ನವದೆಹಲಿ:ಕರೊನಾ ನಿಯಂತ್ರಣಕ್ಕಾಗಿ ಮಾರ್ಚ್ 24ರಿಂದ 21 ದಿನಗಳ ಕಾಲ ದೇಶವ್ಯಾಪಿ ಲಾಕ್​ಡೌನ್ ವಿಧಿಸಿದ್ದರೂ ಭಾರತದಲ್ಲಿ ಪಾಸಿಟಿವ್ ಪ್ರಕರಣಗಳು ಏರುತ್ತಿದೆ. ಆದರೆ ಅಮೆರಿಕ, ಇಟಲಿ, ಸ್ಪೇನ್, ಇರಾನ್, ಫ್ರಾನ್ಸ್ ಮತ್ತು ಚೀನಾದಂತೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಜಿಗಿತ ಕಾಣದಿರುವುದು ತುಸು ಸಮಾಧಾನ ತಂದಿದೆ. ಭಾರತದಲ್ಲಿ ಕರೊನಾ ವೈರಸ್ ದೃಢಪಟ್ಟ ಮೊದಲ ಪ್ರಕರಣ ವರದಿಯಾಗಿದ್ದು 2020 ಜನವರಿ 30ರಂದು. ಮಾರ್ಚ್ ಆರಂಭದಿಂದ ಸೋಂಕಿನ ಪ್ರಕರಣ ಜಾಸ್ತಿಯಾಗತೊಡಗಿತು. ಇಟಲಿ, ಇರಾನ್ ಮತ್ತು ಚೀನಾಗಳಲ್ಲಿ ಐದನೇ ವಾರದಿಂದ ಪ್ರಕರಣ ಜಾಸ್ತಿಯಾಗಲು ಆರಂಭವಾಗಿತ್ತು. ಭಾರತ ಮತ್ತು ಫ್ರಾನ್ಸ್​ನಲ್ಲಿ ಆರನೇ ವಾರ ಹೆಚ್ಚಿನ ಪಾಸಿಟಿವ್ ಪ್ರಕರಣ ದಾಖಲಾದವು. ಭಾರತದಲ್ಲಿ ಮೊದಲಿಗೆ ವರದಿಯಾದ ಸಮಾರು ಎರಡು ತಿಂಗಳ ನಂತರ ಸೋಂಕು ಪ್ರಕರಣ ಜಾಸ್ತಿಯಾಗಲು ಆರಂಭವಾಗಿತ್ತು. ಆದರೆ ಅಮೆರಿಕ, ಇಟಲಿ, ಚೀನಾ, ಫ್ರಾನ್ಸ್ ಮತ್ತು ಸ್ಪೇನ್​ನಲ್ಲಿ ಎರಡನೇ ಹಾಗೂ ಆರನೇ ವಾರದ ನಡುವೆ ನಾಟಕೀಯ ರೀತಿಯಲ್ಲಿ ಕೇಸ್​ಗಳು ದಾಖಲಾದವು.
