ನವದೆಹಲಿ:ಭಾರತೀಯ ವಾಯುಸೇನೆಯು ಇಂದು 88ನೇ ಸಂಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಉತ್ತರ ಪ್ರದೇಶದ ಘಾಜಿಯಬಾದ್​ನಲ್ಲಿರುವ ಹಿಂಡನ್​ ವಾಯುನೆಲೆಯಲ್ಲಿ ವಿಶೇಷ ಪರೇಡ್​ ನಡೆಯುತ್ತಿದ್ದು, ಭಾರತೀಯ ಯೋಧರು ತಮ್ಮ ಶಕ್ತಿ ಸಾಮರ್ಥ್ಯವನ್ನು ಪ್ರರ್ಶಿಸುತ್ತಿದ್ದಾರೆ. ಇಂದಿನ ಪ್ರಮುಖ ಆಕರ್ಷಣೆ ರಫೇಲ್ ಯುದ್ಧ ವಿಮಾನ​ ಆಗಿರಲಿದ್ದು, ರೋಮಾಂಚನಕಾರಿ ದೃಶ್ಯ ವೈಭವವನ್ನು ಮೇಲಿನ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​, ಸೇನಾ ಮುಖ್ಯಸ್ಥರಾದ ಜನರಲ್​ ಮನೋಜ್​ ಮುಕುಂದ್​ ನರಾವಣೆ ಮತ್ತು ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್​ ಕರಂಬಿರ್​ ಸಿಂಗ್​ ಅವರು ಭಾಗಿಯಾಗಿದ್ದಾರೆ. ಇದಕ್ಕೂ ಮುನ್ನ ವಾಯುಪಡೆಯ ಮುಖ್ಯಸ್ಥರಾದ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ವಾಯುಪಡೆ ದಿನದ ಮೆರವಣಿಗೆಯನ್ನು ಪರಿಶೀಲಿಸಿದರು.
ವಾಯುನೆಲೆಯ ಹಿನ್ನೆಲೆಅಂದಹಾಗೆ 1932ರ ಅಕ್ಟೋಬರ್ 8ರಂದು ಬ್ರಿಟಿಷ್ ಆಡಳಿತದಲ್ಲಿ ವಾಯುಸೇನೆಯನ್ನು ಸ್ಥಾಪಿಸಲಾಯಿತು. 1933ರ ಏಪ್ರಿಲ್​ನಲ್ಲಿ ಮೊದಲ ಸ್ಕಾ್ವಡ್ರನ್ ರೂಪುಗೊಂಡಿತು. ನಾಲ್ಕು ವೆಸ್ಟ್​ಲ್ಯಾಂಡ್ ವಾಪಿಟಿ ಬೈಪ್ಲೇನ್​ಗಳು ಹಾಗೂ ಐದು ಪೈಲಟ್​ಗಳೊಂದಿಗೆ ಅಂದು ಕಾರ್ಯಾಚರಣೆ ಆರಂಭಿಸಿತು. ಅಂದು ಬ್ರಿಟಿಷ್ ಸರ್ಕಾರವತಿಯಿಂದ ಆರಂಭವಾದ ಭಾರತೀಯ ವಾಯಪಡೆ ಇಂದು ವಿಶ್ವದಲ್ಲೇ ನಾಲ್ಕನೇ ಅತ್ಯುತ್ತಮ ವಾಯುಸೇನೆಯಾಗಿ ಹೆಸರು ಪಡೆದಿದೆ. 1.4 ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 1,700ಕ್ಕೂ ಅಧಿಕ ಏರ್​ಕ್ರಾಫ್ಟ್ ಗಳಿವೆ.
ನೆರೆ ದೇಶಗಳಾದ ಚೀನಾ, ಪಾಕಿಸ್ತಾನದೊಂದಿಗೆ ನಾಲ್ಕು ಪ್ರಮುಖ ಯುದ್ಧಗಳು, ರಕ್ಷಣಾ ಕಾರ್ಯಾಚರಣೆಗಳಲ್ಲಿ ವಾಯಪಡೆ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ರಾಷ್ಟ್ರಪತಿ ಐಎಎಫ್​ನ ಸುಪ್ರೀಂ ಕಮಾಂಡರ್ ಆಗಿದ್ದಾರೆ. ಚೀಫ್ ಆಫ್ ಏರ್ ಸ್ಟಾಫ್, ಏರ್ ಚೀಫ್ ಮಾರ್ಷಲ್ ವಾಯುಸೇನೆಯ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಐದು ಕಾರ್ಯಕಾರಿ ಕಮಾಂಡ್​ಗಳು ಮತ್ತು ಎರಡು ಕ್ರಿಯಾತ್ಮಕ ಕಮಾಂಡ್ ಇದೆ. ರಷ್ಯಾ, ಫ್ರಾನ್ಸ್, ಬಾಂಗ್ಲಾದೇಶ, ಜಪಾನ್ ಸೇರಿ 20ಕ್ಕೂ ಹೆಚ್ಚು ದೇಶಗಳೊಂದಿಗೆ ರಕ್ಷಣಾ ಸಹಕಾರ ಒಪ್ಪಂದ ಮಾಡಿಕೊಳ್ಳಲಾಗಿದೆ.
2020ರ ವಿಶೇಷತೆಪ್ರತಿ ವರ್ಷದಂತೆ ಈ ಅಕ್ಟೋಬರ್ 8ರಂದು ಗಾಜಿಯಾಬಾದ್​ನ ಹಿಂಡನ್ ವಾಯುನೆಲೆಯಲ್ಲಿ ಭಾರತೀಯ ವಾಯುಸೇನೆ ದಿನಾಚರಣೆ ನಡೆಯುತ್ತಿದೆ. ಈ ವರ್ಷ ರಫೇಲ್ ಯುದ್ಧ ವಿಮಾನಗಳು ಪರೇಡ್​ನ ಮುಖ್ಯ ಆಕರ್ಷಣೆಯಾಗಿದೆ. ಸುಕೋಯ್, ತೇಜಸ್, ಅಪಾಚೆ, ಮಿಗ್ ಸೇರಿ ಅನೇಕ ಯುದ್ಧ ವಿಮಾನಗಳು ಶಕ್ತಿ ಪ್ರದರ್ಶಿಸುತ್ತಿವೆ.  ವಿಶೇಷ ಹೆಲಿಕಾಫ್ಟರ್​ಗಳು ಸಾಹಸ ಪ್ರದರ್ಶಿಸುತ್ತಿವೆ. ಒಟ್ಟಾರೆ 56 ಏರ್​ಕ್ರಾಫ್ಟ್​ಗಳು, 19 ಫೈಟರ್ ಜೆಟ್​ಗಳು, 19 ಹೆಲಿಕಾಫ್ಟರ್​ಗಳು ಈ ವರ್ಷದ ಪರೇಡ್​ನಲ್ಲಿ ಭಾಗಿಯಾಗಿವೆ.
ಇಂದು ಭಾರತೀಯ ವಾಯುಸೇನಾ ದಿನ: ಈ ಬಾರಿಯ ಪರೇಡ್​ನ ಮುಖ್ಯ ಆಕರ್ಷಣೆ ರಫೇಲ್​​

Sign in to your account
Please enter an answer in digits:four × 5 =
Remember me
