ನವದೆಹಲಿ:ತಾಪಮಾನ ಏರಿಕೆ ಕಾರಣ ಅಮೆರಿಕ, ಚೀನಾದಂಥ ದೇಶಗಳಲ್ಲೂ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು ವಿಶ್ವದಾದ್ಯಂತ ಆಹಾರ ಸರಬರಾಜು ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಜತೆಗೆ ಪ್ರಮುಖ ಅಕ್ಕಿ ರಫ್ತುದಾರ ದೇಶವಾದ ಭಾರತ ಬಾಸ್ಮತಿ ಹೊರತಾದ ಅಕ್ಕಿಯ ರಫ್ತ್ತ್ನು ನಿಷೇಧಿಸಿದೆ. ಇದರಿಂದ ಹಲವು ದೇಶಗಳಲ್ಲಿ ಅಕ್ಕಿ ಕೊರತೆ ಉಂಟಾಗಬಹುದು ಎಂದು ಹೇಳಲಾಗುತ್ತಿದೆ.
ಆಹಾರ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ ದೆಹಲಿಯಲ್ಲಿ ಚಿಲ್ಲರೆ ಅಕ್ಕಿ ಬೆಲೆ ಈ ವರ್ಷ ಅಂದಾಜು ಶೇ.15 ಏರಿಕೆ ಕಂಡಿದೆ. ರಾಷ್ಟ್ರವ್ಯಾಪಿ ಸರಾಸರಿ ಶೇ.9 ಹೆಚ್ಚಾಗಿದೆ. ಇದರಿಂದ ಅಕ್ಕಿ ರಫ್ತಿಗೆ ಭಾರತ ನಿಷೇಧ ಹೇರಿದೆ. 2022-23ರಲ್ಲಿ ಭಾರತದಿಂದ ಅಕ್ಕಿಯ ಒಟ್ಟು ರಫ್ತು ಪ್ರಮಾಣ 42.12 ಲಕ್ಷ ಟನ್ ಆಗಿತ್ತು. ಹಿಂದಿನ ವರ್ಷದಲ್ಲಿ ಇದರ ಪ್ರಮಾಣ 33.66 ಲಕ್ಷ ಟನ್ ಆಗಿತ್ತು. ಪ್ರಸಕ್ತ ವರ್ಷದ ಮೊದಲ ತ್ರೖೆಮಾಸಿಕದಲ್ಲಿ 15.54 ಲಕ್ಷ ಟನ್ ಅಕ್ಕಿ ರಫ್ತು ಮಾಡಲಾಗಿದೆ. ಬಾಸ್ಮತಿ ಹೊರತಾದ ಅಕ್ಕಿ ಪ್ರಮುಖವಾಗಿ ಥಾಯ್ಲೆಂಡ್, ಇಟಲಿ, ಸ್ಪೇನ್, ಶ್ರೀಲಂಕಾಗೆ ರಫ್ತಾಗುತ್ತದೆ. ಗಿರಣಿಯಲ್ಲಿ ಪಾಲಿಶ್ ಮಾಡಲಾದ ಅಕ್ಕಿಯ ರಫ್ತನ್ನೂ ನಿಷೇಧ ಮಾಡಲಾಗಿದೆ.
ಕಪ್ಪು ಸಮುದ್ರ ಮೂಲಕ ಯೂಕ್ರೇನ್ ಧಾನ್ಯವನ್ನು ಸುರಕ್ಷಿತವಾಗಿ ಸಾಗಣೆ ಮಾಡುವ ಒಪ್ಪಂದವನ್ನು ರಷ್ಯಾ ಇತ್ತೀಚೆಗೆ ರದ್ದು ಮಾಡಿದೆ. ಹಲವು ದೇಶಗಳಲ್ಲಿ ಎಲ್​ನಿನೊ ಹವಾಮಾನ ಪರಿಸ್ಥಿತಿ ಉಂಟಾಗಿದ್ದು, ಕೃಷಿಗೆ ಮತ್ತಷ್ಟು ಹಾನಿ ಉಂಟುಮಾಡುವ ಲಕ್ಷಣ ಇದೆ. ಈ ಎಲ್ಲ ಕಾರಣದಿಂದ ಜಾಗತಿಕ ಮಟ್ಟದಲ್ಲಿ ಆಹಾರ ಭದ್ರತೆಗೆ ಆತಂಕ ಎದುರಾಗಿದೆ. ಜತೆಗೆ ಬೆಲೆ ಏರಿಕೆ ಭೀತಿ ಕೂಡ ಇನ್ನಷ್ಟು ಹೆಚ್ಚಾಗಿದೆ. ಇದರಿಂದ ಹಣದುಬ್ಬರ ಸಮಸ್ಯೆ ದೀರ್ಘಕಾಲದವರೆಗೆ ಅಪಾಯ ಉಂಟುಮಾಡಲಿದೆ. ಜನಸಾಮಾನ್ಯರನ್ನು ಇದು ಮತ್ತಷ್ಟು ಸಮಸ್ಯೆಗೆ ದೂಡಲಿದೆ.
