ನವದೆಹಲಿ:ಭಾರತ ಮತ್ತು ಅಮೆರಿಕ ಇಂದು (ಫೆ.25) 3 ಬಿಲಿಯನ್​ ಡಾಲರ್​ಗೂ ಹೆಚ್ಚು ಮೌಲ್ಯದ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ಜಂಟಿ ಸುದ್ದಿಗೋಷ್ಠಿ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಿಸಿದರು.ಹಾಗೇ ಎರಡೂ ದೇಶಗಳು ಜಾಗತಿಕ ಮಟ್ಟದಲ್ಲಿ ತಮ್ಮ ಪಾಲುದಾರಿಕೆಯನ್ನು ಅಭಿವೃದ್ಧಿಗೊಳಿಸಲು ನಿರ್ಧರಿಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಮೆರಿಕ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ಕಾರ್ಯತಂತ್ರ ಪಾಲುದಾರಿಕೆಯನ್ನು ಈ ರಕ್ಷಣಾ ಒಪ್ಪಂದ ಪ್ರತಿಬಿಂಬಿಸುತ್ತದೆ. 3 ಬಿಲಿಯನ್​ ಯುಎಸ್​ ಡಾಲರ್​ಗಳ ರಕ್ಷಣಾ ಒಪ್ಪಂದದ ಅನ್ವಯ ಭಾರತ ಯುಎಸ್​ನಿಂದ 2.6 ಬಿಲಿಯನ್​ ಡಾಲರ್​ಗಳ 24 ಎಂಎಚ್-60​ ರೋಮಿಯೋ ಹೆಲಿಕಾಪ್ಟರ್​ಗಳನ್ನು ಖರೀದಿಸಲಿದೆ.
ಹಾಗೇ 800 ಮಿಲಿಯನ್​ ಡಾಲರ್​ ಮೌಲ್ಯದ ಆರು ಎಚ್​-64ಇ (AH-64E) ಅಪಾಚೆ ಹೆಲಿಕಾಪ್ಟರ್​ಗಳನ್ನು ಪಡೆಯುವ ಒಪ್ಪಂದಕ್ಕೂ ಇಂದು ಸಹಿ ಹಾಕಲಾಗಿದೆ ಎಂದು ಮೋದಿ ತಿಳಿಸಿದರು.
ಭಾರತ ಹಾಗೂ ಅಮೆರಿಕ ಸಮಗ್ರ ಮುಕ್ತ ವ್ಯಾಪಾರದ ಒಪ್ಪಂದ ಮಾಡಿಕೊಳ್ಳುವತ್ತ ಚಿಂತನೆ ನಡೆಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹೇಳಿದರು.
ಎರಡೂ ದೇಶಗಳ ನಡುವಿನ ಸಂಬಂಧ ಈಗಿನಷ್ಟು ಉತ್ತಮವಾಗಿ ಯಾವತ್ತೂ ಇರಲಿಲ್ಲ. ಎರಡೂ ದೇಶಕ್ಕೆ ಲಾಭವಾಗುವಂತಹ ಒಪ್ಪಂದಗಳನ್ನು ಮಾಡಿಕೊಳ್ಳುವ ಆಶಯಹೊಂದಿದ್ದೇನೆ ಎಂದು ತಿಳಿಸಿದರು. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
