ನವದೆಹಲಿ:ಭಾರತೀಯರ ಯೋಧರ ಮೇಲೆ ಚೀನಾ ಬರ್ಬರತೆಯನ್ನು ಮೆರೆದಿದೆ. ಪೀಪಲ್ಸ್​ ಲಿಬರೇಷನ್​ ಆರ್ಮಿಯ ಪೈಶಾಚಿಕ ಕೃತ್ಯಕ್ಕೆ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ.
ಈವರೆಗೆ ಘಟನೆ ನಡೆದ ಸ್ಥಳದ ಚಿತ್ರಗಳು ಬಿಡುಗಡೆಯಾಗಿರಲಿಲ್ಲ. ಆದರೆ, ಇದೀಗ ಯೋಧರೊಬ್ಬರು ಸೆರೆ ಹಿಡಿದಿದ್ದಾರೆನ್ನಲಾದ ವಿಡಿಯೋವೊಂದು ಭಾರಿ ವೈರಲ್​ ಆಗಿದೆ.
ದಾಳಿಯಲ್ಲಿ ಯೋಧನೊಬ್ಬ ನೆಲಕ್ಕೆ ಬಿದ್ದಿದ್ದು, ಆತನನ್ನು ರಕ್ಷಿಸಲು ಉಳಿದವರು ಗುಂಪಾಗಿದ್ದಾರೆ. ಇನ್ನುಳಿದವರಿ ಗಾಗಿ ಕೂಗುತ್ತಿದ್ದಾರೆ. ಹತ್ತಿರದಲ್ಲಿಯೇ ಮಿಲಿಟರಿ ವಾಹನವೊಂದು ನಿಂತಿದ್ದು, ಅದು ಯಾರಿಗೆ ಸೇರಿದ್ದು ಎನ್ನುವುದು ಖಚಿತವಾಗುತ್ತಿಲ್ಲ.
ಇದನ್ನೂ ಓದಿ;ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ
ವಿಡಿಯೋದಲ್ಲಿ ಸರೋವರ ಸ್ಪಷ್ಟವಾಗಿ ಕಾಣುತ್ತಿದ್ದು, ಗಾಲ್ವಾನ್​​ ಪ್ರದೇಶದ ಸರೋವರ ಎಂದು ಗೊತ್ತಾಗುತ್ತದೆ. ಇದೇ ಸರೋವರಕ್ಕೆ ಜಿಗಿದರೂ ಚೀನಿಯರು ಬಿಡದೇ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ್ದಾರೆ. ಸರೋವರದ ಅದರ ತೀರದಲ್ಲಿಯೇ ಯೋಧರು ನಿಂತಿದ್ದಾರೆ. ಸಹಾಯಕ್ಕಾಗಿ ಹಾಗೂ ಇನ್ನುಳಿದವರ ಬಗ್ಗೆ ವಿಚಾರಿಸಲು ಕೂಗುತ್ತಿರುವುದು ಎರಡೂವರೆ ನಿಮಿಷಗಳ ಈ ವಿಡಿಯೋದಲ್ಲಿದೆ.ಈ ವಿಡಿಯೋ ಮೇ ತಿಂಗಳ ಮಧ್ಯದಲ್ಲಿ ನಡೆದ ಸಂಘರ್ಷದ್ದು ಎಂದು ಹೇಳಲಾಗಿದೆ. ಮೇಲಿನಿಂದ ಕಲ್ಲು ತೂರಾಟ ಶುರುವಾಗುತ್ತಿದ್ದಂತೆ ಪ್ರತಿ ದಾಳಿ ನಡೆಸುತ್ತಿರುವುದು ಇದರಲ್ಲಿದೆ.
ಇಲ್ಲಿದೆ ವಿಡಿಯೋ ಲಿಂಕ್​……………
https://www.facebook.com/VVani4U/videos/397761067853598/?v=397761067853598
ಚೀನಾ ಸೈನಿಕರದ್ದು ಪೈಶಾಚಿಕ ಕೃತ್ಯ; ಗಾಯಾಳು ಭಾರತ ಯೋಧರು ತೆರೆದಿಟ್ಟ ಸತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 12 =
Remember me
