾವಲು ವಿಮಾನವನ್ನು ಅವರು ಚಾಲನೆ ಮಾಡಿದ್ದಾರೆ.
ಸೇನಾಪಡೆಗಳಲ್ಲಿ ಅನುಸರಿಸುತ್ತಿರುವ ಲಿಂಗ ತಾರತಮ್ಯಕ್ಕೆ ನೂರೆಂಟು ನೆಪಗಳಿರಬಹುದು. ಆದರೆ, ಸಂವಿಧಾನವು ಲಿಂಗಭೇದವಿಲ್ಲದೆ ಪ್ರತಿ ವ್ಯಕ್ತಿಗೂ ಘನತೆ ನೀಡಿದೆ. ಮುಕ್ತ ಮತ್ತು ಸಮಾನ ಸನ್ನಿವೇಶದಲ್ಲಿ ಉದ್ಯೋಗ ಮಾಡುವ ಹಕ್ಕನ್ನು ಕಲ್ಪಿಸಿದೆ.
| ನ್ಯಾ.ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ
ಯುವ ಕಾಂಗ್ರೆಸ್ ಮುಖಂಡರ ಹೊಡೆದಾಟ; ಕ್ಷೇತ್ರ ಪ್ರಧಾನ ಕಾರ್ಯದರ್ಶಿಗೆ ಹಲ್ಲೆ, ನಾಲ್ವರ ವಿರುದ್ಧ ಮೊಕದ್ದಮೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 9 =
Remember me
