ನವದೆಹಲಿ:ಪೂರ್ವ ಲಡಾಖ್ ಗಡಿಯಲ್ಲಿ ಭಾರತ-ಚೀನಾ ನಡುವೆ ಸಂಘರ್ಷ ಶುರುವಾಗಿ ಕೆಲವು ತಿಂಗಳುಗಳೇ ಕಳೆದುಹೋಗಿವೆ.
ಒಂದೆಡೆ ಎರಡೂ ದೇಶಗಳ ನಡುವೆ ಸಮಸ್ಯೆ ಪರಿಹಾರಕ್ಕೆ ಮಿಲಿಟರಿ ಉನ್ನತ ಮಟ್ಟದ ಮಾತುಕತೆಗಳು ನಡೆಯುತ್ತಿವೆ. ಆದರೆ ಗಡಿಯಲ್ಲಿ ಬಿಕ್ಕಟ್ಟು ದಿನೇದಿನೆ ಹೆಚ್ಚುತ್ತಲೇ ಇದೆ. ಹೀಗಿರುವಾಗ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜಯಶಂಕರ್​ ಅವರು ಇಂದು ಗಡಿ ಸಂಘರ್ಷದ ಬಗ್ಗೆ ಮಾತನಾಡಿದ್ದಾರೆ.ಸದ್ಯ ಉಂಟಾಗಿರುವ ಭಾರತ-ಚೀನಾ ಗಡಿ ಸಂಘರ್ಷ ಹೊಸ ಸ್ವರೂಪದ್ದು. ಈ ರೀತಿ ಹಿಂದೆಂದೂ ಆಗಿರಲಿಲ್ಲ ಎಂದು ಜೈಶಂಕರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಫೇಸ್​​ಬುಕ್​ನಲ್ಲಿ ಪರಿಚಯವಾದ ಯುವತಿಯಿಂದ ಪೇಚಿಗೆ ಸಿಲುಕಿದ ಪಾದ್ರಿ; ಮೂವರ ವಿರುದ್ಧ ಎಫ್​ಐಆರ್​
ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಮಾತನಾಡಿದ ಸಚಿವರು, ಎರಡೂ ದೇಶಗಳ ನಡುವೆ ಉಂಟಾಗುತ್ತಿರುವ ಸಂಘರ್ಷ ಮುಂದೆ ಎದುರಾಗಬಹುದಾದ ದೊಡ್ಡ ವಿದ್ಯಮಾನದ ಒಂದು ಭಾಗ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಮಾತುಕತೆಯ ಅಗತ್ಯ ತುಂಬ ಇದೆ ಎಂದು ಹೇಳಿದರು.
ಈ ತಿಂಗಳ ಪ್ರಾರಂಭದಲ್ಲಿ ರಷ್ಯಾದ ಮಾಸ್ಕೋದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಸಭೆಯಲ್ಲಿ, ಜೈಶಂಕರ್​ ಅವರು ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್​ ಯಿ ಅವರೊಂದಿಗೆ ಭಾರತ-ಚೀನಾ ಗಡಿ ಸಂಘರ್ಷದ ಬಗ್ಗೆ ಮಾತುಕತೆ ನಡೆಸಿದ್ದರು. ಅದಾದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಈ ಬಗ್ಗೆ ಮಾತನಾಡುತ್ತಿದ್ದಾರೆ.ಪೂರ್ವ ಲಡಾಖ್​​ನಲ್ಲಿ ಶುರುವಾಗಿರುವ ಗಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಐದು ಅಂಶಗಳ ಯೋಜನೆಗೆ ಎರಡೂ ದೇಶಗಳು ಒಪ್ಪಿದ್ದವು. ಆದರೆ ಅದಾದ ಬಳಿಕ ಕೂಡ ಚೀನಾ ತನ್ನ ದುರ್ಬುದ್ಧಿಯನ್ನು ಮುಂದುವರಿಸುತ್ತಲೇ ಇದೆ. (ಏಜೆನ್ಸೀಸ್​)
ಮಹಿಳೆಗೆ ಸೇರಿದ ಕಾರ್ಖಾನೆಯಲ್ಲಿತ್ತು 3 ಲಕ್ಷಕ್ಕೂ ಹೆಚ್ಚು ಕಾಂಡೋಮ್: ಭಯಾನಕ ಜಾಲ ಭೇದಿಸಿದ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 10 =
Remember me
