ನವದೆಹಲಿ:ಮಹಾಮರಿ ಕರೊನಾ ವೈರಸ್​ನಿಂದ ಕಂಗೆಟ್ಟಿರುವ ಭಾರತವು ಈಗಾಗಲೇ ಆರ್ಥಿಕ ಚೇತರಿಕೆಯ ಹಸಿರು ಚಿಗುರನ್ನು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್​ ಮೂಲಕ ಇಂಡಿಯಾ ಗ್ಲೋಬಲ್ ವೀಕ್-2020 ಕಾರ್ಯಕ್ರಮ ಉದ್ಘಾಟನಾ ಭಾಷಣ ಮಾಡಿ, ಭಾರತದ ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಾಧ್ಯತೆಗಳು ಹಾಗೂ ಅವಕಾಶಗಳಿವೆ. ಕೃಷಿಯಲ್ಲಿನ ನಮ್ಮ ಸುಧಾರಣೆಯು ಸಂಗ್ರಹಣೆ ಮತ್ತು ಲಾಜಿಸ್ಟಿಕ್ಸ್​ನಲ್ಲಿ ಹೂಡಿಕೆ ಮಾಡಲು ಆಕರ್ಷಕ ಹೂಡಿಕೆ ಅವಕಾಶವನ್ನು ಒದಗಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಬಿಜೆಪಿ ಮುಖಂಡನ ಹತ್ಯೆ; ತನಿಖೆ ಮೊದಲ ಹಂತದಲ್ಲಿ 8 ಮಂದಿ ಬಂಧನ
ಭಾರತವು ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಒಂದಾಗಿದೆ. ಬಂಡವಾಳ ಹೂಡಲು ಜಗತ್ತಿನ ಎಲ್ಲ ಕಂಪನಿಗಳಿಗೂ ನಾವು ಕೆಂಪು ಹಾಸಿನ ಸ್ವಾಗತ ನೀಡಿದ್ದೇವೆ. ಇಂತಹ ಅವಕಾಶ ಇರುವುದು ಕೆಲವೇ ದೇಶಗಳಲ್ಲಿ, ಅವುಗಳಲ್ಲಿ ಭಾರತವು ಸಹ ಒಂದಾಗಿದೆ ಎಂದರು.
ಇದೇ ವೇಳೆ ಕರೊನಾ ವೈರಸ್​ ವಿಚಾರವಾಗಿ ಮಾತನಾಡಿ, ಭಾರತದ ಔಷಧಿಯ ಉದ್ಯಮ ಕೇವಲ ಭಾರತಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿನ ಆಸ್ತಿ ಎಂಬುದನ್ನು ಮಹಾಮಾರಿ ಕರೊನಾ ಪ್ರದರ್ಶಿಸಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಔಷಧಿಗಳ ಬೆಲೆಯನ್ನು ಕಡಿಮೆ ಮಾಡುವಲ್ಲಿ ಭಾರತವು ಪ್ರಮುಖ ಪಾತ್ರ ವಹಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆತ್ಮನಿರ್ಭರ ಭಾರತ ಎಂಬುದು ಸ್ವಯಂ ಒಳಗೊಂಡಿರುವ ಅಥವಾ ಜಗತ್ತಿಗೆ ಮುಕ್ತವಾಗಿರದೇ ಇರುವುದು ಎಂದರ್ಥವಲ್ಲ. ಇದು ಸ್ವಾವಲಂಬಿ ಮತ್ತು ಸ್ವಯಂ-ಉತ್ಪಾದನೆಯಷ್ಟೇ. ಜಾಗತಿಕ ಒಳಿತಿಗಾಗಿ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಭಾರತವು ಏನು ಬೇಕಾದರೂ ಮಾಡಲು ಸಿದ್ಧವಾಗಿದೆ. ಇದು ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆಯ ಭಾರತವಾಗಿದೆ ಎಂದರು.
ಇದನ್ನೂ ಓದಿ:VIDEO| ರಸ್ತೆ ಅಗಲೀಕರಣಕ್ಕೆ ಅಡ್ಡಿಪಡಿಸಿದಲ್ಲದೇ ಜೆಸಿಬಿ ಚಾಲಕನ ಮೇಲೆ ಹಲ್ಲೆ ಮಾಡಿದ ಮಾಜಿ ಶಾಸಕ
ಚೀನಾ ಕಳ್ಳಾಟವನ್ನು ಜಗತ್ತಿಗೆ ಸಾರಿದ ಕೆನಡಾ; ಒತ್ತೆಯಾಳು ರಾಯಭಾರಕ್ಕೆ ಮಣಿಯಲ್ಲ ಎಂದ ಪ್ರಧಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 3 =
Remember me
