ನವದೆಹಲಿ:ಏಳು ರಾಜ್ಯಗಳಾದ್ಯಂತ ಶನಿವಾರ ನಡೆದ 13 ವಿಧಾನಸಭಾ ಸ್ಥಾನಗಳ ಉಪಚುನಾವಣೆ ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗಿದ್ದು, ಇಂಡಿಯಾ ಒಕ್ಕೂಟ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆಡಳಿತರೂಢ ಬಿಜೆಪಿ ಪಕ್ಷ ಎರಡು ಕ್ಷೇತ್ರಗಳಲ್ಲಿ ಮತ್ತು ಪಕ್ಷೇತರ ಅಭ್ಯರ್ಥಿಯೊಬ್ಬರು ಒಂದು ಕ್ಷೇತ್ರದಲ್ಲಿ ಗೆದ್ದುಕೊಂಡಿದ್ದಾರೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಬಸ್: ಇಬ್ಬರು ಸಾವು, 25 ಮಂದಿಗೆ ಗಾಯ
ಪಶ್ಚಿಮ ಬಂಗಾಳ 4 , ಹಿಮಾಚಲ ಪ್ರದೇಶದಲ್ಲಿ 3, ಉತ್ತರಾಖಂಡದಲ್ಲಿ 2 ಮತ್ತು ಪಂಜಾಬ್, ಮಧ್ಯಪ್ರದೇಶ , ಬಿಹಾರ ಮತ್ತು ತಮಿಳುನಾಡಿನಲ್ಲಿ ತಲಾ ಒಂದೊಂದು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಈ ಪೈಕಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ), ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಡಿಎಂಕೆ ( ದ್ರಾವಿಡ ಮುನ್ನೇತ್ರ ಕಳಗಂ ) ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.

ಈ ಪೈಕಿ ಪಶ್ಚಿಮ ಬಂಗಾಳದ ನಾಲ್ಕು ಸ್ಥಾನಗಳು ಟಿಎಂಸಿ ಗೆದ್ದುಕೊಂಡಿದ್ದು , ಹಿಮಾಚಲ ಪ್ರದೇಶದ ಮೂರು ಸ್ಥಾನಗಳ ಪೈಕಿ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಅಲ್ಲದೆ ಉತ್ತರಾಖಂಡದ ಎರಡೂ ಸ್ಥಾನಗಳನ್ನು ಗೆದ್ದುಕೊಂಡಿದೆ. ಪಂಜಾಬ್‌ನ ಒಂದು ಕ್ಷೇತ್ರ ಎಎಪಿ ಪಾಲಾದರೆ, ತಮಿಳುನಾಡಿನ ಒಂದು ಕ್ಷೇತ್ರ ಡಿಎಂಕೆ ಜಯಭೇರಿ ಬಾರಿಸಿದೆ.
ಬಿಹಾರದ ರುಪೌಲಿ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಶಂಕರ್ ಸಿಂಗ್ ಅವರು ಜನತಾ ದಳ (ಯುನೈಟೆಡ್) ಅಭ್ಯರ್ಥಿ ಕಲಾಧರ್ ಮಂಡಲ್ ಅವರನ್ನು 8,246 ಮತಗಳ ಅಂತರದಿಂದ ಸೋಲಿಸಿದ್ದಾರೆ. ಬಿಜೆಪಿ ಮಧ್ಯಪ್ರದೇಶದ ಅಮರವಾರ ಕ್ಷೇತ್ರವನ್ನು ಸಹ ಗೆದ್ದುಕೊಂಡಿದೆ, ಅಲ್ಲಿ ಅದರ ಅಭ್ಯರ್ಥಿ ಕಮಲೇಶ್ ಪ್ರತಾಪ್ ಶಾ ಅವರು ಕಾಂಗ್ರೆಸ್ ಪಕ್ಷದ ಧೀರನ್ ಶಾ ಅವರನ್ನು 3,027 ಮತಗಳ ಅಂತರದಿಂದ ಸೋಲಿಸಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಪಾರುಪತ್ಯ:ತಮಿಳುನಾಡಿನಲ್ಲಿ, ಡಿಎಂಕೆ ಪಕ್ಷದ ಶಿವಷಣ್ಮುಗಂ ಎ ಎಂದು ಕರೆಯಲ್ಪಡುವ ಅಣ್ಣಿಯೂರ್ ಶಿವ ಅವರು ವಿಕ್ರವಾಂಡಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅವರು ಎನ್‌ಡಿಎ ಘಟಕದ ಪಟ್ಟಾಲಿ ಮಕ್ಕಳ್ ಕಚ್ಚಿಯ ಅಂಬುಮಣಿ ಸಿ ಅವರನ್ನು 67,757 ಮತಗಳ ಅಂತರದಿಂದ ಸೋಲಿಸಿದ್ದಾರೆ.
ದೇವೇಗೌಡರ ಕುಟುಂಬದಲ್ಲಿ ಉಳಿದವನು ನಿಖಿಲ್ ಅಂತಾ ಅರೆಸ್ಟ್ ಮಾಡೋಕೆ ಪ್ಲ್ಯಾನ್‌ ಮಾಡಿದ್ರು: ಕುಮಾರಸ್ವಾಮಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 − seven =
Remember me