ಎರಡುತಿಂಗಳು
ಭಾರತಕ್ಕೆ ಕರೊನಾ ಮಾರಿ ಕಾಲಿಟ್ಟು ಎರಡು ತಿಂಗಳಾಗಿದೆ. ಮೊದಲ ನಾಲ್ಕು ವಾರ ಪ್ರಕರಣಗಳು ಏಕಪ್ರಕಾರವಾಗಿದ್ದು ಅದರ ನಂತರದ ವಾರಗಳಲ್ಲಿ ಹೆಚ್ಚತೊಡಗಿತು. ಮೊದಲ ವಾರದಲ್ಲಿ ದೇಶದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮೂರು ಆಗಿದ್ದು ನಾಲ್ಕನೇ ವಾರದವರೆಗೆ ಹಾಗೇ ಇತ್ತು. ಐದನೇ ವಾರದಲ್ಲಿ ಪಾಸಿಟಿವ್ ಪ್ರಕರಣಗಳು 34ಕ್ಕೆ ಏರಿತು. ಮುಂದಿನ ಒಂದು ವಾರದಲ್ಲಿ ಅದು ಮೂರು ಪಟ್ಟಾಗಿ ಸೋಂಕಿತರ ಸಂಖ್ಯೆ 101 ಆಯಿತು. ಏಳನೇ ವಾರದಲ್ಲಿ 223ಕ್ಕೆ ಏರಿತು. ಎಂಟನೇ ವಾರದಲ್ಲಿ ಕೂಡ ತ್ರಿಗುಣಗೊಂಡು 724ಕ್ಕೇರಿತು. ಒಂಬತ್ತನೇ ವಾರದಲ್ಲಿ, ಲಾಕ್​ಡೌನ್ ಜಾರಿಯ ನಡುವೆಯೂ ಏರುತ್ತಲೇ ಹೋಗಿ 1,112ಕ್ಕೆ ತಲುಪಿತು. 10ನೇ ವಾರದಲ್ಲಿ ಸಂಖ್ಯೆ ಗಗನಮುಖಿಯಾಗಿ ಏರಿ ನಾಲ್ಕು ಪಟ್ಟಾಗಿ 4,125ಕ್ಕೆ ತಲುಪಿತು.
ಚೀನಾ:ಸೋಂಕು ಆರಂಭವಾದ ಚೀನಾದಲ್ಲಿ ಮೊದಲ ವಾರ ಕಾಣಿಸಿಕೊಂಡಿದ್ದು 278 ಪ್ರಕರಣಗಳು. ಎರಡನೇ ವಾರಕ್ಕೆ 2761ಕ್ಕೇರಿ ಮೂರನೇ ವಾರ 17238ಕ್ಕೆ ತಲುಪಿತು. ನಾಲ್ಕನೇ ವಾರ 40235, ಐದನೇ ವಾರ 70635, ಆರನೇ ವಾರ 77262, ಏಳನೇ ವಾರ 80174 ಪ್ರಕರಣ ವರದಿಯಾದವು. ಎಂಟನೇ ವಾರದಲ್ಲಿ 80904, ಒಂಬತ್ತನೇ ವಾರ 81077, ಹತ್ತನೇ ವಾರದಲ್ಲಿ 81601, 11ನೇ ವಾರ 82351 ಹಾಗೂ 12ನೇ ವಾರ 82930ಕ್ಕೆ ತಲುಪಿತ್ತು.
ಫ್ರಾನ್ಸ್:ಮೊದಲ ಹಾಗೂ ಎರಡನೇ ವಾರದಲ್ಲಿ ಆರು, ಮೂರನೇ ವಾರದಲ್ಲಿ 11, ನಾಲ್ಕನೇ ವಾರ 12, ಐದನೇ ವಾರ 38, ಆರನೇ ವಾರ 420 ಪ್ರಕರಣ ಕಂಡವು. ಏಳನೇ ವಾರದಲ್ಲಿ 2860, ಎಂಟನೇ ವಾರದಲ್ಲಿ 9043, ಒಂಬತ್ತನೇ ವಾರ 28,786, ಹತ್ತನೇ ವಾರದಲ್ಲಿ 37145 ಹಾಗೂ 11ನೇ ವಾರದಲ್ಲಿ 67757 ಪ್ರಕರಣಗಳು ದಾಖಲಾದವು.
ಇಟಲಿ:ಸಾಂಕ್ರಾಮಿಕ ರೋಗದಿಂದ ಹೆಚ್ಚು ತೊಂದರೆಗೊಳಗಾದ ದೇಶಗಳಲ್ಲಿ ಒಂದಾದ ಇಟಲಿಯಲ್ಲಿ ಮೊದಲೆರಡು ವಾರ ದಾಖಲಾಗಿದ್ದು ಕೇವಲ ಎರಡು ಪಾಸಿಟಿವ್ ಪ್ರಕರಣ. ಮೂರನೇ ವಾರದಲ್ಲಿ 400, ನಾಲ್ಕನೇ ವಾರದಲ್ಲಿ 3089, ಐದನೇ ವಾರ 12462, ಆರನೇ ವಾರ 31506, ಏಳನೇ ವಾರ 74386, ಎಂಟನೇ ವಾರ 92472 ಹಾಗೂ ಒಂಬತ್ತನೇ ವಾರ 124632 ಪ್ರಕರಣಗಳು ದಾಖಲಾದವು.
