ಬೆಂಗಳೂರು:ಓರ್‌ಮ್ಯಾಕ್ಸ್‌ ಸಂಸ್ಥೆ ಭಾರತದ ಟಾಪ್‌ 10 ಹೀರೋಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟಾಲಿವುಡ್‌ ಸ್ಟಾರ್‌ ದಳಪತಿ ವಿಜಯ್‌ ಮೊದಲ ಸ್ಥಾನದಲ್ಲಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌ ಸ್ಟಾರ್‌ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ.
ಪ್ಯಾನ್‌ ಇಂಡಿಯಾ ಲೆವಲ್‌ನಲ್ಲಿ ಸೌಂಡ್‌ ಮಾಡುವ ಮೂಲಕ ಕೆಜಿಎಫ್‌ ಭಾರತದಾದ್ಯಂತ ಕನ್ನಡದ ಪತಾಕೆ ಹಾರಿಸಿತ್ತು. ಅದರಂತೆ ಯಶ್‌ ಸಹ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಿದ್ದಾರೆ. ಸದ್ಯ ಓರ್‌ಮ್ಯಾಕ್ಸ್‌ ನಡೆಸಿದ ಹಲವು ಸಮೀಕ್ಷೆಗಳ ಪೈಕಿ ಭಾರತದ ಟಾಪ್‌ ಹೀರೋಗಳ ಪಟ್ಟಿಯೂ ಒಂದು. ಇದರಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌ ಸಿನಿರಂಗಗಳ ನಟರ ಸ್ಕೋರ್‌ಗಳು ಇವೆ.
ಪಟ್ಟಿಯನ್ನು ನೋಡುವುದಾದರೆ, ಮೊದಲನೇ ಸ್ಥಾನದಲ್ಲಿ ದಳಪತಿ ವಿಜಯ್, ಎರಡನೇ ಸ್ಥಾನದಲ್ಲಿ ಪ್ರಭಾಸ್‌ ಹಾಗೂ ಮೂರನೇ ಸ್ಥಾನದಲ್ಲಿ ಜ್ಯೂ. ಎನ್‌ಟಿಆರ್‌, ಇನ್ನು ನಾಲ್ಕನೇ ಪ್ಲೇಸ್‌ನಲ್ಲಿ ಅಲ್ಲು ಅರ್ಜುನ್‌ ಇದ್ದಾರೆ. ಕೆಜಿಎಫ್‌ ಮೂಲಕ ಭಾರತದಾದ್ಯಂತ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದ ಯಶ್‌ ಐದನೇ ಸ್ಥಾನದಲ್ಲಿ ಮಿಂಚಿದ್ದಾರೆ. ಇನ್ನು 6ನೇ ಸ್ಥಾನದಲ್ಲಿ ಅಕ್ಷಯ್‌ ಕುಮಾರ್‌, 7ನೇ ಸ್ಥಾನದಲ್ಲಿ ರಾಮ್‌ ಚರಣ್‌, 8ನೇ ಸ್ಥಾನದಲ್ಲಿ ಮಹೇಶ್‌ ಬಾಬು, 9ನೇ ಸ್ಥಾನದಲ್ಲಿ ಸೂರ್ಯ, 10ನೇ ಸ್ಥಾನದಲ್ಲಿ ಅಜಿತ್‌ಕುಮಾರ್‌ ಇದ್ದಾರೆ.
ಕೆಜಿಎಫ್ 2 ಯಶಸ್ಸಿನ ಮೂಲಕ ಯಶ್‌ ಅಪಾರ ಫ್ಯಾನ್ಸ್‌ ಹೊಂದಿದ್ದಾರೆ. ಅಲ್ಲು ಅರ್ಜುನ್​ ಅವರಿಗೆ ಮೊದಲಿನಿಂದಲೂ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಅವರ ‘ಪುಷ್ಪಾ’ ಸಿನಿಮಾ ಭಾರಿ ಪ್ರದರ್ಶನ ಕಂಡಿತು. ಅಲ್ಲದೆ, ಎನ್‌ಟಿಆರ್‌ ಹಾಗೂ ರಾಮ್‌ ಚರಣ ಅಭಿನಯದ ʼಆರ್‌ಆರ್‌ಆರ್‌ʼ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಪ್ರಭಾಸ್‌ ಸತತ ಸೋಲನ್ನು ಅನುಭವಿಸಿದರೂ ಸಹ ಎರಡನೇ ಸ್ಥಾನದಲ್ಲಿ ಇದ್ದಾರೆ.
ದೇಶಾದ್ಯಂತ 93 ಸ್ಥಳಗಳಲ್ಲಿ ಎನ್​​ಐಎ ದಾಳಿ: ನೂರಾರು ಪಿಎಫ್​ಐ ಕಾರ್ಯಕರ್ತರ ಬಂಧನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 16 =
Remember me
