ಜಿನೇವಾ:ಕರೊನಾ ಸಾಂಕ್ರಾಮಿಕತೆಗೆ ಬಲಿಯಾದವರ ನಿಜವಾದ ಸಂಖ್ಯೆಯನ್ನು ಬಹಿರಂಗಪಡಿಸುವ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) ಪ್ರಯತ್ನಗಳಿಗೆ ಭಾರತ ಅಡ್ಡಗಾಲು ಹಾಕುತ್ತಿದೆ ಎಂಬ ಆರೋಪಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ‘ನ್ಯೂಯಾರ್ಕ್ ಟೈಮ್್ಸ’ ಪತ್ರಿಕೆಯಲ್ಲಿ ಏಪ್ರಿಲ್ 16ರಂದು ಪ್ರಕಟವಾದ ‘ಕೋವಿಡ್​ನ ಜಾಗತಿಕ ಸಾವಿನ ಸಂಖ್ಯೆ ಬಹಿರಂಗಕ್ಕೆ ಭಾರತದ ಅಡ್ಡಿಗಾಲು’ ಎಂಬ ಲೇಖನ ಪ್ರಕಟವಾಗಿದೆ. ಜಗತ್ತಿನಾದ್ಯಂತ 2021ರ ಅಂತ್ಯದ ಹೊತ್ತಿಗೆ ಒಟ್ಟು 1.5 ಕೋಟಿಗೂ ಅಧಿಕ ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ಈ ಹಿಂದೆ ಅಂದಾಜು ಮಾಡಿದ್ದಕ್ಕಿಂತ ತುಂಬಾ ಹೆಚ್ಚಿನದ್ದು ಎಂದು ಡಬ್ಲ್ಯುಎಚ್​ಒ ಹೇಳಿದೆ. ಜಗತ್ತಿನಾದ್ಯಂತ ಕರೊನಾದಿಂದ ಮೃತಪಟ್ಟಿರುವ ಜನರ ನಿಖರವಾದ ಸಂಖ್ಯೆಯನ್ನು ತಿಳಿಯಲು ಒಂದು ವರ್ಷಕ್ಕಿಂತ ಹೆಚ್ಚು ಕಾಲ ತಜ್ಞರು ಸಂಶೋಧನೆ ಹಾಗೂ ವಿಶ್ಲೇಷಣೆ ನಡೆಸಿದ್ದಾರೆ. ಆದರೆ ಭಾರತದ ಆಕ್ಷೇಪದಿಂದಾಗಿ ಆ ವರದಿಯ ಬಿಡುಗಡೆ ವಿಳಂಬಗೊಂಡಿದೆ. ಭಾರತದಲ್ಲಿ ಮೃತಪಟ್ಟವರ ಸಂಖ್ಯೆಯ ಲೆಕ್ಕಾಚಾರದ ವಿಧಾನ ಸರಿಯಿಲ್ಲ ಎಂದು ವಾದಿಸುತ್ತಿರುವ ಭಾರತ, ಆ ವರದಿ ಬಹಿರಂಗಗೊಳ್ಳದಂತೆ ಸತತ ಪ್ರಯತ್ನ ನಡೆಸುತ್ತಿದೆ ಎಂದು ಪತ್ರಿಕೆ ಹೇಳಿದೆ.
40 ಲಕ್ಷ ಸಾವು?:ಭಾರತದಲ್ಲಿ ಕನಿಷ್ಠ 40 ಲಕ್ಷ ಜನರು ಕರೊನಾದಿಂದ ಮೃತಪಟ್ಟಿದ್ದಾರೆ ಎಂಬುದು ಡಬ್ಲ್ಯುಎಚ್​ಒ ಲೆಕ್ಕಾಚಾರವಾಗಿದೆ.
