ನವದೆಹಲಿ/ಬೀಜಿಂಗ್:ಲಡಾಖ್​ನ ಅಂತಾರಾಷ್ಟ್ರೀಯ ಗಡಿಯಲ್ಲಿ ಸೇನಾಪಡೆ ನಿಯೋಜಿಸುವ ಜತೆಯಲ್ಲೇ ಯುದ್ಧ ಸನ್ನದ್ಧ ಸ್ಥಿತಿಯಲ್ಲಿರುವಂತೆ ತನ್ನ ಯೋಧರಿಗೆ ಕರೆಕೊಟ್ಟ ಚೀನಾ ಸವಾಲನ್ನು ದಿಟ್ಟತನದಿಂದಲೇ ಎದುರಿಸಲು ಗಟ್ಟಿ ಹೆಜ್ಜೆ ಇಟ್ಟಿರುವ ಭಾರತ ಒಟ್ಟಾರೆ ಬಿಕ್ಕಟ್ಟು ಬಗೆಹರಿಸುವ ಹೊಣೆಗಾರಿಕೆಯನ್ನು ಟ್ರಬಲ್ ಶೂಟರ್ ಖ್ಯಾತಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಂಡಕ್ಕೆ ವಹಿಸಿದೆ. ಭಾರತದ ಈ ತಿರುಗೇಟಿಗೆ ಒಂದೇ ದಿನದಲ್ಲಿ ಮೆದುವಾಗಿರುವ ಚೀನಾ ಗಡಿಯಲ್ಲಿನ ಸ್ಥಿತಿ ಸ್ಥಿರ ಮತ್ತು ನಿಯಂತ್ರಣದಲ್ಲಿದೆ ಎನ್ನುವ ಮೂಲಕ ಮಾತುಕತೆಯ ಪ್ರಸ್ತಾಪ ರವಾನಿಸಿದೆ.
2017ರಲ್ಲಿ ಡೋಕ್ಲಾಂನಲ್ಲಿ ಉದ್ಭವಿಸಿದ್ದ ಸಮಸ್ಯೆಯನ್ನು ಬಗೆಹರಿಸಿದ್ದ ತಂಡವನ್ನೇ ಲಡಾಖ್​ನ ದೌಲತ್ ಬೇಗ್ ಓಲ್ಡಿ ವಲಯದಲ್ಲಿ ಉಂಟಾಗಿರುವ ಬಿಕ್ಕಟ್ಟು ನಿವಾರಣೆಗೆ ಪ್ರಧಾನಿ ನರೇಂದ್ರ ಮೋದಿ ನಿಯೋಜಿಸಿರುವುದಾಗಿ ತಿಳಿದು ಬಂದಿದೆ. ಅಜಿತ್ ದೋವಲ್, ಮೂರೂ ಪಡೆಗಳ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ (ಆಗ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು) ಈ ತಂಡದಲ್ಲಿದ್ದಾರೆ.
