ನವದೆಹಲಿ:ಪಶ್ಚಿಮ ವಲಯದಲ್ಲಿನ ವಾಸ್ತವ ಗಡಿ ರೇಖೆಯಿಂದ (ಎಲ್​ಎಸಿ) ಸೈನಿಕರನ್ನು ಸಂಪೂರ್ಣವಾಗಿ ವಾಪಸ್ ಪಡೆಯಲು ಹಾಗೂ ಬಾಕಿಯಿರುವ ಎಲ್ಲ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಲು ಭಾರತ ಮತ್ತು ಚೀನಾ ಒಪ್ಪಿವೆ. ಹಾಲಿ ಇರುವ ಒಡಂಬಡಿಕೆಗಳು ಹಾಗೂ ನಿಯಮಗಳಿಗೆ ಅನುಸಾರವಾಗಿ ಸಮಸ್ಯೆಯ ಪರಿಹಾರಕ್ಕೆ ಮುಂದಾಗಲು ಸಮ್ಮತಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ತಿಳಿಸಿದ್ದಾರೆ.
ಸಮಾಲೋಚನೆ ಹಾಗೂ ಸಮನ್ವಯ ಕುರಿತಂತೆ ಇರುವ ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತ ಸಮಿತಿಯೊಂದು ನಡೆಸಿದ ಸಭೆಯಲ್ಲಿ ಈ ಬಗ್ಗೆ ರ್ಚಚಿಸಲಾಗಿದೆ. ಮೇ ತಿಂಗಳಲ್ಲಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ಉದ್ಭವಿಸಿದ ನಂತರ ನಡೆದ ನಾಲ್ಕನೇ ಸಭೆ ಇದಾಗಿದೆ.
ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಅಧಿಕಾರಿಗಳ ಮೂಲಕ ನಿಕಟ ಸಂಪರ್ಕ ನಿರ್ವಹಿಸುವುದು ಅಗತ್ಯ ಎಂದು ಉಭಯ ಕಡೆಗಳ ಅಧಿಕಾರಿಗಳು ಅಭಿಪ್ರಾಯಪಟ್ಟರೆಂದು ವಿದೇಶಾಂಗ ಸಚಿವಾಲಯ ಹೇಳಿದೆ. ಒಟ್ಟಾರೆ ದ್ವಿಪಕ್ಷೀಯ ಬಾಂಧವ್ಯದ ಅಭಿವೃದ್ಧಿಗೆ ಗಡಿ ಭಾಗಗಳಲ್ಲಿ ಶಾಂತಿ ನೆಲೆಸುವುದು ಅಗತ್ಯ ಎಂದು ಉಭಯ ದೇಶಗಳ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯೋಧರನ್ನು ವಾಪಸ್ ಕರೆಸಿಕೊಳ್ಳುವ ಹಾಗೂ ಸಮಿತಿಯ ಸಭೆಗಳನ್ನು ನಡೆಸುವ ಪ್ರಕ್ರಿಯೆ ಮುಂದುವರಿಸಲು ಉಭಯ ಅಧಿಕಾರಿಗಳು ಸಮ್ಮತಿಸಿದ್ದಾರೆ.
ಅಡುಗೆ ಮಾಡಲು ರೋಬಾಟ್
ಅಡುಗೆ ತಯಾರಿಸಲು ರೋಬಾಟ್​ಗಳನ್ನು ನಿಯೋಜಿಸಲು ಹಾಗೂ ಖಾದ್ಯಗಳಲ್ಲಿ ಎಣ್ಣೆ ಅಂಶ ಕಡಿಮೆ ಮಾಡಲು ಚೀನಾ ಸೇನೆ ನಿರ್ಧರಿಸಿದೆ. ಸರಳ ಅಡುಗೆಗೆ ಆದ್ಯತೆ ನೀಡಲೂ ಅದು ಸಂಕಲ್ಪ ಮಾಡಿದೆ ಎಂದು ಸರ್ಕಾರಿ ಮಾಧ್ಯಮ ಗುರುವಾರ ವರದಿ ಮಾಡಿದೆ. ಇಂಧನ ಉಳಿತಾಯದ ಆಧುನಿಕ ಸ್ಟವ್​ಗಳ ಬಳಕೆಗೆ ಹಾಗೂ ಹಬೆಯಲ್ಲಿ ತಯಾರಿಸಿದ ಆಹಾರಗಳನ್ನು ಹೆಚ್ಚಾಗಿ ಬಳಸಲೂ ನಿರ್ಣಯಿಸಲಾಗಿದೆ.
ಮತ್ತೆ ಚೀನಾ ಮೊರೆ ಹೋದ ಪಾಕ್
ಇಸ್ಲಾಮಾಬಾದ್: ಪಾಕಿಸ್ತಾನದ ವಿದೇಶಾಂಗ ಸಚಿವ ಮೆಹಮೂದ್ ಖುರೇಷಿ ಗುರುವಾರ ಚೀನಾಕ್ಕೆ ತೆರಳಲಿದ್ದು, ಕಾಶ್ಮೀರ ವಿಚಾರದಲ್ಲಿ ಬೆಂಬಲ ಕೋರುವ ಸಾಧ್ಯತೆಯಿದೆ. ಕಾಶ್ಮೀರ ವಿಚಾರದಲ್ಲಿ ಬೆಂಬಲ ನೀಡಲು ಸೌದಿ ಅರೇಬಿಯಾ ನಿರಾಕರಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಈಗ ಚೀನಾ ಸಹಾಯ ಕೋರಲು ಮುಂದಾಗಿದೆ. ಪೂರ್ವ ಲಡಾಖ್​ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ಭವಿಸಿರುವ ಬಿಕ್ಕಟ್ಟಿನ ಕುರಿತೂ ರ್ಚಚಿಸುವ ಸಂಭವವಿದೆ. ವಿದೇಶಾಂಗ ಕಾರ್ಯದರ್ಶಿ ಸೊಹೈಲ್ ಮಹಮೂದ್ ಸಹಿತ ಹಲವು ಉನ್ನತ ರಾಜತಾಂತ್ರಿಕ ಅಧಿಕಾರಿಗಳು ಖುರೇಷಿ ಜೊತೆಗೆ ಇರಲಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + eight =
Remember me
