ನವದೆಹಲಿ: ಜಗತ್ತನ್ನೆ ತಲ್ಲಣಗೊಳಿಸಿರುವ ಕೋವಿಡ್​ 19 ಸೋಂಕಿನ ಈ ಸಂದರ್ಭದಲ್ಲಿ ದೇಶ 74ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ. ಕೆಂಪುಕೋಟೆ ಆವರಣದಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮವೇ ಇಡೀ ಆಚರಣೆಯ ಕೇಂದ್ರ ಬಿಂದು. ಈ ಸಲ ಕೋವಿಡ್ ನಿಯಮಾನುಸಾರವೇ ಆಚರಣೆ ನಡೆಯಲಿದೆ ಎಂಬುದನ್ನು ಸರ್ಕಾರವೂ ಖಚಿತಪಡಿಸಿದೆ. ಆದಾಗ್ಯೂ, ಅಲ್ಲಿ ಯಾವ ರೀತಿ ತಯಾರಿ ನಡೆದಿದೆ ಎಂಬ ಕುತೂಹಲ ಸಹಜ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೆಂಪುಕೋಟೆಯಿಂದ ಏಳನೇ ಬಾರಿಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು, ಎಲ್ಲ ಆಹ್ವಾನಿತರೂ ಮಾಸ್ಕ್​ ಧರಿಸಬೇಕೆಂಬುದನ್ನು ಕಡ್ಡಾಯಗೊಳಿಸಲಾಗಿದೆ. ಕಾರ್ಯಕ್ರಮ ಸ್ಥಳದ ವಿವಿಧ ಭಾಗಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್​ಗಳನ್ನೂ ಇರಿಸಲಾಗುತ್ತಿದ್ದು, ಮಾಸ್ಕ್​ ತಾರದೇ ಬಂದವರು ಅದನ್ನು ಬಳಸಬಹುದಾಗಿದೆ. ಇದೇ ರೀತಿ, ಮೊದಲೇ ನಿಶ್ಚಿತ ಭಾಗಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್​ಗಳನ್ನೂ ಇರಿಸಲಾಗಿರುತ್ತದೆ. ಇದಕ್ಕೆ ಸಂಬಂಧಿಸಿ ಅತಿಥಿಗಳ ಗಮನ ಸೆಳೆಯುವ ಫಲಕಗಳನ್ನೂ ಇರಿಸಲಾಗುತ್ತದೆ.
ಇದನ್ನೂ ಓದಿ:ರಷ್ಯಾದ್ದಲ್ಲ, ಚೀನಾ ಲಸಿಕೆಯೇ ಮೊದಲು…! ಜೂನ್​ನಲ್ಲಿಯೇ ಬಳಕೆಯಾಗುತ್ತಿದೆ ಕ್ಯಾನ್​ಸಿನೋ ಔಷಧ
ಆಹ್ವಾನಿತರಿಗಷ್ಟೇ ಕಾರ್ಯಕ್ರಮ ಸ್ಥಳಕ್ಕೆ ಪ್ರವೇಶ. ಆಹ್ವಾನ ಪತ್ರಿಕೆ ಹೊಂದಿಲ್ಲದವರಿಗೆ ಪ್ರವೇಶಾವಕಾಶವಿಲ್ಲ. ಅಧಿಕಾರಿಗಳು, ರಾಜತಾಂತ್ರಿಕರು, ಸಾರ್ವಜನಿಕ ಗಣ್ಯರು, ಮಾಧ್ಯಮ ಪ್ರತಿನಿಧಿಗಳು ಸೇರಿ 4,000ಕ್ಕೂ ಹೆಚ್ಚು ಜನರಿಗೆ ಆಹ್ವಾನ ಪತ್ರಿಕೆಯನ್ನು ಸರ್ಕಾರ ಕಳುಹಿಸಿದೆ. ಅತಿಥಿಗಳು ಕಾರ್ಯಕ್ರಮ ಸ್ಥಳ ಪ್ರವೇಶಿಸುವಲ್ಲಿಯೇ ಅವರನ್ನು ಥರ್ಮಲ್ ಸ್ಕ್ರೀನಿಂಗ್​ಗೆ ಒಳಪಡಿಸಲಾಗುತ್ತದೆ. ರೆಡ್​ಫೋರ್ಟ್ ಆವರಣವನ್ನು ನಿಯತವಾಗಿ ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಿ ಇರಿಸಲಾಗಿದೆ.
