ನವದೆಹಲಿ:ಗೋಧಿ ರಫ್ತು ನಿಷೇಧ ಹೇರಿ ಭಾರತ ಸರ್ಕಾರವು ಆದೇಶಿಸಿದ್ದು, ಶುಕ್ರವಾರ ರಾತ್ರಿ ನೂತನ ಅಧಿಸೂಚನೆ ಹೊರಡಿಸಿದೆ. ಕೆಲವೇ ದಿನಗಳವರೆಗೆ ಗೋಧಿ ರಫ್ತು ನಿಷೇಧಿಸಲಾಗಿದೆ.
ಜಾಗತಿಕ ಆಹಾರದ ಕೊರತೆ ನೀಗಿಸಲು ವಿಶ್ವದಾದ್ಯಂತ ಗೋಧಿ ಪೂರೈಸುತ್ತಿದ್ದ ತನ್ನ ನೀತಿಯನ್ನು ದಿಢೀರ್ ಹಿಂತೆಗೆದುಕೊಂಡಿದೆ. ದೇಶದಲ್ಲಿ ಧಾನ್ಯಗಳ ಬೆಲೆ ಏರಿಕೆಯಿರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪ್ರಸ್ತುತ ದೇಶದಲ್ಲಿ ಆಹಾರ ಉತ್ಪಾದನೆಯಲ್ಲಿ ಭಾರೀ ಕುಸಿತ ಉಂಟಾಗಿದೆ. ಹೀಗಾಗಿ ದೇಶೀಯ ಪೂರೈಕೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಉಕ್ರೇನ್‌ ಮೇಲಿನ ರಷ್ಯಾ ಯುದ್ಧ ಸಾರಿದ ಬಳಿಕ ಗೋಧಿ ಪೂರೈಕೆಯಲ್ಲಿ ಕುಸಿತವುಂಟಾದ ಕಾರಣ, ಗೋಧಿ ಬೆಲೆಯಲ್ಲಿ ದಾಖಲೆ ಮಟ್ಟದ ಏರಿಕೆ ಕಂಡಿದೆ. ಸದ್ಯ ಭಾರತ ಗೋಧಿ ರಫ್ತು ನಿಷೇಧದಿಂದಾಗಿ ಜಾಗತಿಕ ಮಟ್ಟದಲ್ಲೂ ಆಹಾರ ಬೆಲೆಗಳ ಏರಿಕೆಯಾಗುವ ಸಂಭವವಿದೆ.
ಫೆಬ್ರವರಿಯಲ್ಲಿ 111ಮಿಲಿಯನ್​ ಟನ್​ ಗೋಧಿ ದಾಖಲೆ ಉತ್ಪಾದನೆಯಾಗಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಗೋಧಿ ರಫ್ತು ಮಾಡುವ ನಿರೀಕ್ಷೆ ಇತ್ತು. ಆದರೆ ಮಾರ್ಚ್​ ತಿಂಗಳ ನಂತರದಲ್ಲಿ ಅಂದಾಜು ಉತ್ಪಾದನೆಯನ್ನು ಕನಿಷ್ಠ ಶೇ.5.7ರಿಂದ 105 ಮಿಲಿಯನ್​ ಟನ್​ಗಳಷ್ಟು ಕಡಿತಗೊಳಿಸುವಂತೆ ಮಾಡಿತು.
ಸದ್ಯ ಮೊರಾಕ್ಕೋ, ಟ್ಯುನೀಶಿಯಾ, ಇಂಡೋನೇಶಿಯಾ, ಫಿಲಿಫೈನ್ಸ್​, ಥೈಲ್ಯಾಂಡ್​, ವಿಯೆಟ್ನಾಂ, ಟರ್ಕಿ, ಅಲ್ಜೀರಿಯಾ ಮತ್ತು ಲೆಬೆನಾನ್​ಗೆ ಮಾಡಲಾಗುತ್ತಿದ್ದ ರಫ್ತು ನೀತಿ ಮೇಲೆ ನಿಷೇಧ ಹೇರಲಾಗಿದೆ. 2022-23ರಲ್ಲಿ 10 ಮಿಲಿಯನ್​ ಟನ್​ ಗೋಧಿ ರಫ್ತು ಮಾಡುವ ಗುರಿ ಹೊಂದಲಾಗಿತ್ತು.(ಏಜೆನ್ಸೀಸ್​)
ಕರೀನಾ ಕಪೂರ್​ ಕುರಿತು ಈ ಹೇಳಿಕೆ ಕೊಟ್ಟು ಟ್ರೋಲ್​​ಗೊಳಗಾದ ಪಾಕ್​ ನಟಿ!

ಬೇಟೆಗಾರರನ್ನು ಹಿಡಿಯಲು ಹೋದ ಎಸ್​ಐ ಸೇರಿ ಮೂವರು ಪೊಲೀಸರು ಗುಂಡೇಟಿಗೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + seven =
Remember me