500% ಏರಿಕೆ:ದೆಹಲಿ-ರಾಷ್ಟ್ರ ರಾಜಧಾನಿ ವಲಯದಲ್ಲಿ (ಎನ್​ಸಿಆರ್) ಕಳೆದ 15 ದಿನಗಳಲ್ಲಿ ಕರೊನಾ ಹರಡುವಿಕೆ ಶೇಕಡ 500ರಷ್ಟು ಏರಿಕೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಕಳೆದ 15 ದಿನಗಳಲ್ಲಿ ತಮ್ಮ ಸಮೀಪವರ್ತಿ ವಲಯಗಳಲ್ಲಿ ಒಬ್ಬರು ಅಥವಾ ಹೆಚ್ಚು ಜನರು ಕೋವಿಡ್ ಸೋಂಕಿತರಾಗಿದ್ದಾರೆ ಎಂದು ಸಮೀಕ್ಷೆಗೆ ಪ್ರತಿಕ್ರಿಯಿಸಿದ ದೆಹಲಿ-ಎನ್​ಸಿಆರ್​ನ ಶೇಕಡ 19ರಷ್ಟು ಜನರು ತಿಳಿಸಿದ್ದಾರೆ.
ಕರೊನಾ ಸಾಂಕ್ರಾಮಿಕತೆ ವೇಳೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ದೇಶದಲ್ಲಿ ಸುಮಾರು 40 ಲಕ್ಷ ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಪ್ರಧಾನಿ ನರೇಂದ್ರ ಮೋದಿ ಯಾವತ್ತೂ ಸತ್ಯ ನುಡಿಯುವುದಿಲ್ಲ, ಬೇರೆಯವರಿಗೂ ಸತ್ಯ ಹೇಳಲು ಬಿಡುವುದಿಲ್ಲ.
| ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ವಿಧಾನವೇ ಸರಿಯಲ್ಲ:ಕರೊನಾ ಸಾವನ್ನು ಲೆಕ್ಕ ಹಾಕಲು ಡಬ್ಲ್ಯುಎಚ್​ಒ ಬಳಸಿರುವ ವಿಧಾನವನ್ನು ಭಾರತ ಪ್ರಶ್ನಿಸಿದೆ. ಭೌಗೋಳಿಕವಾಗಿ ವಿಶಾಲವಾಗಿರುವ ಹಾಗೂ ಅಗಾಧ ಜನಸಂಖ್ಯೆಯಿರುವ ಭಾರತದಂಥ ದೇಶದಲ್ಲಿ ಸಾವಿನ ಸಂಖ್ಯೆಯ ಲೆಕ್ಕಾಚಾರಕ್ಕೆ ಗಣಿತಶಾಸ್ತ್ರೀಯ ವಿಧಾನವನ್ನು ಅನ್ವಯಿಸಲಾಗದು ಎಂದಿದೆ. ಟಯರ್ ಒನ್ ದೇಶಗಳಿಂದ ನೇರವಾಗಿ ಪಡೆದ ಸಾವಿನ ಸಂಖ್ಯೆಗಳನ್ನು ವಿಶ್ಲೇಷಿಸಲು ಡಬ್ಲ್ಯುಎಚ್​ಒ ಒಂದು ಗಣಿತೀಯ ವಿಧಾನವನ್ನು ಬಳಸುತ್ತದೆ. ‘ಫಲಿತಾಂಶ ಏನೇ ಇರಬಹುದು; ಭಾರತದ ಮೂಲಭೂತ ಆಕ್ಷೇಪ ಇರುವುದು ಅಳವಡಿಸಿಕೊಂಡ ಕ್ರಮಕ್ಕೆ’ ಎಂದು ಕೇಂದ್ರ ಸರ್ಕಾರ ಹೇಳಿದೆ.
* ದಕ್ಷಿಣ ಕೊರಿಯಾದಲ್ಲಿ ಕರೊನಾ ಸೋಂಕು ಉಲ್ಬಣಿಸಿದ್ದು ಒಂದೇ ದಿನ 93,001 ಹೊಸ ಪ್ರಕರಣಗಳು ದೃಢಪಟ್ಟಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 6 =
Remember me