ರೈತರಿಗೆ ಹೊಸ ಸವಾಲು: ಏಷ್ಯಾ, ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ಕಂಡುಬರುತ್ತಿರುವ ತಾಪಮಾನ ಏರಿಕೆ ರೈತರಿಗೆ ಸವಾಲಾಗಿದೆ. ಮುಂದಿನ ದಿನಗಳಲ್ಲಿ ದೀರ್ಘಕಾಲದ ಬರ, ಭಾರಿ ಮಳೆ ಮತ್ತು ಪ್ರವಾಹ ಇನ್ನಿತರ ತೀವ್ರ ಹವಾಮಾನದ ಸ್ಥಿತಿಯನ್ನು ರೈತರು ಎದುರಿಸಬೇಕಾಗುತ್ತದೆ. ಇದೀಗ ದಕ್ಷಿಣ ಯುರೋಪ್​ನಲ್ಲಿ ಉಷ್ಣಾಂಶ ಭಾರಿ ಏರಿಕೆ ಕಂಡಿದೆ. ಹಸುಗಳು ಕಡಿಮೆ ಹಾಲು ಕೊಡುತ್ತಿವೆ. ಬರಗಾಲ ಸ್ಥಿತಿ ಇದ್ದು, ಧಾನ್ಯದ ಉತ್ಪಾದನೆ ಇಳಿಕೆ ಕಂಡಿದೆ. ಚೀನಾದಲ್ಲಿ ಭತ್ತದ ಇಳುವರಿ ಕುಸಿಯುತ್ತಿದೆ. ಆಮದುದಾರರು ದಾಸ್ತಾನು ಹೆಚ್ಚಿಸಿರುವ ಕಾರಣ ಏಷ್ಯಾದಲ್ಲಿ ಅಕ್ಕಿಯ ಬೆಲೆ ಎರಡು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ.
ಗೋಧಿ ಉತ್ಪಾದನೆ ಇಳಿಕೆ:ದಕ್ಷಿಣ ಯುರೋಪ್​ನಲ್ಲಿ ಹಣ್ಣು ಮತ್ತು ತರಕಾರಿಗಳ ಕೊರತೆ ಕಾಣಿಸಿಕೊಂಡಿದೆ. ಸಿಸಿಲಿಯಲ್ಲಿ ಟೊಮೆಟೊ ಬೆಳೆಗೆ ಕಪ್ಪು ಉಂಗುರ ರೋಗ ಕಾಣಿಸಿಕೊಂಡಿದೆ. ತಾಪಮಾನದಲ್ಲಿ ಹೆಚ್ಚಳ ಉಂಟಾದರೆ ಹಣ್ಣಾಗುವ ಪ್ರಕ್ರಿಯೆ ವೇಗಗೊಳ್ಳುತ್ತದೆ. ಹಣ್ಣು, ತರಕಾರಿಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪರಾಗಸ್ಪರ್ಶವೂ ನಿಧಾನವಾಗಿ ನಡೆಯುತ್ತದೆ. ಗೋಧಿಯಂಥ ಧಾನ್ಯಗಳ ಉತ್ಪಾದನೆಯು ಕಡಿಮೆಯಾಗಲಿದೆ.
ಸಾವಿರಾರು ವರ್ಷಗಳಿಂದ ನಿಧಾನವಾಗಿ ವಿಕಸನಗೊಂಡಿರುವ ಸಸ್ಯಗಳು ಭೂಮಿಯ ತಾಪಮಾನಕ್ಕೆ ಹೊಂದಿಕೊಂಡಿವೆ. ಈಗ ಬಿಸಿ ಹೆಚ್ಚುತ್ತಿದೆ. ಸಸ್ಯಗಳು ಹವಾಮಾನ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಕಷ್ಟ. ಇದರಿಂದ ಎಲ್ಲ ರೀತಿಯ ಬೆಳೆಗಳ ಇಳುವರಿ ಕಡಿಮೆಯಾಗುತ್ತಿದೆ.
| ಲೊರೆಂಜೊ ಬಜ್ಜಾನಾ, ಕೃಷಿ ವಿಜ್ಞಾನಿ
ಹಣದುಬ್ಬರ ವಿರುದ್ಧ ನಾವು ಹೋರಾಡುತ್ತಿದ್ದೇವೆ. ಹಣದುಬ್ಬರ ವೇಗ ಕಡಿಮೆಯಾಗುತ್ತಿದೆಯಾದರೂ, ಅಗತ್ಯ ವಸ್ತುಗಳ ಬೆಲೆಗಳು ಕಡಿಮೆಯಾಗುತ್ತಿಲ್ಲ.
| ಟಿಮ್ ಬೆಂಟನ್, ಲಂಡನ್​ನ ಆಹಾರ ಭದ್ರತಾ ತಜ್ಞ
ಅಮೆರಿಕದಲ್ಲಿ ಅಕ್ಕಿ ಖರೀದಿಗೆ ಮುಗಿಬಿದ್ದರು:ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಅಕ್ಕಿಯೇ ಪ್ರಮುಖ ಆಹಾರ. ಭಾರತ ಅಕ್ಕಿ ರಫ್ತು ನಿಷೇಧಿಸುತ್ತಿದ್ದಂತೆ ಬೆಲೆ ಏರಿಕೆ ಭೀತಿಯಲ್ಲಿ ಅಕ್ಕಿ ಶೇಖರಿಸಿಕೊಳ್ಳಲು ಜನರು ಸೂಪರ್ ಮಾರ್ಕೆಟ್​ಗಳಿಗೆ ಮುಗಿಬಿದ್ದಿದ್ದಾರೆ. ಹಲವು ಮಾಲ್​ಗಳ ಎದುರು ಭಾರತೀಯರು ಅಕ್ಕಿಗಾಗಿ ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ. ಈ ದೃಶ್ಯಗಳನ್ನು ಟ್ವಿಟರ್ ಸೇರಿ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿವೆ. ಬೇಡಿಕೆ ಹೆಚ್ಚುತ್ತಿರುವಂತೆಯೇ ವಿದೇಶಗಳಲ್ಲಿ ಅಕ್ಕಿ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ.
ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + 3 =
Remember me
