ನವದೆಹಲಿ:ಪೂರ್ವ ಲಡಾಖ್ ಗಡಿಯಲ್ಲಿ ಸೇನೆ ಹಿಂತೆಗೆತ ಪ್ರಕ್ರಿಯೆ ಸಂಕೀರ್ಣವಾಗಿದ್ದು, ಚೀನಾ ನಡೆಯನ್ನು ನಿರಂತರವಾಗಿ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಭಾರತ ಹೇಳಿದೆ. ಉಭಯ ದೇಶಗಳ ಸೇನಾಧಿಕಾರಿಗಳ ಸಭೆಯಲ್ಲಿ ಭಾರತ ಈ ವಿಚಾರ ಪ್ರಸ್ತಾಪ ಮಾಡಿದೆ ಎನ್ನಲಾಗಿದೆ.
ಗಡಿಯಿಂದ ಮೊದಲ ಹಂತದ ಸೇನಾ ಹಿಂತೆಗೆತ ಈಗ ಪೂರ್ಣಗೊಂಡಿದೆ. ಇದರ ಸ್ಥಿತಿಗತಿ ಹಾಗೂ ಮುಂದೆ ನಡೆಯಬೇಕಿರುವ ಕ್ರಮಗಳ ಕುರಿತು ಭಾರತ ಹಾಗೂ ಚೀನಾ ಸೇನೆಯ ಕಮಾಂಡರ್ ಹಂತದ ಅಧಿಕಾರಿಗಳ ನಡುವೆ ಮಾತುಕತೆ ನಡೆದಿವೆ. ಈ ಹಿಂದೆ ಸಭೆಯಲ್ಲಿ ಕೈಗೊಳ್ಳಲಾಗಿದ್ದ ಹಲವು ನಿರ್ಣಯಗಳನ್ನು ಚೀನಾ ಉಲ್ಲಂಘಿಸಿದೆ. ಗಡಿಯಲ್ಲಿನ ಟೆಂಟ್ ಹಾಗೂ ಬೃಹತ್ ಉಪಕರಣಗಳನ್ನು ತೆರವು ಮಾಡಲು ಸಭೆಯಲ್ಲಿ ಚೀನಾ ಈ ಹಿಂದೆ ಒಪ್ಪಿಗೆ ನೀಡಿತ್ತು. ಆದರೆ ಹಲವು ದಿನಗಳ ಬಳಿಕವೂ ಅದನ್ನು ತೆರವು ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಸೇನೆ ಹಿಂಪಡೆಯುವಿಕೆ ಕುರಿತು ನಿರಂತರ ಪರಿಶೀಲನೆ ಅಗತ್ಯ ಎಂದು ಭಾರತ ಪ್ರತಿಪಾದಿಸಿದೆ.
ಖಡಕ್ ಸೂಚನೆ:ಎಲ್​ಎಸಿಯಿಂದ ಚೀನಾ ಸೇನೆ ಹಿಂದೆ ಸರಿಯಬೇಕು. ಒಪ್ಪಂದ ಪ್ರಕಾರ ನಡೆದುಕೊಳ್ಳಬೇಕು ಎಂದು ಮಾತುಕತೆ ವೇಳೆ ಭಾರತ ಆಗ್ರಹಿಸಿದೆ. ಹಲವು ಫಿಂಗರ್ ಪಾಯಿಂಟ್, ಪ್ಯಾಂಗೊಂಗ್ ತ್ಸೊ ಸರೋವರ ಪ್ರದೇಶದಲ್ಲಿ ಚೀನಾ ಸೇನೆ ಇನ್ನೂ ಬೀಡುಬಿಟ್ಟಿದೆ. ಗಡಿ ಪ್ರದೇಶದಲ್ಲಿ ಟ್ಯಾಂಕ್​ಗಳನ್ನು ನಿಯೋಜಿಸಿದೆ.
ಚೀನಾ ಆಪ್ ಡಿಲಿಟ್ ಮಾಡಿದ ಆಪಲ್
ಜುಲೈ ತಿಂಗಳ ಆರಂಭದಿಂದ ಆಪಲ್ ಪ್ಲೇಸ್ಟೋರ್​ನಲ್ಲಿನ ಸುಮಾರು 2500 ಚೀನಾ ಆಪ್​ಗಳನ್ನು ತೆಗೆದು ಹಾಕಲಾಗಿದೆ. ಭದ್ರತಾ ವಿಚಾರ, ಲೈಸೆನ್ಸ್ ಇನ್ನಿತರ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾಗಿ ಆಪಲ್ ಕಂಪನಿ ತಿಳಿಸಿದೆ. ಇವುಗಳಲ್ಲಿ ಬಹುತೇಕ ಗೇಮ್ ಗಳಿಗೆ ಸಂಬಂಧಿಸಿದ ಆಪ್​ಗಳಾಗಿವೆ.
ಪಿಒಕೆಯಲ್ಲಿ ಹೆಚ್ಚಿದ ಚೀನಾ ಹೂಡಿಕೆ
ಪಾಕಿಸ್ತಾನ ಹಾಗೂ ಚೀನಾ ನಡುವೆ ಇತ್ತೀಚೆಗೆ ಎರಡು ಬೃಹತ್ ಒಪ್ಪಂದ ಏರ್ಪಟ್ಟಿದೆ. ಈ ಮೂಲಕ ಪಾಕ್ ಆಕ್ರಮಿತ ಪ್ರದೇಶದಲ್ಲಿ ಚೀನಾದ ಹೂಡಿಕೆ ಹೆಚ್ಚಾಗಲಿದೆ. ಒನ್ ಬೆಲ್ಟ್ ಒನ್ ರೋಡ್ ಯೋಜನೆ ಅಡಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. 3.90 ಬಿಲಿಯನ್ ಡಾಲರ್ (-ಠಿ; 29,335 ಕೋಟಿ ಡಾಲರ್) ವೆಚ್ಚದಲ್ಲಿ ಪಿಒಕೆಯಲ್ಲಿ ಚೀನಾ ಎರಡು ವಿದ್ಯುತ್ ಯೋಜನೆಗಳಲ್ಲಿ ಹೂಡಿಕೆ ಮಾಡಲಿದೆ. ಇದೇ ಪ್ರದೇಶದಲ್ಲಿ 7.20 ಬಿಲಿಯನ್ ಡಾಲರ್ (-ಠಿ; 54, 158 ಕೋಟಿ) ಮೊತ್ತದ ರೈಲ್ವೆ ಯೋಜನೆಗೂ ಚೀನಾ ಹಸಿರು ನಿಶಾನೆ ತೋರಿದೆ.
ಗಣಿತದಲ್ಲಿ ನೂರಕ್ಕೆ ನೂರು, ಉಳಿದ ವಿಷಯದಲ್ಲೂ ಉತ್ತಮ ಅಂಕ: ಆದ್ರೆ ಸಂಭ್ರಮಿಸಲು ವಿದ್ಯಾರ್ಥಿನಿಯೇ ಇಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + thirteen =
Remember me
