ನವದೆಹಲಿ:ಪೂರ್ವ ಲಡಾಖ್​ನ ಗಲ್ವಾನ್​ ಕಣಿವೆಯಲ್ಲಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು ಅತಿಕ್ರಮಿಸಿ ಸಂರ್ಷಕ್ಕೆ ಇಳಿದ ಪರಿಣಾಮ ಭಾರತದ 20 ಯೋಧರು ಹುತಾತ್ಮರಾಗಿ ಜೂ.15ಕ್ಕೆ ಒಂದು ವರ್ಷ ಪೂರ್ಣವಾಗಿದೆ. ಹುತಾತ್ಮ ಯೋಧರಿಗೆ ದೇಶ ಗೌರವ ಸಲ್ಲಿಸಿದೆ. ಇದೇ ವೇಳೆ ಭಾರತೀಯ ಸೇನೆ ಈ ಭಾಗದಲ್ಲಿ ಸೇನಾ ಮೂಲಸೌಕರ್ಯ ಹೆಚ್ಚಿಸಿಕೊಂಡು, ಸೇನಾ ನಿಯೋಜನೆಯನ್ನು ಬಲಗೊಳಿಸಿದೆ.
ಏಪ್ರಿಲ್​ 9ರಂದು ಭಾರತ ಮತ್ತು ಚೀನಾದ ಉನ್ನತ ಸೇನಾ ಕಮಾಂಡರ್​ಗಳ ನಡುವೆ ನಡೆದ 11ನೇ ಸುತ್ತಿನ ಮಾತುಕತೆ ವೇಳೆ ನಾಲ್ಕು ವಿವಾದಿತ ಸ್ಥಾನಗಳಿಂದ ಹಿಂದೆ ಸರಿಯುವ ಅಂಶ ಪ್ರಸ್ತಾಪವಾಗಿತ್ತು. ಆದರೆ, ಹಾಟ್​ ಸಿಂಗ್ಸ್​ ಮತ್ತು ಗೋಗ್ರಾ ಪೋಸ್ಟ್​ನಿಂದ ಹಿಂದೆ ಸರಿಯಲು ಚೀನಾ ಒಪ್ಪಿಕೊಂಡಿಲ್ಲ. ಹಾಟ್​ ಸಿಂಗ್ಸ್​ ಸಮೀಪದ ಪ್ಯಾಟ್ರೋಲಿಂಗ್​ ಪಾಯಿಂಟ್​ 15 (ಪಿಪಿ15) ಮತ್ತು ಗೋಗ್ರಾ ಪೋಸ್ಟ್​ ಸಮೀಪದ ಪ್ಯಾಟ್ರೋಲಿಂಗ್​ ಪಾಯಿಂಟ್​ 17 (ಪಿಪಿ17ಎ) ಸದ್ಯ ಚೀನಾದ ಹಿಡಿತದಲ್ಲಿದೆ.
ಕಳೆದ ವರ್ಷ ಏನಾಗಿತ್ತು?ಕಳೆದ ವರ್ಷ ಮೇ ತಿಂಗಳಲ್ಲಿ ಚೀನಾ ತನ್ನ ಸೇನೆಯನ್ನು ವಾರ್ಷಿಕ ತಾಲೀಮಿನ ವೇಳೆ ಪಿಪಿ 15, ಪಿಪಿ 17ಎ ಜತೆಗೆ ಗಲ್ವಾನ್​ನ ಪಿಪಿ14, ಪ್ಯಾಂಗಾಂಗ್​ ತ್ಸೋ ಸಮೀಪದ ಪಿಪಿ 17 (ಪಿಪಿ 17ಎಗೆ ಸಮೀಪದ ಪೋಸ್ಟ್​) ಎಂಬ ನಾಲ್ಕು ಪೋಸ್ಟ್​ನಲ್ಲಿ ಭಾರತೀಯ ಸೇನೆ ಜತೆಗೆ ಮುಖಾಮುಖಿ ಸಂರ್ಷಕ್ಕೆ ಇಳಿದಿತ್ತು. ಜೂನ್​ 20ರಂದು ಗಲ್ವಾನ್​ ಕಣಿವೆ ಸಮೀಪ ಪರಸ್ಪರ ಹೊಡೆದಾಟ ನಡೆದ ಕಾರಣ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು.
ಒಂದು ವರ್ಷದಲ್ಲಿ ಭಾರತದ ಭಾಗದಲ್ಲಾದ ಬದಲಾವಣೆ
ಗಲ್ವಾನ್​ ಸಂರ್ಷದಲ್ಲಿ ಹತಾತ್ಮರಾದ ಕರ್ನಲ್​ ಸಂತೋಷ್​ ಬಾಬು ಪುತ್ಥಳಿ ತೆಲಂಗಾಣದ ಸೂರ್ಯಪೇಟ್​ಯಲ್ಲಿ ಮಂಗಳವಾರಅನಾವರಣ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
