ನವದೆಹಲಿ:ವಾರ್ಷಿಕ ಆಧಾರದ ಮೇಲೆ ಮಾಹಿತಿ ವಿನಿಮಯದ ವ್ಯವಸ್ಥೆ ಅಡಿಯಲ್ಲಿ ಭಾರತವು ತನ್ನ ನಾಗರಿಕರು ಮತ್ತು ಸಂಸ್ಥೆಗಳ, ಸ್ವಿಸ್ ಬ್ಯಾಂಕ್ ಖಾತೆಗಳ ಹೊಸ ವಿವರಗಳನ್ನು ಸ್ವಿಟ್ಜರ್ಲೆಂಡ್​ನಿಂದ ಸ್ವೀಕರಿಸಿದೆ. ಸ್ವಿಟ್ಜರ್ಲೆಂಡ್ 104 ದೇಶಗಳೊಂದಿಗೆ ಅಂದಾಜು 36 ಲಕ್ಷ ಹಣಕಾಸು ಖಾತೆಗಳ ವಿವರಗಳನ್ನು ಹಂಚಿ ಕೊಂಡಿದೆ. ಇದು ಸ್ವಿಟ್ಜರ್ಲೆಂಡ್ ಮತ್ತು ಭಾರತದ ನಡುವಿನ ಐದನೇ ವಾರ್ಷಿಕ ಮಾಹಿತಿ ವಿನಿಮಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾದ ಹೊಸ ದತ್ತಾಂಶವು ವ್ಯಕ್ತಿಗಳು, ಕಾರ್ಪೆರೇಟ್​ಗಳು ಮತ್ತು ಟ್ರಸ್ಟ್​ಗಳಿಗೆ ಸಂಬಂಧಿಸಿದ ನೂರಾರು ಹಣಕಾಸು ಖಾತೆಗಳ ಮಾಹಿತಿ ಒಳಗೊಂಡಿದೆ. ಇವುಗಳಲ್ಲಿ ಹೆಸರು, ವಿಳಾಸ, ವಾಸಿಸುವ ದೇಶ ಮತ್ತು ತೆರಿಗೆ ಗುರುತಿನ ಸಂಖ್ಯೆ ಸೇರಿದಂತೆ ಗುರುತು, ಖಾತೆ ಮತ್ತು ಹಣಕಾಸಿನ ಮಾಹಿತಿ ಇದೆ. ಕಳೆದ ತಿಂಗಳು ಈ ವಿನಿಮಯ ನಡೆದಿದ್ದು, ಮುಂದಿನ ಮಾಹಿತಿಯನ್ನು ಸ್ವಿಟ್ಜರ್ಲೆಂಡ್ ಸೆ. 2024ರಲ್ಲಿ ಹಂಚಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಿಸ್ ರಾಜಧಾನಿ ಬರ್ನ್​ನಲ್ಲಿ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್​ಟಿಐ) ಸೋಮವಾರ ನೀಡಿದ ಹೇಳಿಕೆಯ ಪ್ರಕಾರ, ಸ್ವಯಂಚಾಲಿತ ಮಾಹಿತಿ ವಿನಿಮಯದ ಜಾಗತಿಕ ಮಾನದಂಡದ ಚೌಕಟ್ಟಿನೊಳಗೆ ಹಣಕಾಸು ಖಾತೆಗಳ ವಿವರಗಳನ್ನು 104 ದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ. ಈ ವರ್ಷ ಕಝಾಕಿಸ್ತಾನ್, ಮಾಲ್ಡೀವ್ಸ್ ಮತ್ತು ಓಮನ್ ಅನ್ನು ಹಿಂದಿನ 101 ದೇಶಗಳ ಪಟ್ಟಿಗೆ ಸೇರಿಸಲಾಗಿದೆ. ಹಣಕಾಸು ಖಾತೆಗಳ ಸಂಖ್ಯೆ ಅಂದಾಜು ಎರಡು ಲಕ್ಷದಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.
ಮಾಹಿತಿಯ ಉಪಯೋಗ:ಈ ಮಾಹಿತಿಯಲ್ಲಿನ ವಿವರಗಳನ್ನು ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ಸೇರಿದಂತೆ ಇತರ ತಪ್ಪು ಕೃತ್ಯಗಳ ತನಿಖೆಗೆ ಬಳಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಯುದ್ಧಪೀಡಿತ ಇಸ್ರೇಲ್​ನಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸಿದ ಸರ್ಕಾರ: ಇಲ್ಲಿದೆ ಮಾಹಿತಿ

‘ಇಂಡಿಯಾ’ಗೇ ಗುಡ್​​ಬೈ ಹೇಳಿ ‘ಡಿಜಿಟಲ್ ಯುದ್ಧ’ಕ್ಕಿಳಿದ ಇಸ್ರೇಲಿಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 8 =
Remember me