ಇದನ್ನೂ ಓದಿ:ಎರಡೇ ವಾರದಲ್ಲಿ 97 ಸಾವಿರ ಮಕ್ಕಳಲ್ಲಿ ಸೋಂಕು; ಶಾಲೆಗಳ ಮರು ಆರಂಭ ನಿರ್ಧಾರ ಹುಟ್ಟು ಹಾಕಿದೆ ಭಾರಿ ಚರ್ಚೆ
ಆರೋಗ್ಯ ತಪಾಸಣೆಗೆ ಮೆಡಿಕಲ್ ಬೂತ್​ಗಳನ್ನು ನಾಲ್ಕು ಕಡೆ ರಚಿಸಲಾಗಿದ್ದು, ಕಾರ್ಯಕ್ರಮ ಸ್ಥಳ ಪ್ರವೇಶಿಸುವ ಅತಿಥಿಗಳ ಪೈಕಿ ಯಾರಿಗಾದರೂ ಕೋವಿಡ್​ ಗುಣಲಕ್ಷಣಗಳು ಕಂಡರೆ ಅವರಿಗೆ ಪ್ರಾಥಮಿಕ ಚಿಕಿತ್ಸೆ ಇಲ್ಲೇ ಒದಗಿಸಲಾಗುತ್ತದೆ. ಆ್ಯಂಬುಲೆನ್ಸ್​ಗಳು ನಾಲ್ಕು ಬೂತ್​ಗಳ ಬಳಿ ಇರಲಿದ್ದು, ಅವುಗಳ ಮೂಲಕ ಸೋಂಕಿತರನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತದೆ.
ಇದನ್ನೂ ಓದಿ:ಗಗನಯಾನ್​: ರಷ್ಯಾದಲ್ಲಿ ಭಾರತದ ಮೊದಲ ಗಗನಯಾತ್ರಿಗಳ ತರಬೇತಿ ಸಂಪೂರ್ಣ
ಕಾರ್ಯಕ್ರಮ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದ್ದು, ದೋ ಗಜ್​ ಕೀ ಅಂತರ್ ನಿಯಮ ಪಾಲಿಸಲಾಗುತ್ತದೆ. ಇದು ಆಹ್ವಾನಿತರು ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗುವವರಿಗೆ ಅನ್ವಯ. ಈ ಸಲ ಶಾಲಾ ಮಕ್ಕಳ ಬದಲಾಗಿ ಎನ್​ಸಿಸಿ ಕೆಡೆಟ್​ಗಳನ್ನು ಆಹ್ವಾನಿಸಲಾಗಿದ್ದು ಅವರು ಗ್ಯಾನಪಥದಲ್ಲಿ ಆಸೀನರಾಗಲಿದ್ದಾರೆ. ನಿಯಮಾನುಸಾರ ಕಾರ್ಯಕ್ರಮ ಸ್ಥಳದಲ್ಲಿದ್ದ ಆಹ್ವಾನಿತರಿಗೆ ಏನಾದರೂ ಆಗತ್ಯವಿದ್ದರೆ ಆಹ್ವಾನ ಪತ್ರಿಕೆಯ ಜತೆಗೆ ಇರುವ ರಿಕ್ವೆಸ್ಟ್ ಕಾರ್ಡ್​ ಪ್ರದರ್ಶಿಸಬೇಕು. ಕೂಡಲೇ ಅಲ್ಲಿದ್ದ ಆತಿಥೇಯರು ಅದಕ್ಕೆ ಸ್ಪಂದಿಸಿ ನೆರವು ಒದಗಿಸುತ್ತಾರೆ. (ಏಜೆನ್ಸೀಸ್)
ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
