ನವದೆಹಲಿ:ಮೊನ್ನೆಯಷ್ಟೇ 5 ಲಕ್ಷ ತಲುಪಿದ್ದ ಕರೊನಾ ಸೋಂಕಿತರ ಸಂಖ್ಯೆ ಇಂದು ಆರು ಲಕ್ಷಕ್ಕೆ ಏರಿದೆ. ತುಂಬ ಕಡಿಮೆ ಅವಧಿಯಲ್ಲೇ ಕರೊನಾ ಪ್ರಕರಣ ಲಕ್ಷಗಳಷ್ಟು ಹೆಚ್ಚುತ್ತಿರುವುದು ತೀವ್ರ ಆತಂಕ ಸೃಷ್ಟಿಸಿದೆ. ದೆಹಲಿ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಕರೊನಾ ಮಿತಿಮೀರಿದೆ.
ಇಂದು ಬೆಳಗ್ಗೆ ಆರೋಗ್ಯ ಇಲಾಖೆ ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ 5.8 ಲಕ್ಷಕ್ಕೆ ಏರಿದೆ ಎಂದು ಹೇಳಿತ್ತು. ಆದರೆ ಸಂಜೆ ಹೊತ್ತಿಗೆ ಮಹಾರಾಷ್ಟ್ರದಿಂದ 5,537 ಹೊಸ ಕರೊನಾ ಪ್ರಕರಣ ವರದಿಯಾಗಿದೆ. ದೆಹಲಿಯಲ್ಲಿ ಇಂದು 2,442 ಹೊಸ ಪ್ರಕರಣಗಳ ವರದಿಯಾಗಿದೆ. ತಮಿಳುನಾಡು ಸೇರಿ ಬಹುತೇಕ ರಾಜ್ಯಗಳಲ್ಲಿ ಒಂದೇ ದಿನದಲ್ಲಿ ಭರ್ಜರಿ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದು, ಇಡೀ ದೇಶದ ಒಟ್ಟು ಕರೊನಾ ರೋಗಿಗಳ ಸಂಖ್ಯೆ 6,00,032 ಕ್ಕೆ ತಲುಪಿದೆ.ಇದನ್ನೂ ಓದಿ:ಚೀನಾದ ಆ್ಯಪ್​​ಗಳನ್ನು ನಿಷೇಧಿಸಿದ ಭಾರತವನ್ನು ಶ್ಲಾಘಿಸಿದ ಅಮೆರಿಕ​ ವಿದೇಶಾಂಗ ಕಾರ್ಯದರ್ಶಿ
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್​ ಅವರು ಟ್ವೀಟ್​ ಮಾಡಿ, ದೇಶದಲ್ಲಿ ಕರೊನಾ ನಿಯಂತ್ರಣಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆ, ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯತೆ ಸಾಧಿಸಿದೆ. ಎಲ್ಲ ರೀತಿಯ ಸೂಕ್ತ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ. ದೇಶದಲ್ಲಿ ಕರೊನಾದಿಂದ ಚೇತರಿಸಿಕೊಳ್ಳುವವರ ದರ ಇನ್ನೂ ಒಂದು ಅಂಶ ಹೆಚ್ಚಾಗಿದ್ದು, ಶೇ.59.43ಕ್ಕೆ ಏರಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)
‘ಮಾಯಾವತಿಯವರು ಬಿಜೆಪಿಯ ವಕ್ತಾರರಾಗಿ ಬದಲಾಗುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ ಪ್ರಿಯಾಂಕಾ ಗಾಂಧಿ’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 5 =
Remember me