ರಕ್ಷಣಾ ವಿಷಯದಲ್ಲಿ ಅಪಾರ ಅನುಭವ ಹೊಂದಿರುವ ದೋವಲ್, ತಂತ್ರಗಾರಿಕೆಯಲ್ಲೂ ನಿಪುಣರಾಗಿದ್ದಾರೆ. ಎಷ್ಟೇ ಕಠಿಣ ಸನ್ನಿವೇಶವನ್ನೂ ನಿಭಾಯಿಸುವ ಸಾಮರ್ಥ್ಯ ಇವರಿಗಿದೆ. ವಿದೇಶಾಂಗ ಸೇವೆಯ ಹಿರಿಯ ಅಧಿಕಾರಿಯಾಗಿದ್ದ ಜೈಶಂಕರ್ 2009ರಿಂದ 2013ರವರೆಗೆ ಚೀನಾದಲ್ಲಿ ಭಾರತದ ರಾಯಭಾರಿಯಾಗಿದ್ದರು. ಹೀಗಾಗಿ ಚೀನಾದ ಮರ್ಮ ಜೈಶಂಕರ್​ಗೆ ಕರತಲಾಮಲಕವಾಗಿದೆ. ಮುನ್ನುಗ್ಗುವ ಮನೋಗುಣದ ಜನರಲ್ ರಾವತ್ 2017ರಲ್ಲಿ ಭೂಸೇನೆಯ ಮುಖ್ಯಸ್ಥರಾಗಿದ್ದರು. ಈ ಮೂವರೂ ಪ್ರಧಾನಿ ಮೋದಿ ಮಂಗಳವಾರ ರಾತ್ರಿ ನಡೆಸಿದ ತುರ್ತು ಸಭೆಯಲ್ಲಿ ಭಾಗವಹಿಸಿದ್ದರು. ಶಾಂತಿ ಮಾತುಕತೆಗೆ ಚೀನಾ ಬೆಲೆ ಕೊಡದಿದ್ದಲ್ಲಿ ಅವರದ್ದೇ ದಾರಿಯಲ್ಲಿ ಪ್ರತ್ಯುತ್ತರ ನೀಡಬೇಕೆಂಬ ವಿಚಾರ ಚರ್ಚೆಯಾಗಿರುವುದಾಗಿ ತಿಳಿದು ಬಂದಿದೆ.
ನಿಪುಣ ತಂಡ ರವಾನೆ:ಲಡಾಖ್​ನಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಸೇನೆಗೆ ಸಮರ್ಥ ಪ್ರತ್ಯುತ್ತರ ನೀಡಲು ಗಿರಿ-ಕಂದರ ಪ್ರದೇಶದ ಸಮರದಲ್ಲಿ ಪಳಗಿದ ತುಕಡಿಯನ್ನೇ ನಿಯೋಜಿಸಲಾಗಿದೆ. ತುಕಡಿಗೆ ಟಿಬೆಟ್​ನ ಭೂಪ್ರದೇಶದ ಬಗ್ಗೆ ಸ್ಪಷ್ಟವಾಗಿ ಗೊತ್ತಿರುವ ಕಾರಣ ಚೀನಾ ಸೇನೆ ದೌಲತ್ ಬೇಗ್ ಓಲ್ಡಿ ವಲಯದಲ್ಲಿ ರಸ್ತೆ ಕಾಮಗಾರಿ ಮುಂದುವರಿಸುವುದು ಅಸಾಧ್ಯ ಎಂದು ಸೇನಾ ಮೂಲಗಳು ತಿಳಿಸಿವೆ.
ಸೇನೆ ನಿರ್ಧಾರಕ್ಕೆ ಬೆಂಬಲ:ಗಡಿ ಸುರಕ್ಷತೆಗಾಗಿ ಸೇನೆ ಕೈಗೊಳ್ಳುವ ನಿರ್ಧಾರಕ್ಕೆ ಕೇಂದ್ರದ ಸಂಪೂರ್ನ ಬೆಂಬಲ ಇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದರೆ, ಕಮಾಂಡರ್​ಗಳ ಸಭೆಯಲ್ಲಿ ಕೈಗೊಳ್ಳುವ ನಿರ್ಣಯದ ಆಧಾರದ ಮೇಲೆ ಸೇನಾ ತಂತ್ರಗಾರಿಕೆ ರೂಪಿಸುವುದಾಗಿ ಭೂ ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಸಂಘರ್ಷದ ಹೆಜ್ಜೆ ಗುರುತು
* ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಆದ ಬಳಿಕ ಭಾರತ ಈ ಭಾಗದ ಗಡಿಯಲ್ಲಿ ರಸ್ತೆ ನಿರ್ಮಾಣ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದೆ. ಲಡಾಖ್ ಮೇಲೆ ಹಿಡಿತ ಸಾಧಿಸಲು ಬಯಸಿದ್ದ ಚೀನಾ ಈ ಬೆಳವಣಿಗೆಯಿಂದ ಕೆರಳಿತ್ತು
* ಪೂರ್ವ ಲಡಾಖ್​ನಲ್ಲಿ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಕೂಡಲೇ ನಿಲ್ಲಿಸಬೇಕೆಂದು ಚೀನಾ ಭಾರತಕ್ಕೆ ಬೆದರಿಕೆ ಹಾಕಿತು
* ಚೀನಾ ಕೋರಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿರಸ್ಕರಿದ ಬಳಿಕ ಚೀನಾ ಗಡಿಯಲ್ಲಿ 2500ಕ್ಕೂ ಹೆಚ್ಚು ಯೋಧರನ್ನು ನಿಯೋಜಿಸಿತು
* ತಾತ್ಕಾಲಿಕ ಮೂಲಸೌಕರ್ಯ ವಿಸ್ತರಣೆ ಉದ್ದೇಶದಿಂದ ಭಾರಿ ಯಂತ್ರೋಪಕರಗಳನ್ನು ಪ್ರತಿಷ್ಠಾಪಿಸಿತು
* ಚೀನಾದ ಈ ನಡೆಗೆ ಸೆಡ್ಡು ಹೊಡೆದ ಭಾರತ ಕೂಡ ಚೀನಾಗಿಂತ ಹೆಚ್ಚಿನ ಸಂಖ್ಯೆಯ ಯೋಧರನ್ನು ಗಡಿಯಲ್ಲಿ ನಿಯೋಜಿಸಿತು
* ಮೇ 5,6ರಂದು ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ಏರ್ಪಟ್ಟಿತು, ಈ ಸ್ಥಳದಿಂದ 200 ಕಿ.ಮೀ ದೂರದಲ್ಲಿ ಚೀನಾ ವಾಯುನೆಲೆ ಸ್ಥಾಪಿಸುತ್ತಿದೆ. 4ಫೈಟರ್ ಜೆಟ್, ಯುದ್ಧ ಕಾಪ್ಟರ್​ಗಳನ್ನು ನಿಯೋಜಿಸಿರುವುದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ
ಜನರಲ್ ನರಾವಣೆ ಸಭೆ
ಲಡಾಖ್ ಗಡಿಯಲ್ಲಿ ಉಭಯ ದೇಶಗಳ ಸೇನೆಗಳು ಎದಿರು ಬದಿರಾಗಿರುವ ಹಿನ್ನೆಲೆಯಲ್ಲಿ ಭೂಸೇನಾ ಮುಖ್ಯಸ್ಥ ಎಂ.ಎಂ. ನರಾವಣೆ ಸೇನೆಯ ಹಿರಿಯ ಕಮಾಂಡರ್​ಗಳ ಜತೆಗಿನ ಎರಡು ದಿನದ ಸಭೆಯನ್ನು ದೆಹಲಿಯಲ್ಲಿ ಆರಂಭಿಸಿದ್ದಾರೆ.
