ನವದೆಹಲಿ:ರಕ್ಷಣಾ ವ್ಯವಸ್ಥೆಯ ಬಲವರ್ಧನೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಅಮೆರಿಕದಿಂದ 24 ಅತ್ಯಾಧುನಿಕ ಜಲಾಂತರ್ಗಾಮಿ ನಿರೋಧಕ ಯುದ್ಧಹೆಲಿಕಾಪ್ಟರ್​​ಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದೆ.ಖರೀದಿ ಒಪ್ಪಂದದ ಒಟ್ಟಾರೆ ಮೌಲ್ಯ 1.3 ದಶಲಕ್ಷ ಡಾಲರ್​ ಆಗಿದೆ. ಇದರಲ್ಲಿ ಯುದ್ಧಹೆಲಿಕಾಪ್ಟರ್​ಗಳ ಸಂವೇದಕಗಳು, ಸಂವಹನ ವ್ಯವಸ್ಥೆ ಮತ್ತು ಹೆಲ್​​ಫೈರ್ ಕ್ಷಿಪಣಿ ಸೇರಿ ಹಲವು ಶಸ್ತ್ರಾಸ್ತ್ರಗಳು, ಎಂಕೆ 54 ಟಾರ್ಪೆಡೋಗಳು ಸ್ಟ್ರೈಕ್ ರಾಕೆಟ್ ವ್ಯವಸ್ಥೆಗಳು ಸೇರಿವೆ.
ಇದನ್ನೂ ಓದಿ:ನೋಡನೋಡುತ್ತಿದ್ದಂತೆ ಧರೆಗುರುಳಿದರು ಸ್ಕೈಡೈವರ್​​ಗಳು….!
ನಾರ್ವೆ ಕಂಪನಿ ಕಾಂಗ್ಸ್​​​ಬರ್ಗ್ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಈ ಹೆಲಿಕಾಪ್ಟರ್​​ಗಳನ್ನು ಅಭಿವೃದ್ಧಿಪಡಿಸಿದ್ದು, ನೇವಲ್ ಸ್ಟ್ರೈಕ್ ಕ್ಷಿಪಣಿಯನ್ನು (ಎನ್​ಎಸ್​ಎಂ) ಹೊಡೆದುರುಳಿಸಲು ಸಹಾಯವಾಗುವಂತೆ ಇವುಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಒಪ್ಪಂದವನ್ನು ಅಮೆರಿಕ ನೌಕಾಪಡೆ ಮೂಲಕ ನಿರ್ವಹಿಸಲಾಗುತ್ತಿದೆ. ಲಾಕ್​ಹೀಡ್​ ಮಾರ್ಟಿನ್ ಕಂಪನಿ ವಿತರಣಾ ಪ್ರಕ್ರಿಯೆಯನ್ನು ವೇಗಗೊಳಿಸಲು ಮುಂದಾಗುತ್ತಿದೆ. ಭಾರತೀಯ ನೌಕಾಪಡೆಯ ಪೈಲಟ್​ಗಳು ಮತ್ತು ಇಂಜಿನಿಯರ್​​ಗಳು ಹೆಲಿಕಾಪ್ಟರ್​ಗಳ ಚಾಲನೆ ಮತ್ತು ನಿರ್ವಹಣೆ ತರಬೇತಿ ಪಡೆಯಲಿದ್ದಾರೆ. ಎಂಎಚ್​- 60ಆರ್ ಹೆಲಿಕಾಪ್ಟರ್​ಗಳು ಅಮೆರಿಕದಿಂದ ಮುಂದಿನ ವರ್ಷ ಬರಲಿವೆ.
ಸದ್ಯಕ್ಕಿಲ್ಲ ಪ್ರಯಾಣಿಕ ರೈಲ್ವೆ ಸೇವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 10 =
Remember me
