ದೀಸ್ಪುರ್​:ಭಾರತವು ವಿವಿಧ ಧರ್ಮಗಳು, ಸಂಸ್ಕೃತಿಗಳು, ಸಂಪ್ರದಾಯಗಳು, ಭಾಷೆಗಳು, ಹಬ್ಬಗಳು ಮತ್ತು ಜನಾಂಗೀಯತೆಯನ್ನು ಹೊಂದಿರುವ ಹಾಗೂ ವಿವಿಧತೆಯಲ್ಲಿ ಏಕತೆ ಸಾರುವ ಅಮೋಘ ತಾಣ. ನೈಸರ್ಗಿಕ ಸೌಂದರ್ಯ ಮತ್ತು ಆಕರ್ಷಕ ಪ್ರವಾಸಿ ಸ್ಥಳಗಳೊಂದಿಗೆ ಜಗತ್ತನ್ನು ಸೆಳೆದಿರುವ ಭಾರತ ತನ್ನ ಭಾರೀ ಜನಸಂದಣಿಯಿಂದ ಜಗದ್ವಿಖ್ಯಾತಿಯನ್ನು ಗಳಿಸಿದೆ.
ನಮ್ಮ ಭವ್ಯ ಭಾರತವನ್ನು ಪ್ಲ್ಯಾಸ್ಟಿಕ್​ ಎಂಬ ಮಾಯೆ ಉಸಿರುಗಟ್ಟಿಸುತ್ತಿದೆ. ಸರ್ಕಾರ ಎಷ್ಟೇ ಪ್ಲ್ಯಾಸ್ಟಿಕ್​ ನಿಷೇಧ ಮಾಡಿದರೂ ಬಳಸುವವರ ಸಂಖ್ಯೆ ಕಡಿಮೆಯಾಗಿಲ್ಲ. ದೇಶದ ಹಲವು ಸ್ಥಳಗಳು ಪ್ಲ್ಯಾಸ್ಟಿಕ್‌ನಿಂದ ತುಂಬಿ ತುಳುಕುತ್ತಿವೆ. ಸಮುದ್ರದ ಆಳದಿಂದ ಪರ್ವತ ಶಿಖರಗಳವರೆಗೆ, ಫ್ಲ್ಯಾಸ್ಟಿಕ್‌ನ ಅತಿಯಾದ ಬಳಕೆಯಿಂದ ಸುಂದರವಾದ ದೇಶವನ್ನು ಕಸ ಮಾಡಿದ್ದಾರೆ.
ಪ್ಲ್ಯಾಸ್ಟಿಕ್​ ಮರುಬಳಕೆ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಎಲ್ಲರು ಉದ್ದುದ್ದ ಭಾಷಣ ಮಾಡುತ್ತಾರೆ. ಆದರೆ, ಅಸ್ಸಾಂನಲ್ಲಿರುವ ಈ ಒಂದು ಶಾಲೆ ತನ್ನ ವಿಭಿನ್ನ ಉಪಕ್ರಮದಿಂದ ಪ್ಲ್ಯಾಸ್ಟಿಕ್​ ಮರುಬಳಕೆ ಮಾಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿಯೇ ಇರುವ ಈ ಶಾಲೆಯು ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ. ಅದರ ಬದಲಾಗಿ ವಿದ್ಯಾರ್ಥಿಗಳು ಪ್ಲ್ಯಾಸ್ಟಿಕ್ ಬಾಟಲಿಗಳನ್ನು ತರಬೇಕು. ಪ್ರತಿ ವಾರ ವಿದ್ಯಾರ್ಥಿಗಳು 25 ಪ್ಲಾಸ್ಟಿಕ್ ಬಾಟಲಿಗಳನ್ನು ಶುಲ್ಕವಾಗಿ ತರಬೇಕು.
ಇದನ್ನೂ ಓದಿ:Navratri 2023: ನವರಾತ್ರಿ ಸಮಯದಲ್ಲಿ ಈ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಿದರೆ ಎಲ್ಲಾ ಆಸೆಗಳು ಈಡೇರುತ್ತವೆಯಂತೆ!
