ವಿಶ್ವಸಂಸ್ಥೆ:ಮಹತ್ವದ ಬೆಳವಣಿಗೆಯೊಂದರಲ್ಲಿ ವಿಶ್ವಸಂಸ್ಥೆಯ ಎಕನಾಮಿಕ್ ಆ್ಯಂಡ್ ಸೋಷಿಯಲ್ ಕೌನ್ಸಿಲ್​ (ECOSOC)ನ ಕಮಿಷನ್​ ಆನ್ ಸ್ಟೇಟಸ್ ಆಫ್ ವುಮೆನ್​ (CSW) ಸದಸ್ಯ ರಾಷ್ಟ್ರವಾಗಿ ಭಾರತ ಚುನಾಯಿತವಾಗಿದೆ. ಚುನಾವಣಾ ಕಣದಲ್ಲಿದ್ದ ಚೀನಾಕ್ಕೆ ಭಾರಿ ಮುಖಭಂಗವಾಗಿದೆ. ಭಾರತದ ಪ್ರತಿಷ್ಠಿತ ಆಯೋಗದ ಸದಸ್ಯತ್ವ ಗೆಲುವಿನ ವಿಚಾರವನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಈ ಗೆಲುವಿನೊಂದಿಗೆ ಭಾರತ ಸಿಎಸ್​ಡಬ್ಲ್ಯುನ ಸದಸ್ಯ ರಾಷ್ಟ್ರವಾಗಿ 2021ರಿಂದ 2025ರ ಅವಧಿಯಲ್ಲಿ ಕಾರ್ಯನಿರ್ವಹಿಸಲಿದೆ. ಭಾರತ, ಚೀನಾ ಮತ್ತು ಅಫ್ಘಾನಿಸ್ತಾನ ಈ ಮೂರು ರಾಷ್ಟ್ರಗಳು ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದವು. ಆಫ್ಘನ್ ಮತ್ತು ಭಾರತ ಗೆಲುವು ದಾಖಲಿಸಿದರೆ, ಚೀನಾಕ್ಕೆ ಒಟ್ಟು ಸದಸ್ಯ ಬಲ 54ರ ಅರ್ಧದಷ್ಟು ಮತಕ್ಕಿಂತ ಹೆಚ್ಚು ಮತ ಗಳಿಸುವುದು ಸಾಧ್ಯವಾಗಲಿಲ್ಲ.
ಇದನ್ನೂ ಓದಿ:ಏಕಕಾಲಕ್ಕೆ ಎರಡೂ ಕೈಯಲ್ಲಿ ಬರೆದು ವಿಶ್ವದಾಖಲೆ ನಿರ್ಮಿಸಿದ ಆದಿ ಸ್ವರೂಪಾ!
ಸಿಎಸ್​ಡಬ್ಲ್ಯು ಎಂಬುದು ಜಾಗತಿಕ ಮಟ್ಟದ ಅಂತರ್​ಸರ್ಕಾರೀಯ ಸಂಸ್ಥೆಯಾಗಿದ್ದು, ವಿಶೇಷವಾಗಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ಇದನ್ನು 1946ರ ಜೂನ್ 21ರಂದು ತೆಗೆದುಕೊಂಡ ನಿರ್ಣಯದ ಪ್ರಕಾರ ಸ್ಥಾಪಿಸಲಾಗಿದೆ. ಈ ಆಯೋಗದಲ್ಲಿ ವಿಶ್ವಸಂಸ್ಥೆಯ ECOSOCದ 45 ಸದಸ್ಯ ರಾಷ್ಟ್ರಗಳ ತಲಾ ಒಬ್ಬ ಪ್ರತಿನಿಧಿ ಇರುತ್ತಾನೆ. ಈ ಸದಸ್ಯತ್ವವನ್ನು ಭೌಗೋಳಿಕ ವ್ಯಾಪ್ತಿಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಇದರಂತೆ, ಆಫ್ರಿಕಾಕ್ಕೆ 13, ಏಷ್ಯಾಕ್ಕೆ 11, ಲ್ಯಾಟಿನ್ ಅಮೇರಿಕಾ ಮತ್ತು ಕೆರೆಬಿಯನ್​ಗೆ 9, ವೆಸ್ಟರ್ನ್ ಯುರೋಪ್​ ಮತ್ತು ಇತರೆ ರಾಜ್ಯಗಳಿಗೆ 8, ಪೂರ್ವ ಯುರೋಪ್​ಗೆ ನಾಲ್ಕು ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. (ಏಜೆನ್ಸೀಸ್)
India wins seat in prestigious#ECOSOCbody!
India elected Member of Commission on Status of Women#CSW. It’s a ringing endorsement of our commitment to promote gender equality and women’s empowerment in all our endeavours.
We thank member states for their support.@MEAIndiapic.twitter.com/C7cKrMxzOV
— Amb T S Tirumurti (@ambtstirumurti)September 14, 2020

ವಿಧಾನಪರಿಷತ್ ರದ್ದುಗೊಳಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಿದ ಆಂಧ್ರ – ಇದು ಜಗನ್ ರಾಜ’ಕಾರಣ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 5 =
Remember me
