ನವದೆಹಲಿ:ಅಪ್ಪನಿಗೆ 31 ವರ್ಷ ಜೈಲು ಶಿಕ್ಷೆ ಘೋಷಣೆಯಾದ ಬೆನ್ನಿಗೇ ಮತ್ತೊಂದು ಘೋಷಣೆ ಹೊರಬಿದ್ದಿದ್ದು, ಆ ಮೂಲಕ ಮಗನಿಗೆ ಭಯೋತ್ಪಾದಕ ಪಟ್ಟ ಅಧಿಕೃತವಾಗಿದೆ. ಇಂಥದ್ದೊಂದು ಮಹತ್ವದ ಆದೇಶವನ್ನು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದೆ.
ಮುಂಬೈನಲ್ಲಿ 2008ರ ನವೆಂಬರ್​ 26ರಂದು ನಡೆದು ಉಗ್ರದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಈ ತೈಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್​ ಸಯೀದ್​ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ನಿನ್ನೆಯಷ್ಟೇ 31 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪನ್ನು ನೀಡಿತ್ತು.
ಇದನ್ನೂ ಓದಿ:ರಾತ್ರಿ ನಾಟಕಗಳಿಗೂ ಸಂಚಕಾರ?; ಲೌಡ್​ ಸ್ಪೀಕರ್​ ವಿವಾದದ ಮತ್ತೊಂದು ಮಗ್ಗಲು..
ಇದರ ಬೆನ್ನಿಗೇ ಭಾರತದ ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಅನ್ವಯ ಹಫೀಜ್​ ಸಯೀದ್ ಪುತ್ರ ಹಫೀಜ್​ ತಲ್ಹಾ ಘೋಷಿತ ಉಗ್ರ ಎಂದು ನಿರ್ಣಯ ಹೊರಡಿಸಿದೆ.
ಇದನ್ನೂ ಓದಿ:ಮುತ್ತಲ್ಲೂ ಮೋಸ: ಐನೂರಕ್ಕೂ ಹೆಚ್ಚು ಮಂದಿಗೆ ವಂಚನೆ
ಹಫೀಜ್ ತಲ್ಹಾ ಉಗ್ರ ಸಂಘಟನೆ ಲಷ್ಕರ್​ ಈ ತೈಬಾದ ಹಿರಿಯ ನಾಯಕನಾಗಿದ್ದು, ಈತ ಭಾರತದಲ್ಲಿ ಉಗ್ರ ದಾಳಿಯನ್ನು ನಿರ್ವಹಿಸುವ, ಯೋಜಿಸುವ, ಅದಕ್ಕಾಗಿ ನೇಮಕಾತಿ ಹಾಗೂ ಹಣ ಸಂಗ್ರಹದಂಥ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ವಿವರಣೆ ನೀಡಿ ಉಗ್ರ ಎಂಬುದನ್ನು ಅಧಿಕೃತವಾಗಿ ಘೋಷಣೆ ಮಾಡಿದೆ.
26/11 ದಾಳಿಯ ಮಾಸ್ಟರ್​ಮೈಂಡ್​​ಗೆ 31 ವರ್ಷ ಜೈಲುಶಿಕ್ಷೆ!

ಇಬ್ಬರು ಮಾಜಿ ಸಿಎಂ, ಕುಂ.ವೀ. ಸೇರಿ 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + thirteen =
Remember me
