ನವದೆಹಲಿ:ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳು ಭಾನುವಾರ ಮಾತುಕತೆ ನಡೆಸಿದ ಬಳಿಕ ಭಾರತ ಮತ್ತು ಚೀನಾದ ಸೇನಾಪಡೆಗಳು ಲಡಾಖ್​ನ ವಿವಾದಿತ ಪ್ರದೇಶದಿಂದ 2 ಕಿ.ಮೀ.ನಷ್ಟು ಹಿಂದಕ್ಕೆ ಸರಿದಿವೆ. ಗಸ್ತು ಪಾಯಿಂಟ್​ 15 ಮತ್ತು ಹಾಟ್​ಸ್ಪ್ರಿಂಗ್ಸ್​ನಲ್ಲಿನ ಸೇನೆ ಹಿಂದೆಗೆತ ಪ್ರಕ್ರಿಯೆ ಪೂರ್ಣಗೊಂಡಿದೆ. ಗೋಗ್ರಾದಲ್ಲಿನ ಗಸ್ತು ಪಾಯಿಂಟ್​ 17ಎ ಬಳಿಯಿಂದ 2 ಕಿ.ಮೀ. ಹಿಂದಕ್ಕೆ ಸರಿಯುವ ಪ್ರಕ್ರಿಯೆ ಗುರುವಾರದಂದು ನಡೆಯಲಿದೆ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.
ಪ್ಯಾಂಗಾಂಗ್​ ಸರೋವರದ ಫಿಂಗರ್​ 4 ಪ್ರದೇಶದಲ್ಲಿ ಚೀನಿ ಯೋಧರ ಚಲನವಲನ ಕಂಡುಬಂದಿದೆ. ಅಲ್ಲಿನ ಟೆಂಟ್​ಗಳು ಮತ್ತು ವಾಹನಗಳನ್ನು ತೆರವುಗೊಳಿಸಲಾಗಿದೆ. ಆದರೆ ಏಣುಗಳಲ್ಲಿ ಇನ್ನೂ ಟೆಂಟ್​ಗಳು ಹಾಗೆಯೇ ಇದ್ದು ಅವುಗಳಲ್ಲಿ ಯೋಧರು ಇದ್ದಾರೆ ಎಂದು ಮಾಹಿತಿ ನೀಡಿವೆ.
ಇದನ್ನೂ ಓದಿ:ಆಂಬ್ಯುಲೆನ್ಸ್‌ನಲ್ಲಿ ಶಾಸಕಿಯ ಚೆಲ್ಲಾಟ- ರೋಗಿಗಳಿಗೆ ಪ್ರಾಣ ಸಂಕಟ!
ಅಂದಾಜು ನಾಲ್ಕು ದಶಕಗಳ ಬಳಿಕ ಭಾರತ ಮತ್ತು ಚೀನಾ ಯೋಧರ ನಡುವೆ ಉಂಟಾದ ರಕ್ತಸಿಕ್ತ ಘರ್ಷಣೆ ನಡೆದ ಗಲ್ವಾನ್​ ಕಣಿವೆ ಪ್ರದೇಶದಿಂದ ಉಭಯ ಸೇನೆಗಳು ಮಂಗಳವಾರವೇ ಕಾಲ್ತೆಗೆದಿದ್ದವು. ಉಪಗ್ರಹ ಚಿತ್ರಗಳು ಕೂಡ ಇದನ್ನು ಖಚಿತಪಡಿಸಿದ್ದವು.
ಇದೀಗ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು ನಿಖರವಾಗಿ ವಾಸ್ತವ ಗಡಿರೇಖೆಯ ತಮ್ಮ ಭಾಗದ ಕಡೆಯಲ್ಲಿ ನೆಲೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ನಕಲಿ ಇನ್ಸ್ಟಾಗ್ರಾಂ ಖಾತೆಯ ಮೂಲಕ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆನ್​ಲೈನ್ ಪೀಡಕನಿಗಾಯ್ತು ತಕ್ಕ ಶಾಸ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
