ಲಾಹೋರ್‌:2008ರ ನವೆಂಬರ್‌ 26ರಂದು ಮುಂಬೈನಲ್ಲಿ ನಡೆದ ಭೀಕರ ದಾಳಿಯ (26/11 ದಾಳಿ ಎಂದೇ ಪ್ರಸಿದ್ಧ) ಮಾಸ್ಟರ್‌ ಮೈಂಡ್‌ ಉಗ್ರ ಹಫೀಜ್ ಸಯೀದ್ ಪರವಾಗಿ ಕೋರ್ಟ್‌ಗಳಲ್ಲಿ ವಾದಿಸಿದ್ದ ವಕೀಲ ಅಬ್ದುಲ್ಲಾ ಖಾನ್ ಡೋಗರ್ ನಿನ್ನೆ ಸಂಜೆ ಪಾಕಿಸ್ತಾನದ ಲಾಹೋರ್‌ನಲ್ಲಿ ಮೃತಪಟ್ಟಿದ್ದಾರೆ.
ಇವು ಭಾರತ ಮೂಲದವರು. ಇವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಸಮಸ್ಯೆಯಿಂದ ಇವರು ಬಳಲುತ್ತಿದ್ದರು. ಪಾಕಿಸ್ತಾನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಇವರು ಉತ್ತರ ಪ್ರದೇಶದ ರಾಂಪುರದಲ್ಲಿ ನೆಲೆಸಿದ್ದರು. ನಂತರ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು.
ಇದನ್ನೂ ಓದಿ:ಕ್ರೌರ್ಯಕ್ಕೆ ಎಲ್ಲೆ ಎಲ್ಲಿ? ಈ ಮಂಗನ ಸ್ಥಿತಿ ನೋಡಿ ಪಾಪ! ವಿಡಿಯೋ ವೈರಲ್‌
ಇವರು, ಲಾಹೋರ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಮಾಮೂನ್ ರಶೀದ್ ಶೇಖ್ ಅವರ ಮಾವ. ಅವರಿಗೆ ಪತ್ನಿ, ಮಗ ಮತ್ತು ಮಗಳು ಇದ್ದಾರೆ. ಇವರು ಡೋಗರ್ ಜಮಾಅತ್-ಉದ್-ದವಾಹ್ ಮುಖ್ಯಸ್ಥ ಸಯೀದ್ ಅವರ ಸಲಹೆಗಾರರಾಗಿದ್ದರು ಮತ್ತು 2008 ರ ಮುಂಬೈ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ನ್ಯಾಯಾಲಯಗಳಲ್ಲಿ ಅವರನ್ನು ಸಮರ್ಥಿಸಿಕೊಂಡರು.
ಹಫೀಜ್ ಸಯೀದ್ ಹಿಂದೊಮ್ಮೆ ಅಮೆರಿಕದ ಪ್ರಿಯ ವ್ಯಕ್ತಿಯಾಗಿದ್ದ ಎಂದು ಪಾಕಿಸ್ತಾನ ವಿದೇಶಾಂಗ ಸಚಿವರಾಗಿದ್ದ ಖವಾಜಾ ಆಫೀಸ್‌ ವಿರುದ್ಧ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು ಡೋಗರ್‌. ಹಫೀಜ್ ಪ್ರವಾದಿಗಳ ಆಜ್ಞೆಗಳನ್ನು ಅನುಸರಿಸುವ ದೇಶಭಕ್ತಿಯುಳ್ಳ ಇಸ್ಲಾಮ ಧರ್ಮದ ಪ್ರೀತಿಯುತ ಮುಸ್ಲಿಂ ವ್ಯಕ್ತಿಯಾಗಿದ್ದಾರೆ. ಆಸೀಫ್ ಅವರ ಹೇಳಿಕೆಯಿಂದ ಮಾನನಷ್ಟವಾಗಿದ್ದು, ಪಾಕಿಸ್ತಾನ ದಂಡ ಸಂಹಿತೆ 500ರ ಅಡಿಯಲ್ಲಿ ಸಚಿಚವರಿಗೆ 5 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬೇಕು ಎಂದು ಡೋಗರ್ ತಿಳಿಸಿದ್ದರು.(ಏಜೆನ್ಸೀಸ್‌)
ಪಾಕಿಸ್ತಾನದ ಷೇರು ಮಾರುಕಟ್ಟೆ ಮೇಲೆ ಉಗ್ರರ ದಾಳಿ; ಭಯೋತ್ಪಾದಕರೂ ಸೇರಿ 9 ಮಂದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