ಇರಾನ್:ಎರಡನೇ ವಾರದಿಂದಲೇ ಸೋಂಕಿತರ ಪ್ರಕರಣ ಹೆಚ್ಚತೊಡಗಿತು. ಮೊದಲ ವಾರ ಅಲ್ಲಿದ್ದದ್ದು 95 ಪ್ರಕರಣ, ಎರಡನೇ ವಾರ 2336, ಮೂರನೇ ವಾರ 8042, ನಾಲ್ಕನೇ ವಾರ 16169, ಐದನೇ ವಾರ 24811, ಆರನೇ ವಾರ 35408 ಮತ್ತು ಏಳನೇ ವಾರ 55743 ಸೋಂಕಿತರಿದ್ದರು.
ಅಮೆರಿಕ:ಮೊದಲ ವಾರ 11 ಪ್ರಕರಣ, ಎರಡನೇ ವಾರ 13, ಮೂರನೇ ವಾರ 15, ನಾಲ್ಕನೇ ವಾರ 53, ಐದನೇ ವಾರ 108, ಆರನೇ ವಾರ 696, ಏಳನೇ ವಾರ 3536, ಎಂಟನೇ ವಾರ 51,914, ಒಂಬತ್ತನೇ ವಾರ 1,03,321 ಪ್ರಕರಣ ದಾಖಲಾದವು. ಹತ್ತನೇ ವಾರದಲ್ಲಿ ಅದು 1,22,653ಕ್ಕೇರಿತು. 11ನೇ ವಾರದಲ್ಲಿ ಅದು ಬಲೂನಿನಂತೆ ಊದಿಕೊಂಡು 2,73,808ಕ್ಕೆ ತಲುಪಿತು.
ಸ್ಪೇನ್:ಮೊದಲ ಮೂರು ವಾರ ಸೋಂಕಿನ ಪ್ರಕರಣ ಎರಡು ಮಾತ್ರ. ನಾಲ್ಕನೇ ವಾರ ಹೆಚ್ಚಲು ಆರಂಭವಾಗಿ 45ಕ್ಕೆ ಏರಿತು. ಐದನೇ ವಾರ 589, ಆರನೇ ವಾರ 7753, ಏಳನೇ ವಾರ 28572, ಎಂಟನೇ ವಾರ 72248 ಮತ್ತು ಒಂಬತ್ತನೇ ವಾರ 124736 ಆಗಿತ್ತು.
ಬ್ರಿಟಿಷ್ ಪ್ರಧಾನಿ ಬೋರಿಸ್ ಆರೋಗ್ಯ ಸ್ಥಿರ
ಲಂಡನ್: ಕರೊನಾ ಸೋಂಕಿಗೆ ಒಳಗಾಗಿರುವ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಲಂಡನ್​ನ ಸೇಂಟ್ ಥಾಮಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ತಿಳಿಸಿದ್ದಾರೆ. ಬೋರಿಸ್ ಜಾನ್ಸನ್ ಅವರು ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಮುಂದುವರಿಸ ಲಾಗುವುದು ಎಂದು ಅಲ್ಲಿನ ವಕ್ತಾರರು ತಿಳಿಸಿದ್ದಾರೆ.
ಲಾಕ್​ಡೌನ್​ ಸಮಯದ ಸಂಚಾರಿ ಪಾಸ್​ ಬಗ್ಗೆ ಗೊಂದಲವಿದೆಯೇ? ಕೆಎಸ್​ಪಿ ನೀಡಿದ ಉಪಯುಕ್ತ ಮಾಹಿತಿ ಇಲ್ಲಿವೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
