ಅಹಮದಾಬಾದ್:ಟೆಸ್ಟ್ ಸರಣಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ದಿಟ್ಟ ತಿರುಗೇಟು ನೀಡಿ ಬೀಗಿದ್ದ ವಿರಾಟ್ ಕೊಹ್ಲಿ ಪಡೆ ಚುಟುಕು ಕ್ರಿಕೆಟ್ ಸರಣಿಯಲ್ಲಿ ಆರಂಭದಲ್ಲೇ ಮುಗ್ಗರಿಸಿದೆ. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂದು ಹೆಸರಾಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ, ಏಕದಿನ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ 8 ವಿಕೆಟ್‌ಗಳಿಂದ ಶರಣಾಯಿತು.
ಟೀಮ್​ ಇಂಡಿಯಾ ಪಂದ್ಯವೇನೋ ಸೋತಿತು. ಆದರೆ, ಇದೇ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ನಿಗೂಢ ಯುವತಿ ಸಾಕಷ್ಟು ಮಂದಿಯ ಮನ ಗೆದ್ದಿದ್ದಾರೆ. ಹೀಗಾಗಿಯೇ ಸಾಮಾಜಿಕ ಜಾಲತಾಣದಲ್ಲಿ ಈಕೆ ವೈರಲ್​ ಆಗಿದ್ದು, ಮಾಹಿತಿಗಾಗಿ ಹುಡುಕಾಟ ಜೋರಾಗಿದೆ. ಯಾರೀ ಸುಂದರಿ ಎಂದು ನೆಟ್ಟಿಗರು ಪರಿತಪಿಸುತ್ತಿದ್ದಾರೆ.
ಇದನ್ನೂ ಓದಿರಿ:ವೆಜ್​ ಕೇಳಿದ್ರೆ ನಾನ್​ ವೆಜ್​ ಪಿಜ್ಜಾ ಡೆಲಿವರಿ: ಮಹಿಳೆ ಕೇಳಿದ ಪರಿಹಾರದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!
ಸಾಮಾಜಿಕ ಜಾಲತಾಣಗಳಲ್ಲಿ ಸುಂದರಿಯ ಫೋಟೋ ಪೋಸ್ಟ್​ ಮಾಡಿ ಹಾಸ್ಯಭರಿತ ಕಾಮೆಂಟ್​ಗಳನ್ನು ಹರಿಬಿಡುತ್ತಾರೆ. ಕ್ಯಾಮೆರಾಮೆನ್​ ಇಂದಿನ ಪಂದ್ಯದಲ್ಲಿ ನಿಜಕ್ಕೂ ದುಃಖಿತನಾಗಿಲ್ಲ ಎಂದು ನೆಟ್ಟಿಗರೊಬ್ಬರು ನಗೆ ಚಟಾಕಿ ಹಾರಿಸಿದ್ದಾರೆ. ಇನ್ನು ಕೆಲವರು ಇಂತಹ ಸುಂದರಿಯನ್ನು ಸೆರೆಹಿಡಿದ ಕ್ಯಾಮೆರಾಮೆನ್​ಗೆ ಧನ್ಯವಾದಗಳು ಎಂದಿದ್ದಾರೆ.
Cameraman never disappoints.#INDvENG#Ahmedabad#NarendraModiStadiumpic.twitter.com/t9HTMnlRRg
— Arpit Sharma (@aparchittsharma)March 12, 2021

Ye tho Gaya😭😭😭🤣🤣🤣🤣#INDvENGpic.twitter.com/weg1qHhX9f
— Sanjay Tanwani🇮🇳 (@tanwani_sanjay)March 12, 2021

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಇವೊಯಿನ್ ಮಾರ್ಗನ್ ಆತಿಥೇಯ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಶ್ರೇಯಸ್ ಅಯ್ಯರ್ (67 ರನ್, 48 ಎಸೆತ, 8 ಬೌಂಡರಿ, 1 ಸಿಕ್ಸರ್) ಸಮಯೋಚಿತ ನಿರ್ವಹಣೆ ನಡುವೆಯೂ ವೇಗಿ ಜೋಫ್ರಾ ಆರ್ಚರ್ (23ಕ್ಕೆ 3) ಮಾರಕ ದಾಳಿಗೆ ನಲುಗಿದ ಭಾರತ ತಂಡ 7 ವಿಕೆಟ್‌ಗೆ 124 ರನ್ ಗಳಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ 15.3 ಓವರ್‌ಗಳಲ್ಲಿ 2 ವಿಕೆಟ್‌ಗೆ 130 ರನ್ ಗಳಿಸಿ ಜಯ ದಾಖಲಿಸಿತು.(ಏಜೆನ್ಸೀಸ್​)
ಇದನ್ನೂ ಓದಿರಿ:ಈ ರಾಶಿಯವರಿಗೆ ಪರಮಾತ್ಮ ನಿರೀಕ್ಷೆಗೂ ಮೀರಿದ ಹಣ ನಿಡುತ್ತಾನೆ: ವಾರಭವಿಷ್ಯ
ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಎದುರು 8 ವಿಕೆಟ್‌ಗಳಿಂದ ಸೋತ ಭಾರತ ತಂಡ

ವೈರಲ್ ಆಗ್ತಿದೆ ಬುಮ್ರಾ ಕುರಿತು ಭಾವಿ ಪತ್ನಿ ಸಂಜನಾ ಗಣೇಶನ್​ ಮಾಡಿದ್ದ ಹಳೆಯ ಟ್ವೀಟ್​..!

ಭರತನಾಟ್ಯ ತ್ಯಜಿಸಿ ಕ್ರಿಕೆಟ್‌ಗೆ ಬಂದ ಮಿಥಾಲಿ ರಾಜ್ ಈಗ 10 ಸಾವಿರ ರನ್‌ಗಳ ರಾಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 13 =
Remember me