ತಮ್ಮ ಪ್ರದೇಶದಲ್ಲಿ ಅನಕ್ಷರತೆ ಮತ್ತು ಕಸವನ್ನು ಕೊನೆಗೊಳಿಸುವ ಉತ್ತಮ ಪ್ರಯತ್ನದಲ್ಲಿ, ಇಬ್ಬರು ಸಹೃದಯ ವ್ಯಕ್ತಿಗಳಾದ ಪರ್ಮಿತಾ ಶರ್ಮಾ ಮತ್ತು ಮಜಿನ್ ಮುಖ್ತಾರ್ ಅವರು 2016ರಲ್ಲಿ ಈ ಶಾಲೆಯನ್ನು ಸ್ಥಾಪಿಸಿದರು. ಅನಕ್ಷರತೆಯನ್ನು ಹೋಗಲಾಡಿಸಲು ಇಲ್ಲಿ ಉಚಿತವಾಗಿ ಅಧ್ಯಯನ ಮಾಡಬಹುದು ಮತ್ತು ಅದೇ ಸಮಯದಲ್ಲಿ ಅವರು ಪ್ಲ್ಯಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಬಹುದು. ಇದರಿಂದ ಸ್ವಚ್ಛತೆಯನ್ನು ಕಾಪಾಡಬಹುದು ಮತ್ತು ಪ್ಲ್ಯಾಸ್ಟಿಕ್​ ಮರುಬಳಕೆ ಸಹ ಮಾಡಬಹುದು. ಅಲ್ಲದೆ, ಶುಲ್ಕವಿಲ್ಲದೆ ಉಚಿತವಾಗಿ ಓದಬಹುದು.
If this doesn't surprise you, what does?#Incredible_NorthEast
Credit: northeastview_pic.twitter.com/6RO1SqhaNa
— Temjen Imna Along (@AlongImna)October 12, 2023

ಇಷ್ಟೇ ಅಲ್ಲದೆ ಈ ಶಾಲೆಯು ಬೋಧನೆ ಮತ್ತು ಸ್ವಯಂ-ಅಧ್ಯಯನವನ್ನೂ ಸಹ ಉತ್ತೇಜಿಸುತ್ತದೆ. ಇಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಕಲಿಸುತ್ತಾರೆ. ಇದರಿಂದ ವಿಷಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ಸಂಗ್ರಹಿಸಿದ ಪ್ಲ್ಯಾಸ್ಟಿಕ್ ಬಾಟಲಿಗಳನ್ನು ಡಿಐವೈ ವಸ್ತುಗಳು, ಗೋಡೆಯ ಇಟ್ಟಿಗೆಗಳು, ರಸ್ತೆಗಳು ಮತ್ತು ಶೌಚಾಲಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದರ ಹೊರತಾಗಿ ವಿದ್ಯಾರ್ಥಿಗಳಿಗೆ ಪ್ಲ್ಯಾಸ್ಟಿಕ್ ಮರುಬಳಕೆ, ಮರಗೆಲಸ, ತೋಟಗಾರಿಕೆ ಮತ್ತು ಹಲವಾರು ಭಾಷೆಗಳನ್ನೂ ಸಹ ಕಲಿಸಲಾಗುತ್ತದೆ.
ಈ ಶಾಲೆಯ ಕುರಿತಾದ ವಿಡಿಯೋ ಸ್ಟೋರಿಯನ್ನು ನಾಗಲ್ಯಾಂಡ್​ನ ಪ್ರಖ್ಯಾತ ರಾಜಕಾರಣಿ ತೆಂಜೆನ್​ ಇಮ್ನಾ ಸೇರಿದಂತೆ ಅನೇಕ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.(ಏಜೆನ್ಸೀಸ್​)
ಆಪರೇಷನ್​ ಅಜಯ್​: ಯುದ್ಧ ಪೀಡಿತ ಇಸ್ರೇಲ್​ನಿಂದ ತವರಿಗೆ ಮರಳಿದ 212 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಬಿರುಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 1 =
Remember me
