ಹೈದರಾಬಾದ್​:ಫೇಸ್​ಬುಕ್​ ಸ್ನೇಹಿತನೊಂದಿಗೆ ವಿವಾಹಿತ ಮಹಿಳೆ ಪರಾರಿಯಾಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.ಇದನ್ನೂ ಓದಿ:ಜಿಲೆಟಿನ್ ಬಳಸಿ ಬ್ಲಾಸ್ಟಿಂಗ್: ಬಿಜೆಪಿ ಶಾಸಕ ಸೇರಿ ನಾಲ್ವರ ವಿರುದ್ಧ ಎಫ್​​​ಐಆರ್ವಿವಾಹಿತ ಮಹಿಳೆಯನ್ನು ಸಲೋನಿ ಎಂದು ಗುರುತಿಸಲಾಗಿದ್ದು, ಹೈದರಾಬಾದ್​​ ನಿವಾಸಿಯಾಗಿದ್ದಾಳೆ. ಕಾಸ್ಮೆಟಿಕ್​ ವ್ಯಾಪಾರಿಯಾಗಿರುವ ಸಂಜಯ್ ಎಂಬಾತ ನಾಲ್ಕು ವರ್ಷಗಳ ಹಿಂದೆ ಮಧ್ಯಪ್ರದೇಶದ ಇಂದೋರ್​ದ ಸಲೋನಿ ಜೈನ್ ಎಂಬಾಕೆಯೊಂದಿಗೆ ವಿವಾಹವಾಗಿದ್ದು, ಈ ದಂಪತಿಗಳಿಗೆ ಎರಡು ವರ್ಷದ ಮಗ ಮತ್ತು ಆರು ತಿಂಗಳ ಹೆಣ್ಣು ಮಗುವಿದೆ.ಸುಮಾರು ಒಂದು ವರ್ಷದ ಹಿಂದೆ ಸಲೋನಿಯು ಇಂದೋರ್‌ನ ರೆಹಿತ್ ಜರ್ಮಾ ಎಂಬ ಯುವನೊಂದಿಗೆ ಫೇಸ್‌ಬುಕ್‌ ಮೂಲಕ ಸ್ನೇಹ ಬೆಳೆಸಿದ್ದು, ಇವರಿಬ್ಬರ ನಡುವೆ ಆಗಾಗ ಸಂಭಾಷಣೆ ನಡೆಯುತ್ತಿತ್ತು. ಇದನ್ನು ಆಕೆಯ ಪತಿ ಪತ್ತೆ ಹಚ್ಚಿದ್ದು, ಸಲೋನಿಯ ಪೋಷಕರಿಗೆ ತಿಳಿಸಿದ್ದಾನೆ. ಆಗ ಆಕೆಯ ತಂದೆ ಮೋಹನ್​ ಇಂದೋರ್‌ನ ಅನ್ನಪೂರ್ಣ ಪ್ರದೇಶದ ನಿವಾಸಿಯಾಗಿರುವ ರೋಹಿತ್​ ವಿಳಾಸವನ್ನು ಪತ್ತೆ ಹಚ್ಚಿ ಆತನ ಮನೆಗೆ ತೆರಳಿ ರೋಹಿತ್ ಬಗ್ಗೆ ವಿಚಾರಿಸಿದಾಗ ಅಲ್ಲಿದ್ದವರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.ಅಲ್ಲಿಂದ ಹೊರಟ ಮೋಹನ್ ಅನ್ನಪೂರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ಎಸಿಪಿ ಬಿಪಿಎಸ್ ಪರಿಹಾರ್ ಹಾಗೂ ದ್ವಾರಕಾಪುರಿ ಠಾಣೆಯಲ್ಲಿ ತನ್ನ ಜೀವಕ್ಕೆ ಅಪಾಯವಿದೆ ಎಂದು ದೂರಿದ್ದರು. ಇದಾದ ಬಳಿಕ ಸಲೋನಿ ಹಾಗೂ ರೋಹಿತ್​ ಸಂಭಾಷಣೆ ನಿರಂತರವಾಗಿ ನಡೆಯುತ್ತಲೇ ಇತ್ತು. ಈ ನಡುವೆ ಸಲೋನಿಯು ಇಂದೋರ್‌ಗೆ ಬಂದು ರೋಹಿತ್‌ನನ್ನೂ ಭೇಟಿಯಾಗಿದ್ದಳು.ಇದನ್ನೂ ಓದಿ:ಗನ್​ ತೋರಿಸಿ ಕಾರು ಕದ್ದೊಯ್ದ 8 ವರ್ಷದ ಬಾಲಕ…ಕೊನೆಗೆ 10 ದಿನಗಳ ಹಿಂದೆ ರೋಹಿತ್, ಹೈದರಾಬಾದ್​​ಗೆ ಬಂದಿದ್ದು ಅಂದಿನಿಂದ ಇಬ್ಬರು ನಾಪತ್ತೆಯಾಗಿದ್ದಾರೆ. ಹೆಂಡತಿ ಬಗ್ಗೆ ಸಂಬಂಧಿಕರು ಹಾಗೂ ಸ್ನೇಹಿತರನ್ನು ವಿಚಾರಿಸಿದ ಬಳಿಕ ಆಕೆಯ ಪತಿ ಪೊಲೀಸ್​ ಠಾಣೆಗೆ ತೆರಳಿ ರೋಹಿತ್​​ನೇ ತನ್ನ ಹೆಂಡತಿಯನ್ನು ಅಪಹರಿಸಿದ್ದಾನೆ ಎಂದು ದೂರು ನೀಡಿದ್ದಾನೆ. ಪೊಲೀಸರು ಈ ಕುರಿತು ತನಿಖೆ ಪ್ರಾರಂಭಿಸಿ, ರೋಹಿತ್​ ಮನೆಗೆ ತಲುಪಿದ್ದು ಅಲ್ಲಿಯೂ ಅವರಿಬ್ಬರು ಕಂಡಿಲ್ಲ. ಆದರೆ ಕಾಣೆಯಾದ ಯುವಕ ಮತ್ತು ಸಲೋನಿ ಇಬ್ಬರೂ ಇಂದೋರ್, ಭೋಪಾಲ್ ಮತ್ತು ಉಜ್ಜಯಿನಿ ಹೀಗೆ ನಿರಂತರವಾಗಿ ಸ್ಥಳಗಳನ್ನು ಬದಲಾಯಿಸುತ್ತಿದ್ದು, ಇವರ ಪತ್ತೆಗಾಗಿ ಅನ್ನಪೂರ್ಣ ಪೊಲೀಸರ ನೆರವಿನೊಂದಿಗೆ ಹೈದರಾಬಾದ್ ಪೊಲೀಸರು ಇಂದೋರ್‌ನಲ್ಲಿ ಮೊಕ್ಕಾಂ ಹೂಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 3 =
Remember me
