ಪಾಕಿಸ್ತಾನ ಮತ್ತು ಚೀನಾ ಬೆದರಿಕೆಗಳನ್ನು ಎದುರಿಸುವ ಸಲುವಾಗಿ ಭಾರತ ಆಗಸ್ಟ್ 12ರ ಶನಿವಾರದಂದು ಶ್ರೀನಗರದಲ್ಲಿ ಮೇಲ್ದರ್ಜೆಗೆರಿಸಿದ MiG -29 ಯುದ್ಧವಿಮಾನಗಳನ್ನು ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ.
ಭಾರತದ ಜತೆಗೆ ಪದೇ ಪದೇ ಕಿರಿಕ್​​ ಮಾಡಿಕೊಳ್ಳುತ್ತಿದ್ದ ಪಾಕ್​​-ಚೀನಾಕ್ಕೆ, ಭಾರತೀಯ ಸೇನೆ, ಸೈನ್ಯದ ಮೂಲಕವೇ ಖಡಕ್​​ ಉತ್ತರ ನೀಡಲು ಮುಂದಾಗಿದೆ. “ಉತ್ತರದ ರಕ್ಷಕ” ಎಂದೂ ಕರೆಯಲ್ಪಡುವ ಟ್ರೈಡೆಂಟ್ಸ್ ಸ್ಕ್ವಾಡ್ರನ್​​ನ ಮಿಗ್ -21 ಬದಲು ಮಿಗ್ -29ನ್ನು ಶ್ರೀನಗರದ ವಾಯುನೆಲೆಯಲ್ಲಿ ನಿಯೋಜನೆ ಮಾಡಲಾಗಿದ್ದು, ಇದಕ್ಕೆ ಪಾಕ್​​ -ಚೀನಾದ ಬೆದರಿಕೆಯನ್ನು ಎದುರಿಸುವ ಜಬಾಬ್ದಾರಿಯನ್ನು ನೀಡಲಾಗಿದೆ.
ಶ್ರೀನಗರವು ಕಾಶ್ಮೀರ ಕಣಿವೆಯ ಮಧ್ಯಭಾಗದಲ್ಲಿದೆ. ಇದು ಬಯಲು ಪ್ರದೇಶಕ್ಕಿಂತ ಎತ್ತರದಲ್ಲಿದ್ದು, ಹೆಚ್ಚಿನ ತೂಕ, ಅನುಪಾತ ಮತ್ತು ಕಡಿಮೆ ಪ್ರತಿಕ್ರಿಯೆ ಸಮಯವನ್ನು ಹೊಂದಿರುವ ಹಾಗೂ ಯುದ್ಧ ವಿಮಾನವನ್ನು ಲ್ಯಾಂಡ್ ಅಥವಾ ನಿಲ್ಲಿಸಲು ಉತ್ತಮ ಪ್ರದೇಶದ ಎಂದು ಸೇನೆ ಹೇಳಿದೆ. ಮಿಗ್ -29 ದೀರ್ಘ-ಶ್ರೇಣಿಯ ಕ್ಷಿಪಣಿ ಮತ್ತು ಎಲ್ಲ ಮಾನದಂಡಗಳನ್ನು ಪೂರೈಸುವ ಕಾರ್ಯತಂತ್ರವನ್ನು ಹೊಂದಿದೆ. ಇದರಿಂದಾಗಿ ನಾವು ಎರಡೂ ರಂಗಗಳಲ್ಲಿ ಶತ್ರುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದು ಭಾರತೀಯ ವಾಯುಪಡೆಯ ಪೈಲಟ್ ಸ್ಕ್ವಾಡ್ರನ್ ಲೀಡರ್ ವಿಪುಲ್ ಶರ್ಮಾ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಲೀಡರ್ ಶಿವಂ ರಾಣಾ ಈ ಬಗ್ಗೆ ಮಾತನಾಡಿದ್ದಾರೆ. ಮೇಲ್ದರ್ಜೆಗೆ ಏರಿಸಿದ ಯುದ್ಧವಿಮಾನಗಳು ರಾತ್ರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಗಾಳಿಯಿಂದ ಗಾಳಿಗೆ ಇಂಧನ ತುಂಬುವ ಸಾಮರ್ಥ್ಯವನ್ನು ಹೊಂದಿದ್ದು, ದೀರ್ಘ ವ್ಯಾಪ್ತಿಯನ್ನು ಹೊಂದಿದೆ. ಈ ವಿಮಾನದ ಅತಿದೊಡ್ಡ ಸಾಮರ್ಥ್ಯವೆಂದರೆ ಅದು ಭಾರತೀಯ ವಾಯುಪಡೆಯಿಂದ ಆರಿಸಲ್ಪಟ್ಟ ಪೈಲೆಟ್‌ಗಳು ಇದರಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಘರ್ಷಣೆಯ ಸಮಯದಲ್ಲಿ ಶತ್ರು ವಿಮಾನವನ್ನು ಜ್ಯಾಮ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
