ನವದೆಹಲಿ:ಲಡಾಖ್​ನ ಪೂರ್ವ ಭಾಗದ ನಾಲ್ಕು ಪ್ರದೇಶಗಳಲ್ಲಿ ಪರಸ್ಪರ ಬಿರುಗಣ್ಣು ಬಿಟ್ಟುಕೊಂಡು ಕೂತಿರುವ ಭಾರತ ಮತ್ತು ಚೀನಾದ ಸೇನೆಯನ್ನು ಹಿಂತೆಗೆಯಬೇಕು ಎಂಬ ವಿಷಯವಾಗಿ ಭಾರತ ಮತ್ತು ಚೀನಾಗಳ ನಡುವೆ ಒಮ್ಮತಾಭಿಪ್ರಾಯ ವ್ಯಕ್ತವಾಗಿದೆ.
ಭಾನುವಾರ ನಡೆದ ಭಾರತ ಮತ್ತು ಚೀನಾದ ಕೋರ್​ ಕಮಾಂಡರ್​ ಮಟ್ಟದ ಸಭೆಯಲ್ಲಿ ಇಂಥ ಒಮ್ಮತಾಭಿಪ್ರಾಯ ಮೂಡಿದ್ದಾಗಿ ಭಾರತೀಯ ಸೇನಾಪಡೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಟಿಬೆಟ್​ನಲ್ಲಿ ನದಿ ಹರಿವಿನ ದಿಕ್ಕನ್ನೇ ಬದಲಿಸಿರುವ ಚೀನಾ, ನೇಪಾಳ ಬಹುತೇಕ ಭಾಗ ಕಬಳಿಕೆ
ಇದೀಗ ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ನಿಯೋಜಿಸಿರುವ ಸೇನಾಪಡೆಯನ್ನು ಹಿಂಪಡೆಯುವ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ಮಾತುಕತೆಗಳು ಮುಂದುವರಿಯಲಿವೆ ಎಂದು ಹೇಳಿವೆ.
ಮಾತುಕತೆ ಅತ್ಯಂತ ಸೌಹಾರ್ದಯುತವಾಗಿ, ಸಕಾರಾತ್ಮಕವಾಗಿ ಮತ್ತು ರಚನಾತ್ಮಕವಾಗಿ ನಡೆದಿದ್ದಾಗಿ ತಿಳಿಸಿವೆ.
ಇದೇ ವೇಳೆ, 14 ಕೋರ್​ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಜತೆಗೆ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳಲು ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ ಈಗಾಗಲೆ ಲಡಾಖ್​ಗೆ ತೆರಳಿದ್ದಾರೆ.
ಗಲ್ವಾನ್ ಕಣಿವೆ ಸಂಘರ್ಷ: ಅಮೆರಿಕ ಗುಪ್ತಚರ ವರದಿ ಬಿಚ್ಚಿಟ್ಟ ರಹಸ್ಯವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
