ನವದೆಹಲಿ :ದೇಶದಲ್ಲಿ ಅತಿದೊಡ್ಡ ಲಸಿಕಾ ಕಾರ್ಯಕ್ರಮವಾಗಿ ಆರಂಭವಾದ ಕರೊನಾ ಲಸಿಕಾ ಅಭಿಯಾನದಲ್ಲಿ ಈವರೆಗೆ 10 ಕೋಟಿಗೂ ಹೆಚ್ಚು ಡೋಸ್​ಗಳನ್ನು ನೀಡಲಾಗಿದೆ. ಈ ರೀತಿಯಾಗಿ 10 ಕೋಟಿ ಡೋಸ್​ಗಳನ್ನು ಅತ್ಯಂತ ವೇಗದಲ್ಲಿ ನೀಡಿದ ದೇಶ ನಮ್ಮದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಭಾರತ 85 ದಿನಗಳಲ್ಲಿ 100 ಮಿಲಿಯನ್ ಡೋಸ್​ ಮಟ್ಟ ತಲುಪಿದರೆ, ಅಮೆರಿಕ ಮತ್ತು ಚೀನಾ ಇದೇ ಸಂಖ್ಯೆಯನ್ನು ಪೂರೈಸಲು ಕ್ರಮವಾಗಿ 89 ಮತ್ತು 102 ದಿನಗಳನ್ನು ತೆಗೆದುಕೊಂಡಿದ್ದವು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಬಗ್ಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯವೂ ಮಾಹಿತಿ ನೀಡಿ ‘ಕರೊನಾ ಮುಕ್ತ ಆರೋಗ್ಯವಂತ ಭಾರತದತ್ತ ಹೆಜ್ಜೆ’ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ:‘ಮಾದರಿ ನೀತಿ ಸಂಹಿತೆ ಅಲ್ಲ, ಮೋದಿ ನೀತಿ ಸಂಹಿತೆ’ ಎಂದು ಚುನಾವಣಾ ಆಯೋಗವನ್ನು ಲೇವಡಿ ಮಾಡಿದ ದೀದಿ
ಜಾಗತಿಕವಾಗಿ ನೀಡಲಾಗುತ್ತಿರುವ ಲಸಿಕೆಯ ದೈನಂದಿನ ಡೋಸ್​ಗಳ ಸಂಖ್ಯೆಯನ್ನು ಗಮನಿಸಿದರೆ, ಭಾರತವು ದಿನಕ್ಕೆ ಸರಾಸರಿ 38,93,288 ಡೋಸ್‌ಗಳನ್ನು ನೀಡುವುದರೊಂದಿಗೆ ಅಗ್ರಸ್ಥಾನದಲ್ಲಿದೆ. ಏಪ್ರಿಲ್ 10 ರ ಸಂಜೆ 7.30 ಕ್ಕೆ ಬಂದ ತಾತ್ಕಾಲಿಕ ವರದಿಯ ಪ್ರಕಾರ ದೇಶದಲ್ಲಿ ನೀಡಲಾಗಿರುವ ಕರೊನಾ ಲಸಿಕೆ ಡೋಸ್​​ಗಳ ಒಟ್ಟು ಸಂಖ್ಯೆ 10,12,84,282 ಆಗಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಈವರೆಗೆ ನೀಡಲಾಗಿರುವ ಡೋಸ್​​ಗಳಲ್ಲಿ ಶೇ. 60.62 ರಷ್ಟನ್ನು ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಧ್ಯಪ್ರದೇಶ ಮತ್ತು ಕೇರಳ – ಈ ಎಂಟು ರಾಜ್ಯಗಳಲ್ಲಿ ನೀಡಲಾಗಿದೆ ಎನ್ನಲಾಗಿದೆ.(ಏಜೆನ್ಸೀಸ್)
ಕರೊನಾ : ಸಕ್ರಿಯ ಪ್ರಕರಣಗಳಲ್ಲಿ ಇವು ಟಾಪ್​ ಟೆನ್ ಜಿಲ್ಲೆಗಳು

ಭಾರತದಲ್ಲಿ ಇಂದಿನಿಂದ ನಾಲ್ಕು ದಿನ ‘ಲಸಿಕೆ ಉತ್ಸವ’

ಶೇ. 99.3 ರಷ್ಟು ಮರ ಕಡಿಯುವ ಅರ್ಜಿಗಳಿಗೆ ಹಸಿರು ನಿಶಾನೆ; ಇದು ಗೋವಾದ ವೃಕ್ಷ ಪ್ರಾಧಿಕಾರಗಳ ಕಾರ್ಯವೈಖರಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 8 =
Remember me
