ನವದೆಹಲಿ:ಲಡಾಖ್​ನ ಪೂರ್ವ ಭಾಗದಲ್ಲಿರುವ ವಾಸ್ತವ ಗಡಿರೇಖೆಯುದ್ದಕ್ಕೂ ಉದ್ವಿಗ್ನ ಪರಿಸ್ಥಿತಿ ತಲೆದೋರಿದೆ. ಯಾವುದೇ ಕ್ಷಣದಲ್ಲಿ ಯುದ್ಧ ಸಂಭವಿಸುವ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಭಾರತ 3,488 ಕಿ.ಮೀ. ಇರುವ ಗಡಿಯುದ್ದಕ್ಕೂ ಪೂರ್ಣಪ್ರಮಾಣದ ಸೇನೆಯನ್ನು ನಿಯೋಜಿಸಿದೆ. ಎಲ್​ಎಸಿಗೆ ಹತ್ತಿರವಿರುವ ವಾಯುನೆಲೆಗಳನ್ನು ಹಾಗೂ ನೌಕಾಪಡೆಯನ್ನು ಕೂಡ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಜೂ.15ರಂದು ನಡೆದಿದ್ದ ಘರ್ಷಣೆಯ ನಂತರದಲ್ಲಿ ಮೇಲ್ನೋಟಕ್ಕೆ ಶಾಂತವಾಗಿರುವಂತೆ ಕಾಣುತ್ತಿದ್ದರೂ, ಒಳಗೊಳಗೆ ಬೇಗುದಿ ಬೇಯುತ್ತಿದೆ. ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರ ಜಮಾವಣೆಯನ್ನು ಕ್ಷಣಕ್ಷಣಕ್ಕೂ ಹೆಚ್ಚಿಸುತ್ತಿದೆ. ಇದಕ್ಕೆ ಪೂರಕವಾಗಿ ವಾಯು ಮತ್ತು ನೌಕಾಪಡೆಯನ್ನು ಕೂಡ ಅದು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆ.
ಈ ಎಲ್ಲ ವಿದ್ಯಮಾನದ ಹಿನ್ನೆಲೆಯಲ್ಲಿ ಭಾರತ ಕೂಡ ತನ್ನ ಭಾಗದ ಎಲ್​ಎಸಿ ಉದ್ದಕ್ಕೂ ಭದ್ರತೆಯನ್ನು ಹೆಚ್ಚಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು, ಯುದ್ಧೋಪಕರಣಗಳನ್ನು ನಿಯೋಜಿಸಿದೆ. ವಿಶೇಷವಾಗಿ ಕ್ಸಿನ್​ಜಿಯಾಂಗ್​ ಮತ್ತು ಟಿಬೆಟ್​ ಪ್ರದೇಶಗಳಲ್ಲಿ ಪಿಎಲ್​ಎ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿರುವ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿ ಭಾರತೀಯ ಯೋಧರ ನಿಯೋಜನೆ ಹೆಚ್ಚಾಗಿದೆ. ಉಭಯ ರಾಷ್ಟ್ರಗಳು ವೈಮಾನಿಕ ಕಣ್ಗಾವಲನ್ನು ಹೆಚ್ಚಿಸಿವೆ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಡಬ್ಲ್ಯುಡಬ್ಲ್ಯುಇ ದಿಗ್ಗಜ ಅಂಡರ್‌ಟೇಕರ್ ನಿವೃತ್ತಿ
ಜೂ.15ರಂದು ರಕ್ತಸಿಕ್ತ ಘರ್ಷಣೆ ನಡೆದಿದ್ದ ಪ್ರದೇಶದಲ್ಲಿರುವ ಭಾರತದ ಪೆಟ್ರೋಲಿಂಗ್​ ಪಾಯಿಂಟ್​ 14ರ ಸುತ್ತಮುತ್ತ ಚೀನಿಯರ ಸೇನಾ ಜಮಾವಣೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಈ ಪಾಯಿಂಟ್​ ಅನ್ನು ವಶಪಡಿಸಿಕೊಳ್ಳಲು ಗಲ್ವಾನ್​ ನಾಲೆಯನ್ನು ಚೀನಿಯರು ದಾಟಿ ಬಂದರೆ, ಪೂರ್ಣಪ್ರಮಾಣದಲ್ಲಿ ಮುಗಿಬೀಳುವಂತೆ ಅಲ್ಲಿ ನಿಯೋಜನೆಗೊಂಡಿರುವ ಯೋಧರಿಗೆ ಮಿಲಿಟರಿ ಕಮಾಂಡರ್​ಗಳು ಸೂಚನೆ ನೀಡಿದ್ದಾರೆ.
ಗಲ್ವಾನ್​ ಮತ್ತು ಶಿಯೋಕ್​ ನದಿಯ ಸಂಗಮದ ವೈ ಜಂಕ್ಷನ್​ನಲ್ಲಿ ಜೂ.16ರಂದು ಇದ್ದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜೂ.6ರಂದು ಲೆಫ್ಟಿನೆಂಟ್​ ಜನರಲ್​ ಮಟ್ಟದಲ್ಲಿ ನಡೆದ ಮಾತುಕತೆಯಲ್ಲಿ ಒಪ್ಪಿಕೊಂಡಿರುವಂತೆ ಸೇನಾಪಡೆಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಉಭಯ ರಾಷ್ಟ್ರಗಳು ಎಳ್ಳಷ್ಟೂ ಚಿಂತನೆ ನಡೆಸಿಲ್ಲ ಎಂದು ರಾಜತಾಂತ್ರಿಕ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅಕ್ಸಾಯ್​ ಚಿನ್​ ಪ್ರದೇಶದಲ್ಲಿ ಪಿಎಲ್​ಎ ಯೋಧರ ಚಲನವಲನಗಳ ಮೇಲೆ ಹಿರಿಯ ಮಿಲಿಟರಿ ಕಮಾಂಡರ್​ಗಳು ಹದ್ದಿನಕಣ್ಣಿಟ್ಟಿದ್ದಾರೆ. ಈ ಉದ್ವಿಗ್ನ ಪರಿಸ್ಥಿತಿಯನ್ನು ತಣ್ಣಗೆ ಮಾಡಲು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಒಂದು ಹಂತಕ್ಕೆ ಅಲ್ಲಿನ ಪರಿಸ್ಥಿತಿ ತಿಳಿಗೊಂಡಿದೆ. ಆದರೂ ಸೇನೆಗಳನ್ನು ಹಿಂಪಡೆಯುವಿಕೆ ಪ್ರಕ್ರಿಯೆ ಸದ್ಯ ನಡೆಯುವಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಕಣ್ಣು ಮುಚ್ಚಿ, ನಾನು ಹೇಳಿದ್ದನ್ನೇ ಹೇಳಿ: ಪಡಿತರ ಕಿಟ್​ ವಿತರಣೆ ಹೆಸರಲ್ಲಿ ನಡೀತಿದೆ ಮತಾಂತರ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 9 =
Remember me
