ತಮಿಳುನಾಡು:ಲೋಕಸಭೆ ಚುನಾವಣೆ ಪ್ರಚಾರ ಜೋರಾಗಿದೆ.  ಜನರಿಗೆ ಸಾಲು ಸಾಲು ಭರವಸೆಗಳನ್ನು ನೀಡಿ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಭ್ಯರ್ಥಿ ಮಾತ್ರ ವಿಶೇಷ ಸೇವೆ ಮಾಡಿ ಮತದಾರರ ಗಮನ ಸೆಳೆದು ವೋಟ್​​ ಕೇಳುತ್ತಿದ್ದಾರೆ.
ತಮಿಳುನಾಡಿನಲ್ಲಿ ಅಭ್ಯರ್ಥಿಯೊಬ್ಬರು ಜನರ ಮತಗಳನ್ನು ಸೆಳೆಯಲು ಕ್ಷೌರಿಕನಾಗಿ ಬದಲಾಗಿದ್ದಾರೆ. ಜನರಿಗೆ ಕ್ಷೌರ ಮಾಡುವ ಮೂಲಕ ಮತಯಾಚನೆ ನಡೆಸುತ್ತಿದ್ದಾರೆ. ಈ ವಿಡಿಯೊ ವೈರಲ್‌ ಆಗಿದೆ.
#WATCH| Rameswaram, Tamil Nadu: Parirajan, Ramanathapuram Independent candidate becomes a barber for a day during the election campaign.#LokSabhaElections2024pic.twitter.com/BFe19VkTpU
— ANI (@ANI)April 4, 2024

ತಮಿಳುನಾಡಿನ ರಾಮನಾಥಪುರಂ ಲೋಕಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪರಿರಾಜನ್‌ ಎಂಬುವರು ಚುನಾವಣೆ ಪ್ರಚಾರದ ಭಾಗವಾಗಿ ಒಂದು ದಿನದ ಮಟ್ಟಿಗೆ ಕ್ಷೌರಿಕನ ಕೆಲಸ ಮಾಡಿದ್ದಾರೆ. ಜನರಿಗೆ ಕಟಿಂಗ್‌ ಮಾಡಿ, ಗಡ್ಡ ಬೋಳಿಸಿ, ಕೈ ಮುಗಿದು ಮತ ಕೇಳುತ್ತಿದ್ದಾರೆ. ಇದು ಸುತ್ತಮುತ್ತಲಿನ ಭಾಗದ ಜನರ ಗಮನವನ್ನೂ ಸೆಳೆದಿದೆ.
ಒಂದಷ್ಟು ಜನ ಹೊಗಳಿದ್ದಾರೆ. ಚುನಾವಣೆ ವೇಳೆ ಜನರ ಗಡ್ಡ ಬೋಳಿಸುತ್ತಾರೆ, ಈತ ಮತಗಳಿಗಾಗಿ ಜನರ ಎದುರು ಡ್ರಾಮಾ ಮಾಡುತ್ತಿದ್ದಾನೆ ಎಂದು ನೆಟ್ಟಿಗರು ಕಾಮೆಂಟ್​​ ಮಾಡುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