ಭಾರತದ ಬಲ, ಹಿನ್ನಡೆ
ಚೀನಾ ಬಲ, ಹಿನ್ನಡೆ
ಪಾಕಿಸ್ತಾನದ ಜತೆಗೆ ನೇಪಾಳದಿಂದ ಸಿಕ್ಕಿರುವ ಪರೋಕ್ಷ ಬೆಂಬಲ
ಯುದ್ಧ ಅಸಾಧ್ಯ ಏಕೆಂದರೆ…
ಗಡಿ ಒಪ್ಪಂದಕ್ಕೆ ಬದ್ಧ: ಅಧ್ಯಕ್ಷರ ಹೇಳಿಕೆಗೆ ಚೀನಾ ತೇಪೆ
ಬೀಜಿಂಗ್: ಭಾರತದ ಗಡಿಯಲ್ಲಿನ ಸ್ಥಿತಿ ಸ್ಥಿರ ಮತ್ತು ನಿಯಂತ್ರಣದಲ್ಲಿದ್ದು, ಬಿಕ್ಕಟ್ಟು ನಿವಾರಿಸಲು ಭಾರತ ಮತ್ತು ಚೀನಾ ರಾಜತಾಂತ್ರಿಕ ಮಾರ್ಗ ಮತ್ತು ಸೂಕ್ತ ಸಂವಹನದ ಮೂಲಕ ಪ್ರಯತ್ನಿಸಲಾಗಿದೆ ಎಂದು ಎಂದು ಚೀನಾ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಲಡಾಖ್​ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಬಳಿ ಉದ್ವಿಗ್ನತೆ ಮತ್ತು ದೇಶದ ಸಾರ್ವಭೌಮತ್ವ ರಕ್ಷಣೆಗೆ ಯಾವುದೇ ಸನ್ನಿವೇಶ ಎದುರಿಸಲು ಸನ್ನದ್ಧವಾಗಿರಬೇಕು. ಆದ್ದರಿಂದ ಯುದ್ಧ ತರಬೇತಿ ಹೆಚ್ಚಳ ಮಾಡಿ ಎಂದು ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಕರೆ ನೀಡಿರುವ ಹಿನ್ನೆಲೆ ವಿದೇಶಾಂಗ ಸಚಿವಾಲಯ ಈ ಹೇಳಿಕೆ ನೀಡಿದೆ.
ಉಭಯ ದೇಶಗಳ ಮುಖಂಡರ ಈ ಹಿಂದಿನ ಭೇಟಿ ವೇಳೆ ಗಡಿ ವಿಷಯದಲ್ಲಿ ಆಗಿರುವ ಒಪ್ಪಂದವನ್ನು ಎರಡೂ ದೇಶಗಳು ಕಡ್ಡಾಯವಾಗಿ ಅನುಸರಿಸುವುದು ಈ ಹೊತ್ತಿನ ಅತ್ಯಗತ್ಯ ಎಂದು ಸಚಿವಾಲಯದ ವಕ್ತಾರ ಜಹಾಯೋ ಲಿಜಿಯಾನ್ ನೆನಪಿಸಿದ್ದಾರೆ.
ಕಳೆದ ಅಕ್ಟೋಬರ್​ನಲ್ಲಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಭೇಟಿ ವೇಳೆ ಗಡಿಯಲ್ಲಿ ಶಾಂತಿ, ಸ್ಥಿರತೆ ಕಾಯ್ದುಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿತ್ತು.
ಮಧ್ಯಸ್ಥಿಕೆಗೆ ಸಿದ್ಧ ಎಂದ ಟ್ರಂಪ್
ಭಾರತ-ಚೀನಾ ಮಧ್ಯೆ ಉದ್ವಿಗ್ನತೆ ಹೋಗಲಾಡಿಸಲು ತಾವು ಮಧ್ಯಸ್ಥಿಕೆ ವಹಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಎರಡೂ ದೇಶಗಳು ಬಯಸುವುದಾದರೆ ಬಿಕ್ಕಟ್ಟು ಹೋಗಲಾಡಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದಾರೆ. ಈ ಹಿಂದೆ ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕ್ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಟ್ರಂಪ್ ಎರಡು ಸಾರಿ ಹೇಳಿದ್ದರು. ಆದರೆ ಭಾರತವು ಕಾಶ್ಮೀರ ವಿಷಯದಲ್ಲಿ ಮಾತುಕತೆಗೆ ಮೂರನೇ ದೇಶದ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಟ್ರಂಪ್ ಪ್ರಸ್ತಾವವನ್ನು ತಳ್ಳಿಹಾಕಿತ್ತು.
‘ಗಡಿ ವಿವಾದ ಸಂಬಂಧವನ್ನು ಹಾಳುಗೆಡುವದಿರಲಿ’: ಮಾತುಕತೆಯತ್ತ ಒಲವು ತೋರಿದ ಚೀನಾ ರಾಯಭಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
